ಕುಡಿವ ನೀರಿಗೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ
ಮಾಲೂರು: ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ವಿವಿಧ ಬಡಾವಣೆಗಳ ನಿವಾಸಿಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆಯಿತು.
ಪಟ್ಟಣದ ಒಂದನೇ ವಾರ್ಡ್ ಸದಸ್ಯ ಜಾಕೀರ್ಖಾನ್ ವಾರ್ಡ್ನಲ್ಲಿ ಕೊರೆಸಲಾಗಿದ್ದ ಕೊಳವೆಬಾವಿಗೆ ಪಂಪ್ ಅಳವಡಿಸದಿದ್ದು, ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಅಧಿಕಾರಗಳ ನಿರ್ಲಕ್ಷ್ಯದಿಂದ ವಾರ್ಡ್ನಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಮುಖ್ಯಾಧಿಕಾರಿಗಳೇ ಸಮಸ್ಯೆ ಬಗ್ಗೆ ಹರಿಸಿ ಎಂದು ಅವಲತ್ತುಕೊಂಡರು. ಇದೇ ಸಂಧರ್ಭದಲ್ಲಿ ಪಟ್ಟಣದ 12 ನೇ ವಾರ್ಡ್ಸದಸ್ಯ ಸಿ.ಪಿ. ವೆಂಕಟೇಶ್ ಗೆದ್ದ ನಂತರ ವಾರ್ಡ್ಗೆ ತಲೆಹಾಕದಿದ್ದು, ವಾರ್ಡ್ನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ನಿವಾಸಿ ಮಂಜುನಾಥ್ ಆರೋಪಿಸಿದರು. ಮುಖ್ಯಾಧಿಕಾರಿಗಳು ವಾರದಲ್ಲಿ ಒಮ್ಮೆಯಾದರೂ ಪಟ್ಟಣದ ವಾರ್ಡ್ಗಳಲ್ಲಿ ಸಂಚರಿಸಿ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು. ಪುರಸಭೆ ಸದಸ್ಯೆ ಶ್ರೀವಲ್ಲಿ ರಮೇಶ್, ವೆಂಕಟೇಶ್ ವಿವಿಧ ವಾರ್ಡ್ಗಳ ನಿವಾಸಿಗಳಾದ ಮಂಜಣ್ಣ, ಮಂಜುನಾಥ್ ಬಾಬು, ದಾಸ್, ರವಿ, ಮುರಳೀಧರ್, ವೆಂಕಟಶ್ ಇದ್ದರು.
ಜಿಲ್ಲೆಯನ್ನು ಗುಡಿಸಲು ಮುಕ್ತವಾಗಿಸಲು ಮನವಿ
ಬಂಗಾರಪೇಟೆ: ಕೋಲಾರ ಜಿಲ್ಲೆಗೆ ಹೆಚ್ಚಿನ ಆಧ್ಯತೆ ಕೊಟ್ಟು ಜಿಲ್ಲೆಯನ್ನು ಗುಡಿಸಲು ಮುಕ್ತವಾಗಿಸಬೇಕೆಂದು ಒತ್ತಾಯಿಸಿ ನವಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ವಸತಿ ಸಚಿವ ಅಂಬರೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಕಲ್ಪಿಸುವ ಆಸೆ ಉಟ್ಟಿಸುತ್ತದೆ ನಂತರ ಯಾವುದನ್ನು ಬಗೆಹರಿಸುವುದಿಲ್ಲ. ಭರವಸೆ ಭರವಸೆಯಾಗಿಯೇ ಇರದೆ ಕಾರ್ಯಗತಗೊಳಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದೊಡನೆ ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವಾಗಿಸುವ ಭರವಸೆ ನೀಡಿದ್ದು, ಬಡವರಿಗೆ ವಸತಿ ಸೌಲಭ್ಯ ಒದಗಿಸಿಕೊಡಿ ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವ ಅಂಬರೀಷ್ ಹಂತ ಹಂತವಾಗಿ ಅರ್ಹರನ್ನು ಗುರುತಿಸಿ ಗುಡಿಸಲು ಮುಕ್ತ ರಾಜ್ಯ ಮಾಡಿಯೇ ತೀರುವುದಾಗಿ ಭರವಸೆ ನೀಡಿದರು ಎಂದು ವೇದಿಕೆ ಜಿಲ್ಲಾಧ್ಯಕ್ಷ ಕಾರಹಳ್ಳಿ ಚಿನ್ನಿವೆಂಕಟೇಶ್ ತಿಳಿಸಿದ್ದಾರೆ. ಈ ವೇಳೆ ವೇದಿಕೆ ರಾಜ್ಯಧ್ಯಕ್ಷ ರಾಜಗೋಪಾಲಗೌಡ, ಮಂಜುನಾಥಗೌಡ, ಸತ್ಯನಾರಾಯಣ, ಮಲ್ಲೇಶ್, ದೇವರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

