ಕೋಲಾರ

ನೀರಿಗಾಗಿ ಮಹಿಳೆಯರ ಪರದಾಟ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ನ.11
ನಗರದ 18ನೇ ವಾರ್ಡಿಗೆ ಸೇರಿದ ಸುಲ್ತಾನ್ ನಿಪ್ಪಸಂದ್ರದಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವುದರಿಂದ ಕೂಡಲೇ ನಗರಸಭೆಯಿಂದ ನೀರಿನ ಸಮಸ್ಯೆ ಮಾಡಬೇಕೆಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಹಳ್ಳವೊಂದರಲ್ಲಿ ನೀರು ಸಂಗ್ರಹಣೆಯಾಗಿದ್ದು ಜಾನುವಾರುಗಳು ಸಹ ಈ ನೀರನ್ನು ಕುಡಿಯಲು ತಿರಸ್ಕಾರ ಮಾಡುತ್ತಿದ್ದರೂ ಮಹಿಳೆಯವರು ಮತ್ತು ಮಕ್ಕಳು ವಿಧಿ ಇಲ್ಲದೆ ಹಳ್ಳದಲ್ಲಿನ ನೀರನ್ನು ಬಿಂದಿಗೆಗಳಲ್ಲಿ ತುಂಬಿಸಿಕೊಂಡು ಗಮನ ಸೆಳೆದರು.
ಕಳೆದ ಎರಡು ವಾರಗಳಿಂದ ನೀರು ಇಲ್ಲದೆ ಸಮಸ್ಯೆಯಾಗಿದೆ. ನಗರಸಭೆಯವರಿಗೆ ದೂರು ನೀಡಿದ್ದರೂ ಜನತೆಯ ಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂದು ಮಹಿಳೆಯರು ದೂರಿದರು.
ಕಲುಷಿತ ನೀರು ಬಳಕೆಯಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ, ನಗರಸಭೆಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಿ, ಸುಲ್ತಾನ್‌ನಿಪ್ಪಸಂದ್ರದಲ್ಲಿ ಹೊಸದಾಗಿ ಕೊಳವೆ ಬಾವಿಯನ್ನು ಕೊರೆಸಿ ಜನತೆಯ ದಾಹ ತೀರಿಸಲಿ ಎಂದು ಆಗ್ರಹಿಸಿದರು.
ಮಹಿಳೆಯರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಸದಸ್ಯ ಅಪ್ರೋಜ್ ಪಾಷ, ತಾವು ಸಹ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರಲ್ಲದೆ, ನಗರಸಭೆ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ನಿವಾರಣೆ ಮಾಡುವಂತೆ ಕೋರಿದರು.
ನಾಳೆಯಿಂದ ನೀರಿನ ವ್ಯವಸ್ಥೆ ಆಗದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.