ಗ್ರಾಮೀಣ ಪ್ರತಿಭೆಗಳಿಗಾಗಿ ಪೈಕಾ ಕ್ರೀಡಾಕೂಟ
ಮಾಲೂರು: ಪಟ್ಟಣದ ಆದುನೀಕ ಕ್ರೀಡಾ ಸೌಲಭ್ಯಗಳ ನಡುವೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಗ್ರಾಮೀಣ ಕ್ರೀಡಾ ಪ್ರತಿಭಾವಂತರು ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಪೈಕಾ ಕ್ರೀಡಾ ಕೊಟ ಆಯೋಜಿಸುತ್ತಿದೆ ಎಂದು ಪ್ರಾಂಶುಪಾಲ ರಾಮಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬುಧವಾರ ಆಯೋಜಿಸಿದ್ದ ಪೈಕಾ ಕ್ರೀಡಾ ಕೂಟದ ಉದ್ಘಾಟನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಸಿಗುವ ಕ್ರೀಡಾ ಸೌಲಭ್ಯಗಳು ಗ್ರಾಮೀಣ ಭಾಗದಲ್ಲಿ ಸಿಗದೆ ಇರಬಹುದು. ಆದರೆ ಪಟ್ಟಣ ವಾಸಿಗಳಿಗಿಂತ ಉತ್ತಮ ದೇಹದಾರೋಗ್ಯ ಹೊಂದಿರುವ ಗ್ರಾಮೀಣ ಕ್ರೀಡಾ ಪಟುಗಳಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಮಾತನಾಡಿ, ಉತ್ತಮ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.10 ರಷ್ಟು ಮೀಸಲಾತಿ ಸಿಗಲಿದೆ ಎಂದರು. ಸಂಘಟಕ ಬುಜ್ಜಿ ಶ್ರೀನಾಥ್, ಮುನಿನಾರಾಯಣ್ ಮಾತನಾಡಿದರು. ಇದೇ ಸಂಧರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ಥಳೀಯ ವಿವೇಕಾನಂದ ಶಿಕ್ಷಣ ಸಂಸ್ಥೆಯ ನೀರಜ್ರನ್ನು ಬುಜ್ಜಿ ಶ್ರೀನಾಥ್ ವೈಯಕ್ತಿಕವಾಗಿ ಸಾವಿರ ರು.ಗಳ ಪ್ರೋತ್ಸಾಹ ಧನ ವಿತರಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯನಾರಾಯಣ್, ಗೋವಿಂದೇಗೌಡ, ಕೃಷ್ಣಮೂರ್ತಿ, ರಾಜಣ್ಣ, ಉಪಪ್ರಾಂಶುಪಾಲ ಪಾಪಯ್ಯ, ನಾಗರಾಜ್ ಇದ್ದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ
ಶಿಡ್ಲಘಟ್ಟ: ಕನ್ನಡರಾಜ್ಯೋತ್ಸವ ಪ್ರಯುಕ್ತ ಬಸ್ ನಿಲ್ದಾಣದ ಸಲಾಪುರಮ್ಮ ದೇವಾಲಯದ ಮುಂಬಾಗದಲ್ಲಿ ಕನ್ನಡ ಧ್ವಜಾರೋಹಣವನ್ನು ಶಾಸಕ ಎಂ. ರಾಜಣ್ಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನಾಡಿನ ನೆಲ, ಜಲ, ಭಾಷೆ ಉಳಿಯಬೇಕಾದರೆ ಮಕ್ಕಳಲ್ಲಿ ನಾಡು ನುಡಿಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು. ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿಖ.ರಾ. ಖಂಡೇರಾವ್ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು.
ನಾಡ ಭಾವುಟ ಕಟ್ಟಿಕೊಂಡ ಆಟೋ, ಬೈಕ್ಗಳು ಮೆರವಣಿಗೆಗೆ ಸಾಥ್ ನೀಡಿದವು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ ವಿವಿಧ ಗ್ರಾಮಗಳಿಂದ ಅಲಂಕರಿಸಿಕೊಂಡು ಬಂದಿದ್ದ ತಾಯಿ ಭುವನೇಶ್ವರಿಯ ಉತ್ಸವ ವಾಹನಗಳು ಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡ ಪರ ಘೋಷಣೆಗಳನ್ನು ಕೂಗುವ ಮೂಲಕ ಎಲ್ಲಡೆ ಕನ್ನಡದ ಕಂಪು ಹರಡಿತ್ತು.
ಮೆರವಣಿಗೆಯಲ್ಲಿ ವಿಲಂಬಿ ವೇಶದಾರ ನೋಡುಗರನ್ನು ರಂಜಿಸಿತು. ತಾಪಂ ಅಧ್ಯಕ್ಷ ಯರಬಚ್ಚಪ್ಪ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎಂ. ನಾರಾಯಣಸ್ವಾಮಿ, ಕನ್ನಡ ಸೇನೆಯ ಜೆ.ವಿ. ವೆಂಕಟಸ್ವಾಮಿ, ಜಗದೀಶ್ ಬಾಬು, ಎಸ್.ವಿ. ನಾಗರಾಜ್ರಾವ್, ಕಂಬದಹಳ್ಳಿ ಸುರೇಂದ್ರಗೌಡ, ದಾಮೋದರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

