ಕೋಲಾರ

ನಮೋ ಸಭೆ; ಚಿಂತಾಮಣಿಯಲ್ಲಿ ಬೈಕ್ ರ್ಯಾಲಿ

Published On :

ಚಿಂತಾಮಣಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಕಾರ್ಯಕ್ರಮ ಯಶಸ್ವಿಯಾಗಲು ಮಂಗಳವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿ ಜನಸಾಮಾನ್ಯರಿಗೆ ಅರಿವು ಮೂಡಿಸಿದರು. ಪಟ್ಟಣದ ಪಾಲಿಟೆಕ್ನಿಕ್ ರಸ್ತೆಯ ತಾಲೂಕು ಬಿಜೆಪಿ ಶಾಖೆಯಿಂದ ಪ್ರಾರಂಭಗೊಂಡ ರ್ಯಾಲಿ  17 ರಂದು ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರಮೋದಿ ಕಾರ್ಯಕ್ರಮ ಯಶಸ್ವಿಯಾಗಲು  ಮೆರವಣಿಗೆ ನಡೆಸಿದರು. ನಂತರ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸತ್ಯನಾರಾಯಣಮಹೇಶ್ ಮಾತನಾಡಿದರು. ಬತ್ತಲಹಳ್ಳಿ ಶ್ರೀನಿವಾಸ್, ಗೋವಿಂದ್, ಕುರುಟಹಳ್ಳಿ ಮಂಜುನಾಥ್, ವೆಂಕಟೇಶ್, ಹೊಸೂರು ಮುನಿಯಪ್ಪ,ಪ್ರದೀಪ್, ಅರುಣ್, ಮಹೇಶ್, ಶಿವು, ರಾಜಣ್ಣ ಇದ್ದರು.

ಮಾಲೂರು ಕಾಂಗ್ರೆಸ್ ನಾಯಕ ರಾಮೇಗೌಡ ಶೀಘ್ರ ಬಿಜೆಪಿಗೆ?
ಮಾಲೂರು:
ಈ ಹಿಂದೆ ಕಾಂಗ್ರೆಸ್‌ನ ಜಿ.ಪಂ. ಮಾಜಿ ಸದಸ್ಯರಾಗಿದ್ದ ರಾಮೇಗೌಡ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಜಿ.ಇ. ರಾಮೇಗೌಡ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದು, ಶುಕ್ರವಾರ ತಾಲೂಕು ಅಧ್ಯಕ್ಷ ವೆಂಕಟೇಶ್ ನೇತೃತ್ವದಲ್ಲಿ ಸೇರಲಿದ್ದಾರೆ. ಕಾಂಗ್ರೆಸ್‌ನಿಂದ ತಮ್ಮ ರಾಜಕೀಯ ಪ್ರವೇಶ ಪಡೆದ ರಾಮೇಗೌಡರು ಜಿ.ಪಂ. ಸದಸ್ಯರಾಗಿ ಮಾಸ್ತಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕೇಂದ್ರ ಮಂತ್ರಿ ಕೆ.ಹೆಚ್. ಮುನಿಯಪ್ಪ ಅವರೊಂದಿಗಿನ ಸಂಬಂಧ ಹಳಿಸಿದ ಮೇಲೆ ಜೆಡಿಎಸ್ ಸೇರಿದ ರಾಮೇಗೌಡರು ಅಷ್ಟೇ ವೇಗದಲ್ಲಿ ಆ ಪಕ್ಷದಿಂದ ವಾಪಸಾಗಿದ್ದರು. ಕಳೆದ  ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗೆ ವಿಫಲ ಯತ್ನ ನಡೆಸಿದ್ದ ರಾಮೇಗೌಡರು, ಪಕ್ಷೇತರರಾಗಿ ಸ್ಪರ್ಧಿಸಿ 20 ಸಾವಿರ ಮತಗಳನ್ನು ಗಳಿಸಿದ್ದರು. ಇವರ ಮತಗಳಿಗೆ ಎರಡು ಬಾರಿ ಶಾಸಕರಾಗಿದ್ದ ಕೃಷ್ಣಯ್ಯ ಶೆಟ್ಟಿ ರವರ , ಸೋಲಿಗೆ ಪ್ರಮುಖ ಕಾರಣವಾಗಿತ್ತು. ತಾಲೂಕಿನ ಶೈಕ್ಷಣಿಕ ಅಭಿವದ್ಧಿಗಾಗಿ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ, ಬಡವರ ಮದುವೆಗೆ ಸಹಕಾರ ಸೇರಿದಂತೆ ತಮ್ಮ ಟ್ರಸ್ಟ್ ಮೂಲಕ ಜನಸೇವೆಯ ಕೈಕರ್ಯಗಳನ್ನು ಹಮ್ಮಿಕೊಂಡು ತಾಲೂಕಿನ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂತೋಷ್ ರವರ ಮೂಲಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರಲು ಯತ್ನಸಿರುವ ರಾಮೇಗೌಡರು ಸ್ಥಳೀಯ ಮುಖಂಡರ ವಿರೋಧದಿಂದ ಶುಕ್ರವಾರ ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ ಮಾಲೂರಿನ ಪ್ರವಾಸಿ ಮಂದಿರದಲ್ಲಿ ತಮ್ಮ ನೂರಾರು ಬೆಂಬಲಿಗರೊಡನೆ ಬಿಜೆಪಿ ಸೇರಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.