ಕೋಲಾರ

'ರಾಶ್ಚೆರುವು ಕೆರೆ ನೀರು ಚಿಂತಾಮಣಿ ಪಟ್ಟಣಕ್ಕೆ ಬಿಡಲು ಸಾಧ್ಯವಿಲ್ಲ'

Published On :

ಚಿಂತಾಮಣಿ: ಭಕ್ತರಹಳ್ಳಿ ಅರಸೀಕೆರೆ (ರಾಶ್ಚೆರುವು) ಕೆರೆಯಿಂದ ಪೈಪ್ ಲೈನ್ ಮೂಲಕ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲು ಪಣ ತೊಟ್ಟಿರುವ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕಾರ್ಯವೈಖರಿ ಬಗ್ಗೆ ಹಲವಾರು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಗಡಿಭಾಗದ ಕುಂದಲಗುರ್ಕಿ, ಕೇತನಾಯಕನಹಳ್ಳಿ, ಯಶ್ವಂತಪುರ, ಹುಸೇನ್ ಪುರ, ಕತ್ತಿರಿಗುಪ್ಪೆ, ಚಾಂಡ್ರಹಳ್ಳಿ, ಕೋನಪ್ಪಲ್ಲಿ ಮುಖಾಂತರ ಪಟ್ಟಣಕ್ಕೆ ಪೈಪ್ ಲೈನ್ ಮುಖಾಂತರ ಸುಮಾರು 12 ಕಿ.ಮೀ. ದೂರದಿಂದ ಕೆರೆ ನೀರನ್ನು ಬಳಿಸಿಕೊಳ್ಳಲಾಗುವುದಾಗಿ ಹೇಳಿಕೆ ನೀಡಿರುವ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕೂಡಲೇ ಇದನ್ನು ಕೈ ಬಿಡಬೇಕೆಂದು ತಾಪಂ ಸಮಸ್ಯ ಮುನಿಆಂಜಪ್ಪ, ನಾರಾಯಣಪ್ಪ, ಕೃಷಿಕ ಸಮಾಜದ ಸದಸ್ಯ ಆಂಜನೇಯರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಟ್ಟದ ತಪ್ಪಲಿನಿಂದ ಮಳೆ ನೀರು ಸರಾಗವಾಗಿ ಹರಿದು ಭಕ್ತರಹಳ್ಳಿ ಅರಸೀಕೆರೆ(ರಾಶ್ಚೆರುವು) ಕೆರೆಯಲ್ಲಿ ಅಲ್ಪ ನೀರು ಶೇಖರಣೆಯಾಗಿ, 4 ಗ್ರಾಪಂಗಳಾದ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ, ಗಂಜಿಗುಂಟೆ ವ್ಯಾಪ್ತಿಯ ದನ ಕರುಗಳಿಗೆ ಬೆಳೆಗಳಾಗುತ್ತಿದೆ. ಇದನ್ನು ಅರಿಯದ ಶಾಸಕರು ರೈತರ ಅಭಿಪ್ರಾಯ ಪಡೆಯದೆ ಹೇಳಿಕೆ ನೀಡಿರುವುದು ರೈತರಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.

ಸಂಭ್ರಮದಿಂದ ತುಳಸಿ ಹಬ್ಬ ಆಚರಣೆ
ಕೋಲಾರ;
ಕಿರು ದೀಪಾವಳಿ ಎಂದೇ ಕರೆಯಲ್ಪಡುವ ತುಳಸಿ ಹಬ್ಬವನ್ನು ಶುಕ್ರವಾರ ಕೋಲಾರ ನಗರದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ತುಳಸಿ ಕಟ್ಟೆಗೆ ನವ ವಧುವಿನಂತೆ ಸಿಂಗಾರ ಮಾಡಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ ಸುಹಾಸಿನಿಯರನ್ನು ಕರೆದು ತಾಂಬೂಲ ನೀಡಲಾಯಿತು. ಮನೆ ಮಂದಿ ಸೇರಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಉತ್ವಾನ ದ್ವಾದಶಿಯ ದಿನ ತುಳಿಸಿ ಪೂಜೆಯನ್ನು ಮಾಡಿದಲ್ಲಿ ಶುಭವಾಗುತ್ತದೆ ಎಂಬುದು ಪುರಾಣ ಕತೆಗಳಲ್ಲಿ ಇರುವುದರಿಂದ ಹಿಂದೂಗಳ ಮನೆಯಲ್ಲಿ ಈ ಹಬ್ಬಕ್ಕೆ ವಿಶಿಷ್ಟವಾದ ಮಹತ್ವ ನೀಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.