ಕೋಲಾರ

ಅಕ್ಷರ ದಾಸೋಹ ಅಧಿಕಾರಿಗೆ ತರಾಟೆ

Published On :

ಮಾಲೂರು: ಶಾಲಾ ಬಿಸಿಯೂಟಕ್ಕೆ ಸರಿಯಾದ ಪ್ರಮಾಣದಲ್ಲಿ ಅಕ್ಕಿ, ಬೇಳೆ, ಎಣ್ಣೆ ವಿತರಿಸದ ಅಕ್ಷರ ದಾಸೋಹ ಅಧಿಕಾರಿಯನ್ನು ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಸರಿಯಾದ ಪ್ರಮಾಣದಲ್ಲಿ ಅಕ್ಕಿ, ಬೇಳೆ, ಎಣ್ಣೆ ವಿತರಿಸದೆ ಅಕ್ಷರಾದಾಸೋಹ ಅಧಿಕಾರಿ ನಾರಾಯಣಪ್ಪ ಕರ್ತವ್ಯ ಲೋಪ ಕಾಣುತ್ತಿದ್ದು, ಕೆಲವಡೆ ತರಕಾರಿಯೇ ಕಾಣುತ್ತಿಲ್ಲ. ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಅನುಷ್ಠಾನಗೊಳಿಸಿರುವ ಯೋಜನೆ ಸದಪಯೋಗವಾಗುವಂತೆ ಮಾಡಬೇಕಾದ ಅಧಿಕಾರಿಯೇ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದರು.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಾದಿಕ್ ಖುರೇಷಿ ಮಾತನಾಡಿ, ತಾಲೂಕಿನ 125 ಅಂಗನವಾಡಿ ಕೇಂದ್ರದ ಕಟ್ಟಡಗಳಲ್ಲಿ 57 ಕಟ್ಟಡಗಳು ಶಿಥಿಲಗೊಂಡಿದ್ದು, ಅವು ಸೇರಿದಂತೆ ಪಟ್ಟಣದಲ್ಲಿ ಗುರ್ತಿಸಿರುವ ಹೂಸ 6 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಬೇಕಾಗಿದೆ ಎಂದರು.
 ತಾಪಂ ಅವರಣದಲ್ಲಿ ವ್ಯರ್ಥವಾಗಿರುವ ಮೀನುಗಾರಿಕೆ ತೊಟ್ಟಿ ಜಾಗದಲ್ಲಿ ಶಿಶು ಮತ್ತು ಮಹಿಳೆ ಅಭೃವೃದ್ಧಿ ಇಲಾಖೆ ಕಚೇರಿಗೆ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಮೀನುಗಾರಿಕೆ ಇಲಾಖೆಯನ್ನು ಕೋರಲಾಯಿತು.
 ಉಪಾಧ್ಯಕ್ಷೆ ರಾಜಮ್ಮ, ಪಶುವೈದ್ಯಾಧಿಕಾರಿ ಡಾ. ಸತೀಶ್, ಕೃಷಿ ಅಧಿಕಾರಿ ಭವ್ಯರಾಣಿ, ಸಮಾಜಿಕ ಅರಣ್ಯಾಧಿಕಾರಿ ಧನಲಕ್ಷ್ಮಿ, ಷಮ್ಮುಖ, ಜಮೀರ್‌ಪಾಷ, ತೋಟಾಗಾರಿಕಾಧಿಕಾರಿ ಆನಂದ್, ತಾ.ವೈ.ಡಾ. ಅನುಪಮ, ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ಆಹಾರ ಇಲಾಖೆಯ ಸಂಜೀವ್ ಗೌಡ, ಬಿಸಿಎಂ ಇಲಾಖೆಯ ಶ್ರೀನಿವಾಸ್ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.