ದೊಡ್ಡಪೇಟೆ ರಸ್ತೆ ಅಗಲೀಕರಣ ಕುರಿತು ಸಭೆ
ಚಿಂತಾಮಣಿ: ದೊಡ್ಡಪೇಟೆ ಮುಖ್ಯರಸ್ತೆ ಡಾಂಭರೀಕರಣ ಕಾಮಗಾರಿಗೆ ನಾಗರಿಕರು ಸಹಕರಿಸಿ ಸುಗಮ ಸಂಚಾರಕ್ಕೆ ಸಹಕಾರ ನೀಡಬೇಕೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮನವಿ ಮಾಡಿದರು.
ಪಟ್ಟಣದ ದೊಡ್ಡಪೇಟೆ ರಸ್ತೆ ಮಧ್ಯಭಾಗದಿಂದ 30 ಅಡಿ ವಿಸ್ತರಿಸಲು ಗುರುತಿಸಿರುವುದನ್ನು ನಾಗರಿಕರು ವಿರೋಧಿಸಿ ಕಾಮಗಾರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಶನಿವಾರ ಪಟ್ಟಣದ ಆರ್ಯವೈಶ್ಯ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ನಿವಾಸಿಗಳ ಹಾಗೂ ಮುಖಂಡರ ಸಭೆ ಕರೆದು ಚರ್ಚಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸುಜಾತಮ್ಮ ಶಿವಣ್ಣ ಮಾತನಾಡಿ, ರಸ್ತೆ ವಿಸ್ತರಿಸಲು ನಗರಸಭೆಗೆ ಸರ್ಕಾರದ ಆದೇಶ ಇಲ್ಲ. ಹಿಂದೆಯೇ ಬಂಬೂ ಬಜಾರ್ ರಸ್ತೆ ಅಗಲೀಕರಣಗೊಳಿಸಲಾಗಿದೆ ಎಂದು ನಕ್ಷೆಯಲ್ಲಿ ದಾಖಲಾಗಿದ್ದು ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣದ ದಾಖಲೆಗಳು ಇಲ್ಲ ಹೀಗಾಗಿ ಇರುವ ರಸ್ತೆಯಲ್ಲೇ ಕಟ್ಟಡಗಳನ್ನು ಹೊಡೆಯದೆ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಕೋರಿದರು.
ಜಾಮೀಯಾ ಮಸೀದಿ ಕಾರ್ಯದರ್ಶಿ ನಿಸಾರ್ ಅಹಮದ್ ಮಾತನಾಡಿ, ನಗರಸಭೆ ಅಧಿಕಾರಿಗಳು ಮುನ್ಸೂಚನೆ ನೀಡದೆ ಕಾಮಗಾರಿ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದರು. ಸುಬ್ಬರಾಮ್ ಮಾತನಾಡಿ, ಸ್ಥಳೀಯರ ಅಭಿಪ್ರಾಯ ಪಡೆದು ರಸ್ತೆ ಹಾಗೂ ಚರಂಡಿ ನಿರ್ಮಿಸಲು ಕೋರಿದರು.
ಸುರೇಶ್ ಬಾಬು, ಮುನಿನಾರಾಯಣಪ್ಪ, ಪ್ರಶಾಂತ್, ರಾಮಮೂರ್ತಿ, ನವೀನ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನರಸಿಂಹ, ಸತೀಶ್, ಅಮೀರ್, ಚಂದ್ರಶೇಖರ್, ಪಾರ್ವತಮ್ಮ, ವಾಸವಾಂಭ, ಸತ್ಯನಾರಾಯಣರಾವ್ ಇದ್ದರು.
ಅಭಿನಂದನೆ
ಗೌರಿಬಿದನೂರು: ಪರಿಸರ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ, ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕೆ. ನಾರಾಯಣಸ್ವಾಮಿ ಅವರನ್ನು ರಾಜ್ಯ ಸಕಾಲ ಮಿಷನ್ ಕೆಎಎಸ್ ಅಧಿಕಾರಿ ವರಪ್ರಸಾದರೆಡ್ಡಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ತರಳಿ ಅಭಿನಂದಿಸಿದರು. ಇವರೊಂದಿಗೆ ಪುರಸಭಾ ಮಾಜಿ ಅಧ್ಯಕ್ಷೆ ಗೀತಾಜಯಂದರ್ ಹಾಗೂ ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಡಾ. ಅನೂರೂಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

