'ನವಭಾರತ ನಿರ್ಮಾಣ ಹೊಣೆ ಮಕ್ಕಳದ್ದು'
ಚಿಂತಾಮಣಿ: ನವಭಾರತ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ ಬಹಳ ಮಹತ್ವದ್ದು ಎಂದು ಪಟ್ಟಣದ ರಾಯಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ರಾಮಕೃಷ್ಣಾರೆಡ್ಡಿ ಹೇಳಿದರು.
ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡ್ದ ಅವರು, ಸುಂದರ, ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಹೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲೆ ಕೆ.ಆರ್.ಪ್ರೇಮಲತಾ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
ವಸ್ತು ಪ್ರದರ್ಶನದಲ್ಲಿ ಮಕ್ಕಳು ಥರ್ಮಾಕೋಲ್ನಿಂದ ಮಾಡಿದ ಮಾದರಿಗಳಲ್ಲಿ ತಾಜ್ಮಹಲ್, ಗಣಪತಿ, ಹೃದಯದ ಮಾದರಿಗಳು ಗಮನ ಸೆಳೆದವು. ತರಕಾರಿಗಳಿಂದ ತಯಾರಿಸಿದ ಶ್ರೀ ವೆಂಕಟೇಶ್ವರ ಪ್ರತಿಮೆ, ರೈಲು, ವಿವಿಧ ಪ್ರಾಣಿಗಳ ನಮೂನೆಗಳು ಸುಂದರವಾಗಿದ್ದವು. ವಿಜ್ಞಾನ ವಿಭಾಗದಲ್ಲಿ ವಿದ್ಯುಚ್ಚಕ್ತಿ ತಯಾರಿಕೆ, ರಾಕೆಟ್ ಉಡಾವಣೆ, ಹನಿ ನೀರಾವರಿ, ಪೆರಿಸ್ಕೋಪ್ ಇನ್ನೂ ಮುಂತಾದ ಮಾದರಿಗಳು ನೋಡುಗರನ್ನು ಸೆಳೆದವು. ಎನ್.ಎಸ್. ಕಲಾವತಿ, ಮಂಜುನಾಥ್, ವಿಜಯ, ಆಯೇಷಾ ಸುಲ್ತಾನಾ, ಕವಿತ, ರಮೇಶ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆ.ಪಿ.ನಾಗಾರ್ಜುನರೆಡ್ಡಿ, ಚುಟುಕು ಕವಿ ರಾಯಲ್ ಶ.ಮ.ಮಂಜುನಾಥ, ಹಿರಿಯ ಶಿಕ್ಷಕರಾದ ಪ್ರಸಾದ್, ಅಮರಾವತಿ, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.
ಇಂದು ಕನ್ನಡ ರಾಜ್ಯೋತ್ಸವ
ಟೇಕಲ್: ಸಮೀಪದ ಮಾಕಾರಹಳ್ಳಿ ಗ್ರಾಮದಲ್ಲಿ 17ರ ಸಂಜೆ 7 ಗಂಟೆಗೆ ಕರವೇಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಲಾ ಮೇಳ ಆಚರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ.ಎಸ್. ಮಂಜುನಾಥಗೌಡ ವಹಿಸಲಿದ್ದು, ಅಧ್ಯಕ್ಷತೆ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ, ಧ್ವಜಾರೋಹಣ ಜಿಪಂ ಸದಸ್ಯೆ ರತ್ನಮ್ಮನಂಜೇಗೌಡ ಮಾಡಲಿದ್ದು, ಭಾಷಣಕಾರರಾಗಿ ಡಾ.ಪಿ.ನಾರಾಯಣಸ್ವಾಮಿ, ಕೆ.ಜಿ.ಎಸ್. ಮುನಿಸ್ವಾಮಿ, ಉಮೇಶ್ ಗೌಡ ಭಾಗವಹಿಸಲಿದ್ದಾರೆ.
'ತರಬೇತಿ ಸದುಪಯೋಗವಾಗಲಿ'
ಗೌರಿಬಿದನೂರು: ಸರ್ಕಾರದ ವಿವಿಧ ಉಚಿತ ತರಬೇತಿಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಶೆಟ್ಟಿ ಕರೆ ನೀಡಿದರು. ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ, ಪುರಸಭೆ ಗೌರಿಬಿದನೂರು ಹಾಗೂ ಅಭ್ಯುದಯ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ, ನಿರುದ್ಯೋಗಿ ಯುವಕ ಯುವತಿಯವರಿಗೆ ನೀಡುವ ಟೈಲರಿಂಗ್ ತರಬೇತಿಗಳು ಸದುಪಯೋಗವಾಗಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

