'ಹಿರಿಯರ ಆದರ್ಶ ಅಳವಡಿಸಿಕೊಳ್ಳಿ'
ಮುಳಬಾಗಲು: ಹಿರಿಯರ ಆದರ್ಶ ಆಳವಡಿಸಿಕೊಳ್ಳಲು ವಿದ್ಯಾರ್ಥಿ ಮುಖ್ಯಮಂತ್ರಿ ಎನ್. ದೀಕ್ಷಾ ಮನವಿ ಮಾಡಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ತಾಯಿ ನಾಡಿನಲ್ಲಿ ಎಷ್ಟೋ ಜನ ಮಹನೀಯರು ಹುಟ್ಟಿ, ನಾಡಿನ ಶ್ರೇಯಸ್ಸಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.ಸ್ವಾತಂತ್ರ್ಯ ದಿನಾಚರಣೆಯಂತೆ, ಮಕ್ಕಳ ದಿನಾಚರಣೆಯನ್ನು ಹಬ್ಪದ ರೀತಿಯಲ್ಲಿ ಆಚರಿಸಬೇಕು ಎಂದರು. ನಮ್ಮ ಶಾಲೆಯಲ್ಲಿ ವಿಶೇಷವಾಗಿ ಮಂತ್ರಿ ಮಂಡಳ ರಚನೆ ಮಾಡಿ ಶಾಲಾ ಹಂತದ ಕೆಲಸಗಳು ವಿಕೇಂದ್ರೀಕರಣ ವ್ಯವಸ್ಥೆಯ ಮೂಲಕ ನಡೆಯಲು ಅವಕಾಶ ನೀಡಿರುವ ಶಾಲೆ ಉಪಪ್ರಾಂಶುಪಾಲ ಕೆ.ವಿ. ನರಸಿಂಹಯ್ಯ ಹಾಗೂ ಶಾಲೆಯ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು. ಉಪ ಮುಖ್ಯ ಮಂತ್ರಿ ಗೋಪಿಕಾ ಮಾತನಾಡಿ, ವೇದಿಕೆಯಲ್ಲಿ ಮಕ್ಕಳ ದಿನಾಚರಣೆಯನ್ನು ಮಕ್ಕಳೇ ಆಚರಿಸುತ್ತಿರುವುದು ಶಾಲೆಯ ವಿಶೇಷ ಎಂದರು. ಉಪ ಪ್ರಾಂಶುಪಾಲ ಕೆ.ವಿ. ನರಸಿಂಹಯ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿ ಮಾತನಾಡಿದರು. ಸಾಂಸ್ಕೃತಿಕ ಮಂತ್ರಿ ರಕ್ಷಾ, ಅರ್ಚನಾ, ವಾರ್ತ ಮಂತ್ರಿಗಳಾದ ಭವಾನಿ, ಪ್ರತೀಕ್ಷಾ, ಕ್ರೀಡಾ ಮಂತ್ರಿ ವಂದನಾ, ಸ್ವಪ್ನಾ, ಶಿಕ್ಷಣ ಮಂತ್ರಿಗಳಾದ ಶಿರೀಷಾ, ಶಾಲಿನಿ ವೇದಿಕೆ ಮೇಲಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು.
ಇಂದು 91ನೇ ಹುಣ್ಣಿಮೆ ಹಾಡು
ಕೋಲಾರ: ಕಳೆದ ಏಳುವರೆ ವರ್ಷದಿಂದ ಏನೇ ಅಡೆ-ತಡೆಗಳು ಉಂಟಾದರೂ ಹುಣ್ಣಿಮೆ ಹಾಡು ಕಾರ್ಯಕ್ರಮ ನಿಲ್ಲಿಸದೆ ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಸೇವೆ ಸಲ್ಲಿಸುತ್ತಾ ಬಂದಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ತನ್ನ 91ನೇ ಹುಣ್ಣಿಮೆ ಹಾಡಿನ ಕಾರ್ಯಕ್ರಮಕ್ಕೆ ಎರಡು ನಾಟಕಗಳನ್ನು ಕೊಡುಗೆಯಾಗಿ ನೀಡಲು ಸಜ್ಜಾಗಿದೆ.
ನ.17 ರಂದು ಭಾನುವಾರ ಸಂಜೆ 7 ಗಂಟೆಗೆ ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿನ ಶಿವಗಂಗೆ ತಾಣದಲ್ಲಿರುವ ಜಿಂಕೆ ರಾಮಯ್ಯ ಜೀವ ತಾಣದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ರಂಗ ಕರ್ಮಿ, ಸಾಹಿತಿ, ಆದಿಮ ಕೇಂದ್ರದ ಸಂಸ್ಥಾಪಕ ಕೋಟಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ಜೀವ ತೋರಣಿಗ ಗದ್ದುಗೆ ಗೌರವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಿಣಸಂದ್ರ ಗ್ರಾಮದ ಮುನಿತಾಯಮ್ಮ, ಪಾಪರಾಜನಹಳ್ಳಿಯ ಸಯ್ಯದ್ ಅಹ್ಮದ್ ಅವರನ್ನು ಸನ್ಮಾನಿಸಲಾಗುತ್ತಿದೆ. ಜೊತೆಗೆ ಎವರಿಬಡಿಸ್ ವಾಟರ್ ಎಂಬ ನಾಟಕ ಪ್ರದರ್ಶನವನ್ನು ಶ್ರೀನಿವಾಸಪುರ ತಾಲೂಕಿನ ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ವಿರಚಿತ ಗಾದೆ ಗುರ್ರಕ್ಕ ಎಂಬ ನಾಟಕ ಪ್ರದರ್ಶನವೂ ಏರ್ಪಡಿಸಲಾಗಿದೆ. ಈ ಎರಡೂ ನಾಟಕಗಳನ್ನು ಕೃಷ್ಣಕುಮಾರ್ ಯಾದವ್ ನಿರ್ದೇಶಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

