ಭಾವಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮ
ಮುಳಬಾಗಲು: ದಾಸ ಸಾಹಿತ್ಯವನ್ನು ಹರಿಕತೆಗಳ ಮೂಲಕ ಸರಳೀಕೃತಗೊಳಿಸಿ ಕನ್ನಡ ಭಾಷೆಯನ್ನು ಸಂತಶ್ರೀ ಭದ್ರಗಿರಿ ಅಚ್ಯುತದಾಸರು ಶ್ರೀಮಂತಗೊಳಿಸಿದರು ಎಂದು ಸಂತ ಸರ್ವೋತ್ತಮದಾಸರು ಹೇಳಿದರು.
ಪಟ್ಟಣದ ಹರಿದಾಸ ಪೀಠದಲ್ಲಿ ಭಾನುವಾರ ನಡೆದ ಸಂತಶ್ರೀ ಭದ್ರಗಿರಿ ಅಚ್ಯುತದಾಸರ ಮತ್ತು ಶಾರದಮ್ಮನವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹರಿಕಥೆಯನ್ನು ಉಪಕತೆಗಳ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ, ನೈತಿಕ ಮೌಲ್ಯಗಳನ್ನು ಬೋಧಿಸಿದ ಅಚ್ಯುತದಾಸರು ತಮ್ಮ ಮೊದಲ ದಿವಸಗಳಲ್ಲಿ ಹಲವಾರು ಏರುಪೇರುಗಳನ್ನು ಕಾಣಬೇಕಾಗಿ ಬಂದಿತು, ಅವುಗಳನ್ನು ಹಿಮ್ಮೆಟ್ಚಿ ಹರಿಕತೆ ಪ್ರಕಾರವನ್ನು ಶ್ರೀಮಂತಗೊಳಿಸಲು ಶ್ರಮಿಸಿದರು ಎಂದರು.
ಉಪನ್ಯಾಸಕ ಜಿ.ಆರ್. ಅಶ್ವಥ್, ಅಲಂಗೂರು ಗುರುಶಂಕರ್, ಪುರಸಭೆ ಮಾಜಿ ಅರ್.ಚಿಕ್ಕರೆಡ್ಡಪ್ಪಶೆಟ್ಟಿ, ನಿವೃತ್ತ ಶಿಕ್ಷಕ ಮುನಿರಾಜು, ಅಬ್ದುಲ್ ರಫಿಕ್, ತಾಲೂಕು ವೈಶ್ಯ ಸಂಘದ ಕಾರ್ಯದರ್ಶಿ ಸುಬ್ಬಣ್ಣಶೆಟ್ಟಿ, ರವಿಕುಮಾರ್ ದಾಸ್, ಕೆ.ಬಿ. ಮಾಣಿಕ್ಯಂ, ವೆಂಕಟಕೃಷ್ಣಯ್ಯ, ಸಾಹಿತಿಗಳಾದ ಉತ್ತನೂರು ನಾರಾಯಣಾಚಾರ್, ಡಾ. ದೊಡ್ಡಭದ್ರೇಗೌಡ, ರಾಜ್ಯ ಪುರಂದರದಾಸರ ಆರಾಧನೆ ಸಮಿತಿ ಕಾರ್ಯದರ್ಶಿ ಎನ್. ರಾಜಾರಾವ್, ಕಲಾವಿದ ಬಿ.ಕೆ. ಚಂದ್ರಮೌಳಿ, ನಾಗಪ್ರಶಂತಗೌಡ ಮುಂತಾದವರು ಭಾಗವಹಿಸಿದ್ದರು. ಮುಂದಿನ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಪುರಂದರ ದಾಸರ ಆರಾಧನೋತ್ಸವದಲ್ಲಿ ಸಂತ ಅಚ್ಯುತದಾಸರ ಕುರಿತು ಕಿರುಹೊತ್ತಿಗೆಯನ್ನು ಪ್ರಕಟಿಸಲು ತೀರ್ಮಾನಿಸಲಾಯಿತು.
ಪೊಲೀಸ್ ವಸತಿ ಗೃಹಗಳ ಪುನರ್ ನಿರ್ಮಾಣ
ಟೇಕಲ್: ಟೇಕಲ್ ಪೊಲೀಸ್ ಹೊರ ಠಾಣೆ ಮೇಲ್ದರ್ಜೆಗೇರಿಸುವುದು ಮತ್ತು ಪೊಲೀಸ್ ವಸತಿ ಗೃಹಗಳ ಪುನರ್ ನಿರ್ಮಾಣಕ್ಕೆ ಗಮನ ಹರಿಸುವುದಾಗಿ ಮಾಲೂರು ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು. ನ.6ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ಪೊಲೀಸ್ ವಸತಿ ಗೃಹಗಳ ಕಾಯಕಲ್ಪ ಎಂದು ಎಂಬ ಸುದ್ದಿ ಬಗ್ಗೆಪ್ರತಿಕ್ರಿಯಿಸಿದ ಶಾಸಕರು, ಪೊಲೀಸ್ ವಸತಿ ಗೃಹಗಳನ್ನು ಆದಷ್ಟು ಬೇಗ ನಿರ್ಮಿಸಿಕೊಡುವುದಾಗಿ, ಟೇಕಲ್ ಮತ್ತು ಲಕ್ಕೂರು ಹೋಬಳಿಗಳಲ್ಲಿ ಆರು ತಿಂಗಳ ಒಳಗಾಗಿ ನೂತನ ಪೊಲೀಸ್ ಠಾಣೆಗಳನ್ನು ನೀಡುವುದಾಗಿ ಈ ಬಗ್ಗೆ ಗೃಹ ಸಚಿವ ಜಾರ್ಜ್ ಬಳಿ ಮಾತನಾಡುವುದಾಗಿ ತಿಳಿಸಿದರು. ಈಗಿರುವ ಹೊರಠಾಣೆಯನ್ನು ಮೇಲ್ದರ್ಜೆಗೇರಿಸಿ, ಸಬ್ ಇನ್ಸ್ಪೆಕ್ಟರ್ 10 ರಿಂದ 15 ಮಂದಿ ಸಿಬ್ಬಂದಿ ಮತ್ತು ಅವರಿಗೆ ವಸತಿ ಗೃಹಗಳ ನಿರ್ಮಾಣ ಮಾಡುವುದಾಗಿ ಹೇಳಿದರು.
ಸಹಕಾರಿ ಕ್ಷೇತ್ರ ಗೆಲವು; ವಿಜಯೋತ್ಸವ
ಬಂಗಾರಪೇಟೆ: ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಹಕಾರಿ ಕ್ಷೇತ್ರದಿಂದ ತಾಲೂಕಿನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಸೂರೆಗೌಡನಕೋಟೆ ಎಂ. ಕೃಷ್ಣೇಗೌಡ ಜಯಗಳಿಸಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಎಂ. ಕೃಷ್ಣೇಗೌಡರ ವಿರುದ್ಧ ಸ್ಪರ್ಧಿಸಿದ್ದ ಜಿಪಂ ಸದಸ್ಯ ಆರ್.ನಾರಾಯಣರೆಡ್ಡಿ ಅವರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದು ಬಿಜೆಪಿ ಪಾಳಯದಲ್ಲಿ ಸಂತಸ ಉಂಟು ಮಾಡಿದೆ. ವಿಜೇತ ಅಭ್ಯರ್ಥಿ ಎಂ. ಕೃಷ್ಣೇಗೌಡ ಮಾತನಾಡಿ, ಬ್ಯಾಂಕಿನಿಂದ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರೆಯುವಂತೆ ಮಾಡುವುದಾಗಿ ಹೇಳಿದರು. ಪಕ್ಷದ ತಾ.ಅಧ್ಯಕ್ಷ ಮಾರ್ಕಂಡೇಗೌಡ, ಪುರಸಭೆ ಸದಸ್ಯ ಬಿ.ಸಿ. ಶ್ರೀನಿವಾಸಮೂರ್ತಿ, ವೇದಾವತಿ ಪ್ರಭಾಕರ್, ಜುಂಜನಹಳ್ಳಿ ನಾರಾಯಣಸ್ವಾಮಿ, ಭೂ ಬ್ಯಾಂಕಿನ ಅಧ್ಯಕ್ಷ ಹುನ್ಕುಂದ ವೆಂಕಟೇಶ್, ತಿಪ್ಪಾರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

