ಕೋಲಾರ

ವಾಲ್ಮೀಕಿ ಭವನ ನಿರ್ಮಾಣಕ್ಕೆ ಆಗ್ರಹಿಸಿ ಸಂಘದಿಂದ ಮನವಿ

Published On :

ಮಾಲೂರು: ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಮಂಜೂರು ಮಾಡಿದ್ದ ಒಂದು ಕೋಟಿ ರು.ಗಳು ಕಾಮಗಾರಿ ಪ್ರಾರಂಭವಾಗದ ಕಾರಣ ವಾಪಸ್ಸಾಗುವ ಸಂಭವವಿದ್ದು, ಕೊಡಲೇ ವಾಲ್ಮೀಕಿ ಭವನಕ್ಕೆ ಜಾಗ ಗುರ್ತಿಸಿ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಅಗ್ರಹಿಸಿ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟರಾಮ್ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ, ವಾಲ್ಮೀಕಿ ಭವನ ನಿರ್ಮಿಸಲು 2 ರಂದು ಒಂದು ಕೋಟಿ ರು. ಮಂಜೂರುಮಾಡಿ ಪ್ರಥಮ ಹಂತವಾಗಿ ಇಪ್ಪತ್ತೈದು ಸಾವಿರ ರು.ಗಳನ್ನು ಕೋಲಾರ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಈವರೆಗೂ ತಾಲೂಕು ಆಡಳಿತ ವಾಲ್ಮೀಕಿ ಭವನಕ್ಕೆ ನಿವೇಶನ ಗುರ್ತಿಸಿ ಕಾಮಗಾರಿ ಪ್ರಾರಂಭ ಮಾಡಿಲ್ಲ. ಮಂಜೂರಾಗಿರುವ ಈ ಹಣ ಕಾಮಗಾರಿ ಪ್ರಾರಂಭವಾಗದ ಕಾರಣ ಮಾರ್ಚ್ ವೇಳೆಗೆ ವಾಪಸ್ಸು ಹೋಗುವ ಸಂಧರ್ಭವಿದೆ. ಅದ್ದರಿಂದ ಅದಷ್ಟು ಬೇಗ  ವಾಲ್ಮೀಕಿ ಭವನದ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು. ಅಬ್ಬಯ್ಯಪ್ಪ, ಕಾರ್ಯದರ್ಶಿ ಗುಂಡಪ್ಪ, ಉಪಾಧ್ಯಕ್ಷ ವೆಂಕಟೇಶ್, ಕಡತೂರು ಶ್ರೀನಿವಾಸ್, ಸೂಸೈಟಿ ವೆಂಕಟೇಶ್, ಟಿ.ಕೆ.ನಾಗರಾಜ್, ವೆಂಕಟಾ ಚಲಪತಿ, ವಿಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.