ಕನಕ ಜಯಂತಿ ಪ್ರಯುಕ್ತ ಆರೋಗ್ಯ ಉಚಿತ ಶಿಬಿರ
ಗುಡಿಬಂಡೆ: ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆ ಸಮರ್ಪಕವಾಗಿ ದೊರೆಯದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಹೆಚ್ಚಿಗೆ ಹಮ್ಮಿಕೊಂಡಾಗ ಜನರಿಗೆ ಅನುಕೂಲವಾಗುತ್ತದೆ ಎಂದು ಜಿಪಂ ಸದಸ್ಯ ಎಂ.ವಿ. ಕೃಷ್ಣಪ್ಪ ತಿಳಿಸಿದರು. ತಾಲೂಕಿನ ಸೋಮೇನಹಳ್ಳಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಆಯುರ್ವೇಧ ಆಸ್ಪತ್ರೆ, ಗ್ರಾಪಂ, ನಾಡಕಚೇರಿ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಕನಕ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಾಧಿಕಾರಿ ಡಿ.ಆರ್. ನರಸಿಂಹ ಮೂರ್ತಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶೀಘ್ರದಲ್ಲೆ ರಕ್ತದ ಸಂಗ್ರಹಣಾ ಘಟಕ ತೆರೆಯಲಿಗಿದೆ ಎಂದರು. ರೆಡ್ಕ್ರಾಸ್ಸಂಸ್ಥೆಯು ತಾಲೂಕು ಕಾರ್ಯದರ್ಶಿ ಉನ್ನತಿ ವಿಶ್ವನಾಥ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿದರು. ಶಿಬಿರದಲ್ಲಿ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ 400ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿ ವೈದ್ಯರಿಂದ ಚಿಕಿತ್ಸೆ ಔಷಧಿ ಪಡೆದರು. ಶಿಬಿರದ ಪ್ರಯುಕ್ತ ವಿವಿಧ ತಳಿಯ ಸಸಿಗಳನ್ನು ಶಾಲಾ ಆವರಣದಲ್ಲಿ ಜಿಲ್ಲಾ ಪರಿಸರ ಸಂರಕ್ಷಣ ವೇದಿಕೆಯಿಂದ ನೆಡಲಾಯಿತು. ಗ್ರಾ.ಪಂ ಅಧ್ಯಕ್ಷೆ ಶಿವಮ್ಮ, ತಾಲೂಕು ಆರೋಗ್ಯಾಧಿಕಾರಿ ಸ್ವಾತಿ, ವೈದ್ಯರಾದ ವಿ. ಮುರಳಿಧರ್, ಉಮಾಶಂಕರಿ, ವಿಜಯ್ ಕುಮಾರ್, ಸುರೇಶ್ ಕೃಷ್ಣ, ಶೃತಿ, ಗೋಮತಿ, ಈಶ್ವರ್, ನೇತ್ರ ತಜ್ಞ ಪುಷ್ಪರಾಜ್, ಶಿಕ್ಷಕ ಜಿ.ಎಂ ಪರಮನೇಟ್ಟಿ, ರಮೇಶ್, ಪದ್ಮಾವತಮ್ಮ, ಆನಂದ್, ಶಿವಪ್ಪ, ಸುದರ್ಶನ್, ನಾಗರಾಜ್ ಇದ್ದರು.
ಕನಕದಾಸರ ಕೊಡುಗೆ ಅಪಾರ: ಶಾಸಕ ಕೃಷ್ಣಾರೆಡ್ಡಿ
ಚಿಂತಾಮಣಿ: ಕೀರ್ತನೆಗಳ ಹರಿಕಾರ ಭಕ್ತ ಕನಕದಾಸರ ಕೊಡುಗೆ ಸಮಾಜಕ್ಕೆ ಮಹತ್ವವಾದದ್ದು ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುರುಬರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾನ್ ಪ್ರತಿಭೆಯುಳ್ಳ ಕನಕದಾಸರು ಅಸ್ಪೃಶ್ಯತೆ ಹೋಗಲಾಡಿಸಲು ಕೀರ್ತನೆಗಳ ಮೂಲಕ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ ಕನಕದಾಸರ ಕೊಡುಗೆ ಆದುನಿಕ ಜಗತ್ತಿಗೆ ಆದರ್ಶವೆಂದರು.
ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಮಾತನಾಡಿ, ಮೂಢನಂಬಿಕೆ, ಅಜ್ಞಾನ ಹೋಗಲಾಡಿಸಲು ಕನಕದಾಸರು ಕೀರ್ತನೆಗಳ ಮೂಲಕ ಜನರಿಗೆ ಚೈತನ್ಯ ತುಂಬಿದರು ಎಂದರು. ಮುಖ್ಯ ಭಾಷಣಕಾರರಾಗಿ ಪ್ರಾಧ್ಯಪಕ ಡಾ. ಎಂ. ಲಕ್ಷ್ಮಣಸ್ವಾಮಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಮೆರವಣಿಗೆಗೆ ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಹಾಗೂ ಟಿ.ಪಿ.ಎಸ್. ಅಧ್ಯಕ್ಷ ಗೌರಮ್ಮ ನಾಗೇಶ್ ಚಾಲನೆ ನೀಡಿದರು. ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವೃತ್ತಿ ನಿರೀಕ್ಷಕ ನಂಜಪ್ಪ, ಶಿಕ್ಷಕ ವೆಂಕಟರವಣಪ್ಪ, ಸುಬ್ಬರಾಯಗೌಡ, ಲಕ್ಷ್ಮಣ್ ಸ್ವಾಮಿರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಣ್ಣ ತಿಮ್ಮಪ್ಪ, ಚನ್ನೇಗೌಡ, ವಸಂತಕುಮಾರ್, ಕೆ.ಜಿ. ರಂಗಯ್ಯ, ನಾಗರಾಜ್, ನಾರಾಯಣಸ್ವಾಮಿ, ರತ್ನಮ್ಮ, ಪೆದ್ದೂರು ನಾಗರಾಜರೆಡ್ಡಿ, ಆರ್.ಆರ್.ನಾರಾಯಣಗೌಡ, ವಿ. ಅಮರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

