ಕೋಲಾರ

'ಕನ್ನಡಕ್ಕೆ ಆಂತರಿಕ ಬೆಂಬಲ ಬೇಕು'

Published On :

ಕ.ಪ್ರ.ವಾರ್ತೆ ಕೋಲಾರ ನ.20
ಕನ್ನಡ ಭಾಷೆಗೆ ಪ್ರಾಚೀನ ಕಾಲದ ಇತಿಹಾಸವಿದ್ದು, ಇದನ್ನು ದೇಶದ ಮೂಲೆಮೂಲೆಗಳಿಗೂ ಹರಡುವ ಹಾಗೆ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ಕನ್ನಡಕ್ಕೆ ಬೇಕಾಗಿರುವುದು ಬಾಹ್ಯಬೆಂಬಲವಲ್ಲ, ಆಂತರಿಕ ಬೆಂಬಲವೆಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಎಸ್. ನಾಗರಾಜಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಬೆಗ್ಲಿಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ ರಸಗ್ರಹಣ ಶಿಬಿರ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮವಾದ ಸಂಸ್ಕಾರವನ್ನು ಜೀವನದಲ್ಲಿ ಹಳವಡಿಸಿಕೊಂಡು ಶ್ರೇಷ್ಠ ನಾಯಕರಾಗಿ ರೂಗೊಳ್ಳಬೇಕು, ಕಣಕಣದಲ್ಲಿಯೂ ಕನ್ನಡತನವನ್ನು ಮೈಗೂಡಿಸಿಕೊಂಡು ಸ್ವಾಭಿಮಾನದಿಂದ ಮುನ್ನಡೆಯಬೇಕೆಂದರು.
ಚರ್ಚಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಜಿಲ್ಲಾ ಚುಟುಕ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳು ಕನ್ನಡ ನಾಡು ದುಡಿಯುವ ಬಗ್ಗೆ ನಿರಾಭಿಮಾನಿಗಳ ಬಗ್ಗೆ ಸ್ವಾಭಿಮಾನಿಗಳಾಗಿ ಅಭಿಮಾನವನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅತ್ಯಂತ ಶ್ರೀಮಂತ ಭಾಷೆ ಕನ್ನಡ ಸಾವಿರಾರು ವರ್ಷದ ಭವ್ಯ ಇತಿಹಾಸ ಹೊಂದಿದೆ ಎಂದರು.
ಕನ್ನಡ ಚರ್ಚಾಸ್ಪರ್ಧೆಯಲ್ಲಿ ಅರುಣ್, ಸಂಗೀತ, ವೇಣು, ವಿದಾರ್ಥಿಗಳು ಬಹುಮಾನ ಪಡೆದುಕೊಂಡು ಸಮಾರಂಭದಲ್ಲಿ ವಕ್ಕಲೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆರ್. ವೀರಣ್ಣ, ಕೊರಗಂಡಹಳ್ಳಿ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ಶಿಕ್ಷಕರಾದ ಯಲ್ಲವ್ವ, ನಾಗರತ್ನ ಉಪಸ್ಥಿತರಿದ್ದರು. ಶಿಕ್ಷಕಿ ಕಲಾವತಿ ನಿರೂಪಿಸಿ, ದೈಹಿಕ ಶಿಕ್ಷಕ ಮುನಿವೆಂಕಟಪ್ಪ ವಂದಿಸಿದರು.

ಬಂಗಾರಪೇಟೆಯಲ್ಲಿ ಸಹಕಾರ ಸಪ್ತಾಹ
ಬಂಗಾರಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದೆ ಬಯಲನ್ನೇ ಅವಳಂಬಿಸಿರುವುದು ಶೋಚನೀಯವಾಗಿದ್ದು ಎಲ್ಲರೂ ಶೌಚಾಲಯ ನಿರ್ಮಾಣ ಮಾಡಿಕೊಂಡು ಪರಿಸರವನ್ನು ರಕ್ಷಿಸಬೇಕೆಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಹಮ್ಮಿಕೊಂಡಿದ್ದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತಿದ್ದು ಈ ದಿನವಾದರೂ ಬಯಲು ಮುಕ್ತ ಶೌಚಾಲಯವಾಗಿಸುವ ಶಫಥವನ್ನು ಗ್ರಾಮೀಣ ಜನರು ಕೈಗೊಳ್ಳಬೇಕು ಎಂದರು.
ಜಿಪಂ ಸದಸ್ಯ ಎಂ.ಎಸ್. ಆನಂದ್, ಕೆಜಿಎಫ್ ಶಾಸಕಿ ರಾಮಕ್ಕ, ಟಿಎಪಿಸಿಎಂಎಸ್ ಅಧ್ಯಕ್ಷ ಎ. ಮಾರ್ಕಂಡೇಗೌಡ, ರಾಮಪ್ಪ ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ನುಸುಲದಂತೆ ಕ್ರಮಕ್ಕೆ ಮುಂದಾದರೆ ಸಹಕಾರ ಸಂಸ್ಥೆಗಳು ಉಳಿಯಲು ಸಾಧ್ಯ ಎಂದು ಹೇಳಿದರು. ಕಾರ್ಯದರ್ಶಿ ಜಗದೀಶ್, ಚಂದ್ರಮೋಹನ್,ಚಂದ್ರಪ್ಪ, ವೆಂಕಟಾಚಲಪತಿ, ರಂಗನಾಥ್, ಮುನಿರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.