ಕೋಲಾರ

ಮತ್ತೆ ಬಂದ ಗಜಪಡೆ; ಆತಂಕದಲ್ಲಿ ಜನ

Published On :

ಬಂಗಾರಪೇಟೆ: ಕಳೆದ ಕೆಲ ತಿಂಗಳಿಂದ ಆನೆಗಳ ಹಾವಳಿಯಿಲ್ಲದೆ ನೆಮ್ಮದಿಯಾಗಿದ್ದ ರೈತರಿಗೆ ಇದೀಗ ಮತ್ತೆ ಕಾಡಾನೆಗಳ ಹಿಂಡು ಗಡಿ ಭಾಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಆತಂಕದ ಛಾಯೆ ಮೂಡಿಸಿದೆ.
28 ಕಾಡಾನೆಗಳು: ಮಂಗಳವಾರ ರಾತ್ರಿ ತಾಲೂಕಿನ ತಮಿಳುನಾಡಿನ ಗಡಿ ಭಾಗವಾದ ಬಲಮಂದೆ ಪಂಚಾಯ್ತಿಯ ತಮಟಮಾಕನಹಳ್ಳಿ, ಯರಗೋಳ್ ಮತ್ತಿತರ ಕಾಡಿನ ಅಂಚಿನಲ್ಲಿ ಸುಮಾರು 28 ಕಾಡಾನೆಗಳ ಹಿಂಡು ರಾಜ್ಯದ ಅರಣ್ಯ ಪ್ರದೇಶಕ್ಕೆ ಲಗ್ಗೆ ಹಾಕಿದೆ. ಆದರೆ ಈವರೆಗೂ ಗ್ರಾಮಸ್ಥರಿಗೆ ಕೇವಲ ನಾಲ್ಕು ಆನೆಗಳು ಮಾತ್ರ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣ ಹಾನಿ ಮತ್ತು ಬೆಳೆ ಹಾನಿ ಮಾಡಿಲ್ಲ ಎಂದು ಅರಣ್ಯ ಇಲಾಖೆ ರೇಂಜರ್ ಚಂದ್ರಶೇಖರರೆಡ್ಡಿ ತಿಳಿಸಿದ್ದಾರೆ. ಗಡಿ ಭಾಗದ ಗ್ರಾಮಸ್ಥರು ಕೆಲ ತಿಂಗಳಿಂದ ಆನೆಗಳ ಹಾವಳಿಯಿಲ್ಲದೆ ನೆಮ್ಮದಿಯಾಗಿದ್ದರು. ಈಗ ಮತ್ತೆ ಪ್ರತ್ಯಕ್ಷವಾಗಿರುವುದರಿಂದ ಆತಂಕಗೊಂಡಿದ್ದಾರೆ. ರಾತ್ರಿ ವೇಳೆ ಗ್ರಾಮಸ್ಥರು ಒಂಟಿಯಾಗಿ ಮನೆ ಬಿಟ್ಟು ಹೊರಗಡೆ ಹೋಗಬಾರದು ಮತ್ತು ಆನೆಗಳನ್ನು ಕಂಡರೆ ಕಿಟಲೆ ಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸುವಂತೆ ಅವರು ಕೋರಿದ್ದಾರೆ.
ಐದು ಜನರ ಹತ್ಯೆ ಮಾಡಿತ್ತು: ಕಳೆದ ವರ್ಷ ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಆಹಾರಕ್ಕಾಗಿ ಗಡಿ ಭಾಗದ ಅರಣ್ಯಕ್ಕೆ ಲಗ್ಗೆ ಹಾಕಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಬೆಳೆ ಹಾನಿ ಮಾಡಿತಲ್ಲದೆ ಐವರನ್ನು ಬಲಿ ತೆಗೆದುಕೊಂಡಿತ್ತು. ಈಗ ಮತ್ತೆ ಆನೆಗಳು ಬಂದಿರುವುದು ಗ್ರಾಮಸ್ಥರನ್ನು ಆತಂಕಗೊಳಿಸಿದೆ. ಈ ಬಾರಿ ಎಲ್ಲಾ ಕಡೆ ರಾಗಿ, ತೊಗರಿ, ಬತ್ತ ಮತ್ತಿತರೆ ಬೆಳೆಗಳು ಬೆಳೆದಿದ್ದು ಆನೆಗಳು  ಅನಾಹುತ ಮಾಡುವುದೋ ಎಂಬ ಚಿಂತೆ ಕಾಡ ತೊಡಗಿದೆ. ಮತ್ತೆ ಬೆಳೆ ಹಾನಿ ಮತ್ತು ಪ್ರಾಣ ಹಾನಿ ಸಂಭವಿಸುವ ಮೊದಲೇ ಇಲಾಖೆ ಎಚ್ಚೆತ್ತುಕೊಂಡು  ಆನೆಗಳನ್ನು ಕಾಡಿಗೆ ಸಾಗಾಕಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.