ವಿಜ್ಞಾನ ದೇಶದ ಅಭ್ಯುದಯಕ್ಕೆ ಬಳಕೆಯಾಗಲಿ'
ಕೋಲಾರ: ವಿಜ್ಞಾನವೆಂದರೆ ಸಂಸ್ಕೃತಿ ಅದನ್ನು ಯಾರೂ ದುಷ್ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳದೆ ದೇಶದ ಅಭ್ಯುದಯಕ್ಕಾಗಿ ಬಳಕೆ ಮಾಡಬೇಕೆಂದು ಸರ್ಕಾರಿ ವೈದ್ಯ ಡಾ. ಶಿವಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ರಾಜ್ಯ 21 ನೇ ಮಕ್ಕಳ ವಿಜ್ಞಾನ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರು ಇಂಥಹ ಪ್ರಗತಿಗಳಿಗೆ ಒತ್ತು ನೀಡುತ್ತಿದ್ದರು. ಆದರೆ ಇಂದು ವೈಜ್ಞಾನಿಕ ಪ್ರಗತಿಯಿಂದ ಹಳ್ಳಿಗಳು ವಂಚಿತಗೊಂಡು ಪಟ್ಟಣಗಳಿಗೆ ವಲಸೆ ಹೋಗುವಂತಾಗಿದೆ ಎಂದು ವಿಷಾದಿಸಿದರು. ವೈಜ್ಞಾನಿಕ ಪ್ರಗತಿ ಎಂದರೆ ಹಳ್ಳಿಗಳು ಬರಿದಾಗಿ ನಗರ ಪಟ್ಟಣಗಳು ಅಭಿವೃದ್ಧಿ ಹೊಂದುವುದಲ್ಲ ಹಳ್ಳಿಗಳು ಸ್ವಯಂ ಪರಿಪೂರ್ಣತೆ ಹೊಂದಿದಾಗ ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾರತ ರತ್ನ ಪುರಸ್ಕೃತ ಸಿ.ಎನ್.ಆರ್. ಅವರು ಅವಿಭಜಿತ ಕೋಲಾರ ಜಿಲ್ಲೆಯವರಾಗಿದ್ದು ಕನ್ನಡದಲ್ಲಿ ಓದಿ ಬರೆದು ನಾಡಿಗೆ ಕೀರ್ತಿ ತಂದಿದ್ದಾರೆ. ಮಕ್ಕಳು ಇಂಥವರನ್ನು ಅನುಕರಣೆ ಮಾಡಿ ಅಬಿವೃದ್ಧಿ ಸಾಧಿಸಬೇಕೆಂದರು. ವಿಜ್ಞಾನ ಪರಿವೀಕ್ಷಕ ವೆಂಕಟಸ್ವಾಮಿ ಭಾಗವಹಿಸಿದ್ದರು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಂಚಾಲಕಿ ಮಂಜುಳಾ ಭೀಮಾರಾವ್ ನೇತೃತ್ವದಲ್ಲಿ ಆಯೋಜಿಸಿದ್ದ ವಿಜ್ಞಾನ ಸಮಾವೇಶದಲ್ಲಿ ಒಟ್ಟು 18 ಶಾಲೆಗಳಿಂದ ಭಾಗವಹಿಸಿದ್ದರು.
ಸರ್ಕಾರಿ ಆಸ್ಪತ್ರೆಯ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಜಿಲ್ಲಾ ಶಾಖೆ ಕೋಲಾರದ ಅಧ್ಯಕ್ಷೆ ಎಸ್. ವಿಜಯಮ್ಮ ನೇತೃತ್ವದಲ್ಲಿ ಕೆಜಿಎಫ್ ವಲಯದ ಸರ್ಕಾರಿ ಆಸ್ಪತ್ರೆಯ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ನಗರದ ಸಾರ್ವಜನಿಕ ಆಸ್ಪತ್ರೆ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಎಸ್. ವಿಜಯಮ್ಮ, ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮತ್ತು ಅವರ ಅಭಿವೃದ್ಧಿಗೆ ಹಗಳಿರಲು ದುಡಿಯುವುದಾಗಿ ತಿಳಿಸಿದರು. ಈ ವೇಳೆ ಸಭೆಯಲ್ಲಿದ್ದವರ ಒಮ್ಮತದಿಂದ ಕೆಜಿಎಫ್ ಸರ್ಕಾರಿ ಆಸ್ಪತ್ರೆ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಶಿವಕುಮಾರ್, ಅಧ್ಯಕ್ಷೆಯಾಗಿ ದೇವಕಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ಕೇತರಿ, ಉಪಾಧ್ಯಕ್ಷ ಎಂ. ಸುಮತಿ, ನಟರಾಜನ್, ಕೃಷ್ಣಮೂರ್ತಿ, ರಘುರಾಮ್ಸಿಂಗ್, ಖಜಾಂಚಿ ಎಂ. ರೇವತಿ, ಕಾರ್ಯದರ್ಶಿ ಸಹಾಯನಾದನ್, ಜಂಟಿ ಕಾರ್ಯದರ್ಶಿ ನಾರಾಯಣಸ್ವಾಮಿ, ವಿದ್ಯಾಸಾಗರ್, ಸಂಘಟನಾ ಕಾರ್ಯದರ್ಶಿ ಕವಿತಾ, ರಾಜೇಶ್ವರಿ, ಉಮಾ, ಕಲ್ಪನಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೇಮಕುಮಾರ್, ಸಂಗೀತಾ, ರವಿ, ಪುಷ್ಪರಾಜ್ರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

