ಇಲಾಖೆ ಮೇಲಿನ ಅಸಮಾಧಾನ ನಿವಾರಣೆಗೆ 'ಸಕಾಲ'
ಕ.ಪ್ರ.ವಾರ್ತೆ ಕೋಲಾರ ನ. 21
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇಲಾಖೆಗಳ ಮೇಲೆ ಜನತೆ ಅಸಮಾಧಾನಗೊಳ್ಳದಂತೆ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೆ ತಂದಿದೆ ಎಂದು ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ಸಂಯೋಜಕಿಯಾಗಿರುವ ಡಾ. ಕ್ರಿಸ್ಟಿನ ಕಾಂತರಾಜು ತಿಳಿಸಿದರು.
ಅವರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಕಾಲ ಕುರಿತು ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಕಾಲ ಕಾಯಿದೆಗಳ ಬಗ್ಗೆ ಅರಿವು ಮೂಡಿಸಿದರು.
ಸಕಾಲ ಕಾಯಿದೆ ಜಾರಿಗೆ ಬಂದ ಮೇಲೆ ಯಾವುದೇ ಒಬ್ಬ ಅಧಿಕಾರಿ ಇಲ್ಲವೇ ಸಿಬ್ಬಂದಿ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವಂತಿಲ್ಲ. ಸಮಯ ಪಾಲನೆ, ಗುರಿ ಮುಟ್ಟುವ ಸೇವೆಗೆ ಪ್ರತಿಯೊಬ್ಬರು ಆದ್ಯತೆ ನೀಡುವಂತಾಗಿದೆ ಎಂದರು.
ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ್ಲ ಎಂಬ ಸರ್ಕಾರದ ಧ್ಯೇಯವನ್ನು ಪ್ರತಿಯೊಬ್ಬರು ಪಾಲನೆ ಮಾಡುವ ಮೂಲಕ ಜನತೆ ಇಲಾಖೆಗಳ ಮೇಲೆ ಅಸಮಾಧಾನಗೊಳ್ಳದಂತೆ ಎಚ್ಚರವಹಿಸಿ ಕೆಲಸ ಮಾಡಬೇಕಾಗಿರುವುದರಿಂದ ಅಧಿಕಾರಿಗಳು ಸಕಾಲದ ಬಗ್ಗೆ ಅರಿವು ಪಡೆದು ತಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾಲ ಕಾಲಕ್ಕೆ ಸೂಚನೆಗಳು ನೀಡಿದಲ್ಲಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದೆಂದು ತಿಳಿಸಿದರು.
ಸಕಾಲ ಯಾವಾಗ ಜಾರಿಗೆ ಬಂತು ಎಂದು ಕೇಳಿದಾಗ ತರಬೇತಿ ಶಿಬಿರದಲ್ಲಿ ಹಾಜರಿದ್ದ 100ಕ್ಕೂ ಹೆಚ್ಚು ಶಿಕ್ಷಣ ಇಲಾಖೆಯ ಅಧಿಕಾರಿಗಳ ಪೈಕಿ ಕೇವಲ 12 ಮಂದಿ 2011 ಎಂದು ಉತ್ತರಿಸಿದರೆ, ಉಳಿದವರು 2012 ಎಂದು ಮತ್ತೆ ಕೆಲವರು ಏನು ಗೊತ್ತಿಲ್ಲದವರಂತೆ ಮೌನವಾಗಿ ಕುಳಿತಿದ್ದನ್ನು ಗಮನಿಸಿದ ಡಾ. ಕ್ರಿಸ್ಟಿನ, ಹಾಗಾದರೆ ನಿಮ್ಮನ್ನು ಅನಕ್ಷರಸ್ಥರು ಎಂಬು ಭಾವಿಸಬೇಕಾಗುತ್ತದೆ. ಈ ಶಿಬಿರದ ಮೂಲಕವಾದರೂ ಸಕಾಲದ ಕಾಯಿದೆಗಳನ್ನು ಅರ್ಥ ಮಾಡಿಕೊಂಡು ಜನತೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ತಿಳಿಸಿದರು.
ರಾಜ್ಯದಲ್ಲಿ ಸಕಾಲ ಯಶಸ್ವಿಯಾಗಿರುವುದರಿಂದ ದೆಹಲಿ ಸರ್ಕಾರ ಕರ್ನಾಟಕ ರಾಜ್ಯವನ್ನೇ ಮಾದರಿಯನ್ನಾಗಿ ಮಾಡಿಕೊಂಡು ಕಾಯಿದೆ ಅನುಷ್ಠಾನಗೊಳಿಸಲು ಮುಂದಾಗಿದೆ. ಸಕಾಲ ಕಾಯಿದೆ ಅಡಿಯಲ್ಲಿ 419 ಸೇವೆಗಳು ಒಳಪಟ್ಟಿದ್ದು ಈ ಪೈಕಿ ಶಿಕ್ಷಣ ಇಲಾಖೆಯ 117 ಸೇವೆಗಳು ಸೇರಿರುವುದರಿಂದ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಸರ್ಕಾರ ನಮ್ಮ ಕೊರಳಿಗೆ ಗಂಟೆ ಕಟ್ಟಿರುವುದರಿಂದ ಜನತೆಯ ಪ್ರಶ್ನೆಗೆ ಉತ್ತರಿಸುವುದು ಅನಿವಾರ್ಯವೆಂದು ಪ್ರತಿಪಾದಿಸಿದರು.
ರಾಜ್ಯಕ್ಕೆ 10ನೇ ಸ್ಥಾನ
ಸಕಾಲ ಮೊದಲ ಬ್ರಿಟನ್ನಲ್ಲಿ ಜಾರಿಗೆ ತಂತು. ಭಾರತದಲ್ಲಿ 2010ರಲ್ಲಿ ಮಧ್ಯಪ್ರವೇಶ, 2011ರಲ್ಲಿ ಬಿಹಾರ್, ಹಿಮಾಚಲ ಪ್ರದೇಶ , ಉತ್ತರಖಂಡ, ಜಮ್ಮು -ಕಾಶ್ಮೀರ, ಪಂಜಾಬ್, ರಾಜಸ್ತಾನ, ಜಾರ್ಖಂಡ್ ್ಹಾಗೂ 10ನೇ ರಾಜ್ಯವಾಗಿ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ನಮ್ಮ ರಾಜ್ಯದಲ್ಲಿನ ಸಾಧನೆ ನೋಡಿ ಬೇರೆ ರಾಜ್ಯಗಳಿಂದ ಅಧಿಕಾರಿಗಳು ಬಂದು ಸಕಾಲ ಯೋಜನೆಯ ಬಗ್ಗೆ ಅಧ್ಯಯನ ಮಾಡಿ ತಮ್ಮ ರಾಜ್ಯದಲ್ಲೂ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಉಪಕಾರ್ಯದರ್ಶಿ ಬದನೂರು, ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳಲು ಆರ್ಟಿಐ ಮತ್ತು ಸಕಾಲ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಅಧಿಕಾರಿಗಳು ಈ ಯೋಜನೆಗಳ ಬಗ್ಗೆ ಅರಿವುವನ್ನು ಪಡೆದುಕೊಳ್ಳಬೇಕೆಂದರು.
ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಒದಗಿಸಿರುವ ಸವಲತ್ತುಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಒದಗಿಸಬೇಕಾಗಿದೆ. ನಿಯಮಗಳನ್ನು ಪಾಲನೆ ಮಾಡದಿದ್ದರೆ ಸಮಸ್ಯೆ ಮೈಮೇಲೆ ಹಾಕಿಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಣ ಇಲಾಖೆಯ ಅಧಿಕಾರಿ ಜಯರಾಮ ರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆಯ ಅಧಿಕಾರಿ ವೆಂಕಟರಂಗ ಇದ್ದರು. ನಾಳೆ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ ಮಧ್ಯಾಹ್ನ 3.45ಕ್ಕೆ ಜಿ.ಪಂ ಸಭಾಂಗಣದಲ್ಲಿ ಏರ್ಪಡಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

