ಕೋಲಾರ

'ಕನಕದಾಸರ ವಿಚಾರಧಾರೆ ಆದರ್ಶನೀಯ'

Published On :

ಮಾಲೂರು: ಸಮಾಜದ ಕಳಂಕ ಪದ್ಧತಿಯನ್ನು ತಮ್ಮ ಕೀರ್ತನೆ ಮೂಲಕ ಖಂಡಿಸಿದ್ದ ದಾಸಶ್ರೇಷ್ಠ ಕನಕದಾಸರ ವಿಚಾರಧಾರೆಗಳನ್ನು ಎಲ್ಲರೂ ಪಾಲಿಸವಂತಾಗಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಲೂರು ಘಟಕದ ವ್ಯವಸ್ಥಾಪಕ ಆನಂದ್ ಹೇಳಿದರು. ಪಟ್ಟಣದ ಕೋಲಾರ ರಸ್ತೆಯ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಕನಕ ಜಯಂತಿ ಪ್ರಯುಕ್ತ ನಿರ್ಮಿಸಿದ್ದ ಸ್ತಬ್ಧ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಕನಕದಾಸರು ಇಡೀ ಸಮಾಜವನ್ನು ತಿದ್ದುವ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಕನಕರ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಎಸ್. ಬಾಲಕೃಷ್ಣ, ಮನೋಹರ್, ಬಿ.ಟಿ. ರೆಡ್ಡಿ, ತಬ್ರೇಸ್, ರಘು, ಅಬ್ಬೇನಹಳ್ಳಿ ನಾರಾಯಣಸ್ವಾಮಿ, ಬಿ.ಜಿ.ಎಸ್. ಗೌಡ,ಕಣ್ಣಪ್ಪ, ನಾರಾಯಣಸ್ವಾಮಿ, ತಾಳ ಕುಂಟೆ ವೆಂಕಟೇಶ್, ಲೋಕೇಶ್, ರಾಮಚಂದ್ರ, ಶ್ರೀನಿವಾಸ್ ರೆಡ್ಡಿ ಇದ್ದರು.

ರಾಗಿ, ಮುಸುಕಿನ ಜೋಳಕ್ಕೆ ಬೆಂಬಲ ಬೆಲೆ
ಗುಡಿಬಂಡೆ: 2013-14ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸಣ್ಣ ಅತಿಸಣ್ಣ ರೈತರು ಬೆಳೆದಿರುವ ರಾಗಿ ಮತ್ತು ಮುಸುಕಿನ ಜೋಳಕ್ಕೆ ಗರಿಷ್ಠ 25 ಕ್ವಿಂಟಲ್‌ವರೆಗೂ ಬೆಂಬಲ ಬೆಲೆ ನಿಗಧಿಪಡಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಬಲ ಬೆಲೆ ಪಡೆಯಲು ರೈತರು ಬೆಳೆ ನಮೂದಾಗಿರುವ ಪಹಣಿ ಮತ್ತು ಪಟ್ಟ ಅಥವಾ ತಹಸೀಲ್ದಾರ್, ಉಪತಹಸೀಲ್ದಾರ್‌ರಿಂದ ಬೆಳೆ ದೃಢೀಕರಣ ಪ್ರಮಾಣ ಪತ್ರ, ರೈತರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಮುಂತಾದದ ದಾಖಲೆ ಸಲ್ಲಿಸಬೇಕಿದೆ. ಮಾಹಿತಿಯನ್ನು ಕೃಷಿ ಇಲಾಖೆಯಲ್ಲಿ ಪಡೆಯಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.