ಕಳವು ಪ್ರಕರಣ ಬೇಧಿಸಿದ ಪೊಲೀಸರು
ಕ.ಪ್ರ.ವಾರ್ತೆ ಮುಳಬಾಗಲು ನ. 21
ಪಟ್ಟಣದ ಮುಖ್ಯ ಬೀದಿಯಲ್ಲಿ ಕಳೆದ ತಿಂಗಳು ಕನ್ನ ಕೊರೆದು ಚಿನ್ನದಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮುಳಬಾಗಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಮಾಲು ಸಮೇತ ಬಂಧಿಸಿರುವುದಾಗಿ ಅಪರ ಪೊಲೀಸ್ ಅಧೀಕ್ಷಕ ಜಮೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜೈಕಿಶನ್ ಲಾಲ್ ಅಂಗಡಿಗೆ ಚರಂಡಿ ಮೂಲಕ ಕನ್ನ ಕೊರೆದು ಕಳವು ಮಾಡಲಾಗಿತ್ತು. ಅಂಗಡಿ ಮಾಲೀಕರು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಶನಿವಾರ ಅದನ್ನು ಆಫ್ ಮಾಡಲಾಗಿತ್ತು. ಭಾನುವಾರ ರಜೆಯಾದ ಕಾರಣ ಅಂಗಡಿ ತೆರೆದಿರಲಿಲ್ಲ. ಸೋಮವಾರ ಬಾಗಿಲು ತೆರೆದಾಗ ಕನ್ನ ಕೊರೆದು ಕಳವು ಮಾಡಿರುವ ವಿಚಾರ ಬಹಿರಂಗವಾಗಿತ್ತು. ಕಳವಿಗೆ ಸುಳಿವು ಸಿಕ್ಕಿದ್ದು ಪಕ್ಕದ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರದ ತುಣುಕುಗಳಲ್ಲಿ ಕೆಲವರನ್ನು ಗಮನಿಸಿದಾಗ ಕಳ್ಳನ ಬಗ್ಗೆ ಸುಳಿವು ದೊರೆತಿದೆ.
ಆರೋಪಿ ಮುಳಬಾಗಲು ಪಟ್ಟಣದ ನೂಗಲಬಂಡೆ ವಾಸಿ ಚಾಂದ್ ಪಾಷನನ್ನು ಬೆಂಗಳೂರಿನ ಆವಲಹಳ್ಳಿ ಸಮೀಪದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಬೆಂಗಳೂರು ನಗರದ ಏಜಾಜ್ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಸಬ್ಇನ್ಸ್ಪೆಕ್ಟರ್ಗಳಾದ ಮೇಲ್ವಿನ್ ಪ್ರಾನ್ಸಿಸ್, ಶಂಕರಪ್ಪ, ಕೆ.ವಿ. ಶ್ರೀಧರ್, ಸಿಬ್ಬಂದಿ ಸುರೇಶ್, ಮುನಿವೆಂಕಟರೆಡ್ಡಿ, ರಾಮಪ್ಪ, ರಮೇಶ್, ಗುರುಪ್ರಸಾದ್, ಅಮರನಾರಾಯಣಸ್ವಾಮಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

