ಕೋಲಾರ

ಶಿಕ್ಷಕಿ ಚಿನ್ನದ ಸರ ಅಪಹರಣ

Published On :

ಕೋಲಾರ: ನಗರದ ಚಿನ್ಮಯ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿರುವ ಭವಾನಿಯವರ ಕೊರಳಿನಿಂದ ಕಳ್ಳರು ಸುಮಾರು 1 ಲಕ್ಷ ರು. ಬೆಲೆಯ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ಶಾಲೆಗೆ ಹೋಗುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಹಳದಿ ಬಣ್ಣದ ಟೀ ಶರ್ಟ್ ಧರಿಸಿದ್ದ ಕಳ್ಳನೊಬ್ಬ ಶಿಕ್ಷಕಿಯ ಕೊರಳಿನಿಂದ ಸರ ಅಪಹರಿಸಿದ್ದಾನೆ. ಈ ಸಂಬಂಧ ಶಿಕ್ಷಕಿ ಭವಾನಿಯವರ ಪತಿ ಶ್ರೀನಿವಾಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗುತ್ತಿದೆ, ಗ್ರಾಮೀಣ ಪ್ರದೇಶಕ್ಕೆ ಸರಗಳ್ಳರು ಪ್ರವೇಶಿಸಿದ್ದಾರೆಂದು ಕಳೆದ ಎರಡು ದಿನಗಳ ಹಿಂದೆಯಷ್ಟೇ ದಕ್ಷಿಣ ವಲಯ ಐಜಿಪಿ ಅಮರಕುಮಾರ ಪಾಂಡೆ ಹೇಳಿದ್ದರು.
ಹಾಡು ಹಗಲೇ ಸರಗಳ್ಳರು ಮತ್ತೆ ತಮ್ಮ ಕೈಚಳಕ ಪ್ರದರ್ಶಿಸಿರುವುದು ಜನತೆಯನ್ನು ಆತಂಕಕ್ಕೆ ದೂಡಿದೆ. ಸರ ಅಪಹರಣ ಇದೇನು ಮೊದಲಲ್ಲ. ಈ ಹಿಂದೆ ಇದೇ ಶಾಲೆಯ ಇಬ್ಬರು ಶಿಕ್ಷಕಿಯರಿಂದಲೂ ಕಳ್ಳರು ಚಿನ್ನದ ಸರ ಅಪರಹಣ ಮಾಡಿದ್ದರು. ಕೋಲಾರ ಡಿವೈಎಸ್ಪಿ ಅಶೋಕ್ ಕುಮಾರ್ ಆರೋಪಿಯ ಪತ್ತೆಗಾಗಿ ತೀವ್ರ ಶೋಧನೆ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.