ಅಧಿಕಾರಿಗಳಿಂದ ಬಾಲ್ಯವಿವಾಹಕ್ಕೆ ತಡೆ
-ಎನ್. ಬಾಬು
ಚಿಂತಾಮಣಿ: ಬಾಲ್ಯ ವಿವಾಹ ನಡೆಯುತ್ತಿರುವುದಾಗಿ ಅನಾಮದೇಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಮದುವೆ ನಿಂತು ಹೋಗಿ ಪೋಷಕರು ತಲೆ ಮೇಲೆ ಕೈಹೊತ್ತು ಕೂತ ಘಟನೆ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.
ಘಟನೆಯ ವಿವರ: ಪಟ್ಟಣದ ವಿನಾಯಕನಗರ 2ನೇ ಅಡ್ಡರಸ್ತೆ ಬಳಿ ಇರುವ ರಾಮಚಂದ್ರಪ್ಪ ಎಂಬವರ ಪುತ್ರ ಆರ್.ಶ್ರೀನಿವಾಸ್ ಹಾಗೂ ತಪತೇಶ್ವರ ಕಾಲೋನಿಯ ನಾರೆಪ್ಪ ಎಂಬವರ ಅಪ್ರಾಪ್ತ ಮಗಳಿಗೆ ಬಾಲ್ಯ ವಿವಾಹ ನಡೆಯುತ್ತಿರುವುದಾಗಿ ಕಳೆದ 2 ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಶಿವಪ್ರಸಾದ್ ಅವರಿಗೆ ಅನಾಮದೇಯ ವ್ಯಕ್ತಿದೂರು ನೀಡಿದ್ದ ಎನ್ನಲಾಗಿದೆ.
ಮೇಲಾಧಿಕಾರಿಗಳ ಸೂಚನೆಯಂತೆ ಪಟ್ಟಣದ ಶಿವಸೂರ್ಯ ಕಲ್ಯಾಣ ಮಂಟಪದಲ್ಲಿ ಬಾಲ್ಯ ವಿವಾಹ ನಡೆಸಲು ಪೋಷಕರು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಇತ್ತ ಪೋಷಕರು ಮದುವೆ ಆಹ್ವಾನ ಪತ್ರಿಕೆಗಳನ್ನು ಹಂಚಿ ಮದುವೆಗೆ ಅಗತ್ಯವಿರುವ ಎಲ್ಲವನ್ನೂ ತಂದು 23 ರ ಶನಿವಾರ ಸಂಜೆ ಆರಕ್ಷತೆ ಹಾಗೂ 24 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಮದುವೆ ಮುಹೂರ್ತ ನಿಗಧಿಯಾಗಿತ್ತು. ಆದರೆ ನಗರಠಾಣೆ ವೃತ್ತ ನಿರೀಕ್ಷಕ ನಂಜಪ್ಪ ಮತ್ತು ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿ. ವೆಂಕಟನಾರಾಯಣಮ್ಮ,ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತ ಎನ್. ರಮೇಶ್, ಮಹಿಳಾ ಸಹಾಯವಾಣಿ ಕೇಂದ್ರದ ಡಾ.ಎಂ. ವಿಜಯ ಅವರನ್ನು ಕರೆಸಿ ಬಾಲ್ಯ ವಿವಾಹ ತಡೆಯಲು ಪೋಷಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾದರು.
ಅಧಿಕಾರಿಗಳ ತಾಕೀತು: ಮದುವೆ ನಡೆಯದಂತೆ ಹುಡುಗ-ಹುಡುಗಿ ಕಡೆ ಪೋಷಕರನ್ನು ಕರೆಸಿದ ಅಧಿಕಾರಿಗಳು ಬಾಲ್ಯ ವಿವಾಹ ಅಪರಾಧ, ಆದ್ದರಿಂದ ಮದುವೆ ನಡೆಯದಂತೆ ಅಧಿಕಾರಿಗಳು ಒತ್ತಾಯಿಸಿದಾಗ ಇದಕ್ಕೆ ಹಲವು ಸಂಬಂಧಿಕರು ವಿರೋಧ ವ್ಯಕ್ತಪಡಿಸಿದರು, ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ವಿವರವಾಗಿ ಹೇಳಿದಾಗ ಮದುವೆಗೆ ಬಂದ ನೆಂಟರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

