ಮೂಯೀಸ್ ಅಹ್ಮದ್ಗೆ ಪ್ರಶಸ್ತಿ
ಕೋಲಾರ: ನಗರದ ಅಂತರಗಂಗೆ ರಸ್ತೆಯಲ್ಲಿನ ಡಾ. ಆಶಾಸ್ ಪಿಡಿಯಾಟ್ರಿಕ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಆರೋಗ್ಯವಂತ ಮಕ್ಕಳ ಸ್ಫರ್ಧೆಯಲ್ಲಿ ದರ್ಗಾ ಮೊಹಲ್ಲಾದ ಮೂಯೀಸ್ ಅಹ್ಮದ್ ಎಂಬ 6 ತಿಂಗಳ ಮಗು ಅತ್ಯುತ್ತಮ ಆರೋಗ್ಯವಂತ ಮಗುವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಡಾ.ಆಶಾಸ್ ಪಿಡಿಯಾಟ್ರಿಕ್ ಆಸ್ಪತ್ರೆ, ಬ್ರಿಟಿಷ್ಲೈಫ್ ಸೈನ್ಸ್ ಹಾಗೂ ನಗರದ ಪಾರ್ವತಿ ಎಂಟರ್ಪ್ರೈಸಸ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯವಂತ ಮಕ್ಕಳ ಸ್ಪರ್ಧೆಯಲ್ಲಿ ಒಟ್ಟು 48 ಮಕ್ಕಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ 3 ತಿಂಗಳಿಂದ 1 ವರ್ಷದೊಳಗಿನ ಮಕ್ಕಳಲ್ಲಿ ನಮನ್ ಪ್ರಥಮ, ಪ್ರಣೀತ್ ದ್ವಿತೀಯ, ಚರಣ್ಯ ತೃತೀಯ ಹಾಗೂ ಲೇಖನ ಹಾಗೂ ತಾಯಿ ಕವಿತ ಅವರ 6 ತಿಂಗಳ ಮಗು ಸಮಾಧಾನಕರ ಬಹುಮಾನವನ್ನು ಪಡೆದರು.
1ರಿಂದ 2ವರ್ಷದೊಳಗಿನ ಮಕ್ಕಳಲ್ಲಿ ನಿಮಿಷ ಪ್ರಥಮ, ಆರ್ಯನ್ ಸೂರ್ಯ ದ್ವಿತೀಯ, ಚಿನ್ಮಯ್ ತೃತೀಯ ಹಾಗೂ ಶೇಖಶಶಿನ್ ಉಮನ್, ಭಾನುಶ್ರೀ ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು. 2ರಿಂದ 3ವರ್ಷದೊಳಗಿನ ಮಕ್ಕಳಲ್ಲಿ ಲಿಖಿತ್ ಪ್ರಥಮ, ದೀಪ್ತಿ ದ್ವಿತೀಯ, ಅವ್ಯಕ್ತ ತೃತೀಯ ಹಾಗೂ ಫಾರೀಸ್ ಮಸ್ತಾಫ್, ಹರ್ಷಿತ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಬಿ.ವಿ. ಗೊಪಿನಾಥ್, ಡಾ. ಆಶಾಸ್ ಪಿಡಿಯಾಟ್ರಿಕ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಆಶಾ, ಬ್ರಿಟಿಷ್ಲೈಫ್ ಸೈನ್ಸ್ನ ಪ್ರತಿನಿಧಿ ಪ್ರಿಯಾಂಕಾಶೆಟ್ಟಿ ಹಾಗೂ ಅನುರಾದ, ಪಾರ್ವತಿ ಎಂಟರ್ಪ್ರೈಸಸ್ನ ಮುಖ್ಯಸ್ಥ ಬಿ. ಸುರೇಶ್, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಮಂಜುನಾಥ್, ಜಿಲ್ಲಾ ಔಷಧಿ ಮಾರಾಟಗಾರರ ಸಂಘದ ಪ್ರತಿನಿಧಿ ಉಮೇಶ್ ಬಹುಮಾನಗಳನ್ನು ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

