'ಪ್ರಕೃತಿ ರಕ್ಷಣೆಗೆ ಮುಂದಾಗಿ'
ಗೌರಿಬಿದನೂರು: ಪ್ರಕೃತಿಯನ್ನು ನಾವು ಶೋಷಣೆ ಮಾಡಿದರೆ ಅದು ನಮ್ಮನ್ನು ನಾಶಮಾಡುತ್ತದೆ ಎಂದು ಶೃಂಗೇರಿ ಬಳಿಯ ಹರಿಹರಪುರಂ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿ ತಿಳಿಸಿದರು. ಸಮೀಪದ ಮಧುಗಿರಿ ರಸ್ತೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ನಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಾ ಸುದರ್ಶನ ಹೋಮ ಮತ್ತು ಶಾಂತಿ ಹೋಮ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು. ದೀನ ದಲಿತರ ಉದ್ಧಾರದಿಂದ ಹಾಗೂ ಸೇವಾಮನೋಭಾವದಿಂದ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಸನಾತನ ಹಿಂದೂ ಧರ್ಮ ಜಗತ್ತಿನಲ್ಲಿ ಅತ್ಯಂತ ಪ್ರಾಚೀನವಾದ ಧರ್ಮ. ಧರ್ಮ ಉಳಿಯಬೇಕಾದರೆ ಮರ, ಕೆರೆ ಮತ್ತು ದೇವಾಲಯಗಳ ನಿರ್ಮಾಣ ಆಗಬೇಕು ಎಂದರು. ವಿಧಾನಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ನಿರ್ಮಾಣ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದ್ದು, ಶ್ರೀ ಮಠಗಳ ಆಶೀರ್ವಾದಿಂದ ದೇವಾಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ದೇವಾಲಯಕ್ಕಾಗಿ ಸರ್ಕಾರದ ವತಿಯಿಂದ ಸಮುದಾಯ ಭವನ ನಿರ್ಮಾಣ, ನಿವೇಶನ ಮತ್ತು ಪಾರ್ಕ್ಮೀಸಲು ಸ್ಥಳವನ್ನು ಕೊಡಿಸುತ್ತೇನೆ ಮತ್ತು ಶಾಸಕ ಸಂಸದರ ನಿಧಿಯಿಂದ 10ಲಕ್ಷರು. ಸಮುಧಾಯ ಭವನಕ್ಕೆ ಹಾಗೂ ಕೊಳವೆ ಬಾವಿಯನ್ನು ಕೊರೆಯಿಸುವುದಾಗಿ ಭರವಸೆಯಿತ್ತರು. ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಡಿ.ಎನ್. ವೆಂಕಟರೆಡ್ಡಿ, ಅಧ್ಯಕ್ಷ ಎಚ್.ಎಸ್. ನಾರಾಯಣಪ್ಪ, ಉಮೇಶ್ರೆಡ್ಡಿ, ಶ್ರೀನೀವಾಸರಾವ್, ಪ್ರಕಾಶ್ರೆಡ್ಡಿ, ಬೊಮ್ಮಣ್ಣ, ಕೆ. ವೆಂಕಟರಮಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

