'ವರ್ತೂರು ಕೆರೆ ನೀರು ಹರಿಸಿ'
ಕ.ಪ್ರ.ವಾರ್ತೆ ಮಾಲೂರು ನ.22
ತಾಲೂಕಿನ ಕೆರೆಗಳಿಗೆ ವರ್ತೂರು ಕೆರೆ ನೀರನ್ನು ಹರಿಸುವ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ತಾಲೂಕಿನ 500ಕ್ಕೂ ಹೆಚ್ಚು ರೈತರು ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯಲಿರುವ ಅಧೀವೇಶನಕ್ಕೆ ಮುತ್ತಿಗೆ ಹಾಕಿ ಒತ್ತಾಯಿಸಲಾಗುವುದು ಎಂದು ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆ ಯ ತಾಲೂಕು ಅಧ್ಯಕ್ಷ ಬೆಂ. ರಮೇಶ್ ಹೇಳಿದರು.
ಅವರು ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಳ್ಳಿಗಳ ಮರೆತಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಲು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯಲಿರುವ ಅಧಿವೇಶನ ನಡೆಯುವ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ತಾಲೂಕಿನಿಂದ ಕನಿಷ್ಠ ಪಕ್ಷ 500 ರೈತರು ಭಾಗವಹಿಸಲಿದ್ದು, ರಾಜ್ಯ ಸರ್ಕಾರಕ್ಕೆ ಪ್ರತ್ಯೇಕವಾಗಿ ಜಿಲ್ಲೆಯ ಮೂರು ತಾಲೂಕಿಗೆ ನೀರುಣಿಸುವ ವರ್ತೂರು ಕೆರೆ ನೀರು ಯೋಜನೆ ಜಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಂಘಟನೆ ಕಾರ್ಯದರ್ಶಿ ತಿ.ದೇವರಾಜ್ ಮಾತನಾಡಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕಾದರೆ ರೈತರು ಮಾತ್ರವಲ್ಲದೇ ಪ್ರತಿಯೊಬ್ಬರು ನೀರಾವರಿ ಹೋರಾಟಕ್ಕೆ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು, ವ್ಯಾಪಾರಸ್ಥರು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದ ದೇವರಾಜ್ ರವರು ಬೆಳಗಾವಿಗೆ ಬರುವವರಿಗೆ ಉಚಿತವಾಗಿ ರೈಲಿನಲ್ಲಿ ಕೆರದುಕೊಂಡು ಹೋಗಲಾಗುವುದು. ಭಾನುವಾರ ಸಂಜೆ ಬಂಗಾರಪೇಟೆಯಿಂದ ಹೊರಡಲಿರುವ ರೈಲಿನಲ್ಲಿ ಬೆಳಗಾವಿಗೆ ಹೊರಡಲಿದ್ದು, ವಾಪಾಸು ಬರುವರೆಗೂ ಭಾಗವಹಿಸುವವರ ಎಲ್ಲ ಖರ್ಚುಗಳನ್ನು ಸಂಘವೇ ಭರಿಸಲಿದೆ ಎಂದರು. ಇಚ್ಚೆವುಳ್ಳವರು ಭಾನುವಾರ ಬೆಳೆಗ್ಗೆಯೊಳಗೆ 9945510351 ನ್ನು ಸಂಪರ್ಕಿಸಬೇಕಾಗಿ ವಿನಂತಿಸಿದರು.ಸಂಘದ ಕೋ. ಗೋಪಾಲ್, ವರದಾಪುರ ನಾಗರಾಜ್, ಹರೀಶ್, ಮಾ. ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

