ಸಿ.ಸಿ. ಕ್ಯಾಮೆರಾ; ಕಾರ್ಖಾನೆ ಸ್ಪಷ್ಟೀಕರಣ
ಮಾಲೂರು: ಕಾರ್ಖಾನೆಯ ಮಹಿಳೆಯರ ಕಬೋರ್ಡ್ ಕೋಣೆಯಲ್ಲಿ ಸಿ.ಸಿ. ಕ್ಯಾಮೆರಾ ಆಳವಡಿಸಿರುವುದು ಮಹಿಳಾ ಕಾರ್ಮಿಕರ ಒತ್ತಾಯಕ್ಕಾಗಿಯೇ ಹೂರತು ಅನ್ಯ ಕಾರಣಕ್ಕಾಗಿ ಅಲ್ಲ ಎಂದು ಮೆಟೋಫಾರ್ಮ್ ಎಂಡಿ ಸುರೇಂದ್ರ ಚುರೇಸಿಯಾ ಹೇಳಿದರು.
ಕಾರ್ಖಾನೆಯಲ್ಲಿ ಕಳೆದ ಮಂಗಳವಾರ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ನಡೆದಿದ್ದ ಪ್ರತಿಭಟನೆಗೆ ಸ್ವಷ್ಟೀಕರಣ ನೀಡಿ, ಕಳೆದ 16 ವರ್ಷದಿಂದ ಇಲ್ಲಿ ಕಾರ್ಖಾನೆ ನೆಡೆಸುತ್ತಿದ್ದು, ಈವರೆಗೂ ಕಪ್ಪು ಚುಕ್ಕೆ ಬರುವಂತೆ ನಡೆದುಕೊಂಡಿಲ್ಲ. ನಮ್ಮ ಹಾಗೂ ಕಾರ್ಮಿಕರ ಭಾಂಧವ್ಯ ಉತ್ತಮವಾಗಿದ್ದು, ಒಂದೇ ಕುಟುಂಬದವರಂತೆ ನೆಡೆದುಕೊಳ್ಳುತ್ತಿದ್ದೇವೆ. ನಮ್ಮ ಕಾರ್ಖಾನೆ ಸ್ಥಳೀಯರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದು, ತಾಲೂಕಿನ ಶೈಕ್ಷಣಿಕ ಪ್ರಗತಿಗೂ ಸಹಕಾರ ನೀಡಲಾಗುತ್ತಿದೆ. ಇತ್ತೀಚೆಗೆ ಕಾರ್ಖಾನೆ ಅವರಣದಲ್ಲಿ ಹೊರಗಿನವರು ಬಂದು ಮಾಡಿದ ಗಲಾಟೆ ಬೇಸರ ತರಿಸುತ್ತಿದೆ ಎಂದರು.
ಪ್ರಕರಣ ನಡೆದ ದಿನ ಸ್ಥಳಕ್ಕೆ ಬಂದಿದ್ದ ತಹಸೀಲ್ದಾರ್ ಅವರಿಗೆ ವಾಸ್ತವ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಮಹಿಳಾ ಕಾರ್ಮಿಕರ ಮೇಲ್ವಿಚಾರಕಿ ರೇಖಾ ಮಾತನಾಡಿ, ನಾಲ್ಕು ವರ್ಷದ ಹಿಂದೆ ಕಾರ್ಮಿಕರ ಒತ್ತಾಯದ ಮೇರೆಗೆ ಕಾರ್ಖಾನೆ ಆಡಳಿತ ಮಂಡಳಿ ಸಿ.ಸಿ. ಕ್ಯಾಮೆರಾ ಆಳವಡಿಸಿದ್ದಾರೆ. ಅಂದಿನಿಂದ ಇವತ್ತಿನವೆರೆಗೂ ಕಳ್ಳತನದ ಒಂದು ಪ್ರಕರಣ ನಡೆದಿಲ್ಲ ಎಂದರು. ಮಹಿಳಾ ಕಾರ್ಮಿಕರಾದ ಅರುಣಾ, ಸರಸ್ವತಿ, ಶೋಭಾ ಇದಕ್ಕೆ ದನಿಗೂಡಿಸಿದರು. ಕಾರ್ಖಾನೆಯ 20 ಮಹಿಳಾ ಕಾರ್ಮಿಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

