ಜೀತದಿಂದ ಪಾರಾದ ಕುಟುಂಬ
ಶಿಡ್ಲಘಟ್ಟ: ಜೀತ ವಿಮುಕ್ತಿ ಸಂಘಟನೆ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ ಜೀತದಾಳುಗಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುಟುಂಬವೊಂದನ್ನು ಜೀತ ಪದ್ಧತಿಯಿಂದ ಬಿಡುಗಡೆಗೊಳಿಸಲಾಗಿದೆ.
ಮುಳಬಾಗಿಲು ತೈಲೂರಿನ ನಿವಾಸಿ ಸಬ್ದರ್ ಹಾಗೂ ಅವರ ಕುಟುಂಬದ ಸದಸ್ಯರು ಪಟ್ಟಣದ ಮಹಬೂಬ್ ನಗರದ ಮಹಬೂಬ್ ಪಾಷಾ ಎಂಬವರಿಗೆ ಸೇರಿದ ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಇದೀಗ ಮಾಲೀಕರ ಕಿರುಕುಳ ತಾಳಲಾರದೇ ಜೀವಿಕ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ತೈಲೂರಿನ ನಿವಾಸಿಗಳಾದ ಭಾಷ, ಶಮೀಮ್ ತಾಜ್, ಸಬ್ದರ್ ಮಹಬೂಬ್ ಪಾಷಾರವರ ಬಳಿ ಕೆಲಸ ಮಾಡುವುದಕ್ಕಾಗಿ ಮುಂಗಡ ಹಣ ತೆಗೆದುಕೊಂಡಿದ್ದು, 5 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಸಬ್ದರ್ಗೆ ನರ ಮೂತ್ರ ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಮಾಲೀಕರು ಯಾವುದೇ ರೀತಿಯ ಸಹಾಯ ಮಾಡಿಲ್ಲ. ಬದಲಿಗೆ ಕೆಲಸಕ್ಕೆ ಬಾ ಎಂದು ಒತ್ತಡ ಹೇರುತ್ತಿದ್ದರು. ರೇಷ್ಮೆ ಕೆಲಸದಿಂದ ಖಾಯಿಲೆ ಹೆಚ್ಚಾಗುತ್ತಿದ್ದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದಾಗ ಮಾಲೀಕರು ಅವಾಚ್ಯ ಪದಗಳಿಂದ ನಿಂದಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಸಾಲ ತೀರಿಸಿದ ಬಗ್ಗೆ ಲೆಕ್ಕ ಕೇಳಿದಾಗ ಕೊಡುತ್ತಿರಲಿಲ್ಲ. ಅಲ್ಲದೇ ಇಲ್ಲಿನ ಸರಸ್ವತಿ ಕಾನ್ವೆಂಟ್ನಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ತಮ್ಮನಾದ ಶಂಷೀರ್ನನ್ನುಶಾಲೆ ಬಿಡಿಸಿ ಕೆಲಸಕ್ಕೆ ಹಾಕುವಂತೆ ಒತ್ತಡ ಹೇರುತ್ತಿದ್ದರು. ಕೆಲಸಕ್ಕೆ 5 ನಿಮಿಷ ತಡವಾಗಿ ಹೋದರೆ 50 ರು. ದಂಡ ಹಾಕುತ್ತಿದ್ದರು ಎಂದು ಜೀತ ವಿಮುಕ್ತರು ಆರೋಪಿಸಿದ್ದಾರೆ. ತಹಸೀಲ್ದಾರ್ ನಾರಾಯಣಸ್ವಾಮಿ, ಪುರ ಠಾಣಾ ಪಿ.ಎಸ್.ಐ ಪುರುಷೋತ್ತಮ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

