ಕೋಲಾರ

25ಕ್ಕೆ ಹಂಪಸಂದ್ರದಲ್ಲಿ ಲಕ್ಷದೀಪೋತ್ಸವ

Published On :

ಗೌರಿಬಿದನೂರು: ಇದೇ ತಿಂಗಳ 25 ಕಾರ್ತೀಕ ಸೋಮವಾರ ಹೊಸೂರು ಹೋಬಳಿ ಹಂಪಸಂದ್ರ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕೊಣದಮ್ಮ ದೇವಿಯ ಲಕ್ಷದೀಪೋತ್ಸವ ನಡೆಯಲಿದೆ. ಬೆಳಗ್ಗೆ 10.30 ರಿಂದ ಗ್ರಾಮದೇವತೆಗಳಿಗೆ ವಿಶೇಷ ಪೂಜಾಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1ರಿಂದ 4ಗಂಟೆ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಲ್ಲಕಂಬ (ಉಟ್ಲಮಾನು) ಏರುವ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಚಿನ್ನದ ಪತಕ ಪ್ರಥಮ ಬಹುಮಾನವಾಗಿ, ಬೆಳ್ಳಿ ಪದಕವನ್ನು ದ್ವಿತೀಯ ಬಹುಮಾನವಾಗಿ ನೀಡಲಾಗುವುದು.ಸಂಜೆ 7.30ರಿಂದ ಲಕ್ಷದೀಪೋತ್ಸವ ಕಾರ್ಯಕ್ರಮ. ರಾತ್ರಿ 9ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗು ಬೆಳ್ಳಾವಿ ಯಕ್ಷಗಾನ ಕಲಾತಂಡದಿಂದ ಯಕ್ಷಗಾನ ಕುಣಿತ,ಹಾಗೂ ಕೀಲುಕುದುರೆ ಕುಣಿತ ಏರ್ಪಡಿಸಲಾಗಿದೆ.

ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಗೌರಿಬಿದನೂರು: ಎನ್.ಹೆಚ್. ಶಿವಶಂಕರರೆಡ್ಡಿಯವರ ಅಭಿಮಾನಿ ಬಳಗ ಮತ್ತು ಡಾ. ಮೆಗಸ್ಟಾರ್ ಚಿರಂಜೀವಿ ಅಭಿಮಾನಿಗಳ ಬಳಗ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ನ. 24ರ ಭಾನುವಾರ ಬೆಳಿಗ್ಗೆ 9 ರಿಂದ 2.30 ವರೆಗೆ, ನಡೆಯುವ ಸ್ಥಳ ಎ.ಇ.ಎಸ್.ನ್ಯಾಷನಲ್ ಕಾಲೇಜು. ಶಾಸಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಉದ್ಘಾಟಿಸಲಿದ್ದಾರೆ.  ತಹಶೀಲ್ದಾರ್  ಡಾ.ಎನ್. ಭಾಸ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಈ ಶಿಬಿರದಲ್ಲಿ ರಕ್ತ ದಾನ ಮಹಾದಾನ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್ ಮತ್ತು ಯುವಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಬಸ್ ಸೇವೆಗೆ ಇಂದು ಚಾಲನೆ
ಚಿಂತಾಮಣಿ: ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್ ಸೇವೆ ಕಲ್ಪಿಸುತ್ತಿಲ್ಲ ಎಂದು ಕನ್ನಡಪ್ರಭ ಬುಧವಾರ ಪ್ರಕಟಿಸಿದ ವರದಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ಸಾರಿಗೆ ಅಧಿಕಾರಿಗಳು ಸ್ಪಂದಿಸಿ ಭಾನುವಾರ 2 ನೂತನ ತಡೆ ರಹಿತ ಬಸ್‌ಗಳಿಗೆ ಶಾಸಕರು ಹಸಿರು ನಿಶಾನೆ ತೋರಿಸಲಿದ್ದಾರೆಂದು ಚಿಂತಾಮಣಿ ಸಾರಿಗೆ ಘಟಕದ ವ್ಯವಸ್ಥಾಪಕ ಎಂ. ವೆಂಕಟೇಶ್ ತಿಳಿಸಿದ್ದಾರೆ. ಬೆಂಗಳೂರಿಗೆ ದಿನನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಬಾರದೆ ಕಿರಿ ಕಿರಿ ಅನುಭವಿಸುತ್ತಿದ್ದರು. ಈ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಸಾರಿಗೆ ವಿಭಾಗದ ಅಧಿಕಾರಿ ಕೆ. ವಿಶ್ವನಾಥ್ ಹಾಗೂ ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ 2 ನೂತನ ತಡೆ ರಹಿತ ಬಸ್‌ಗಳಿಗೆ ಭಾನುವಾರ ಚಾಲನೆ ನೀಡಲಿದ್ದಾರೆಂದು ಘಟಕದ ವ್ಯವಸ್ಥಾಪಕ ಎಂ. ವೆಂಕಟೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.