ಕೋಲಾರ

ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಬೇಕು: ಡಾ. ರಾಮಚಂದ್ರಪ್ಪ

Published On :

ಗೌರಿಬಿದನೂರು: ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಆಸ್ಪತ್ರೆಗಳಲ್ಲಿ ಉಚಿತವಾಗಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಕಿದ್ವಾಯ್ ಆಸ್ಪತ್ರೆ ವೈದ್ಯ ಡಾ.ರಾಮಚಂದ್ರಪ್ಪ ತಿಳಿಸಿದರು. ಅವರು ತಾಲೂಕಿನ ತೊಂಡೇಬಾವಿಯ ಸ್ವಾಮಿ ಶಿವಾನಂದ ಪ್ರೌಢಶಾಲೆ ಆವರಣದಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ ಹಾಗೂ ಸೆರ್‌ಡ್ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯೋತ್ಸವ ಅಂಗವಾಗಿ ನಡೆದ ಕ್ಯಾನ್ಸರ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್‌ನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ವಾಸಿಮಾಡಲು ಅವಕಾಶವಿರುತ್ತದೆ ಎಂದರು. ಶಿಬಿರದಲ್ಲಿ 36 ಮಂದಿಗೆ ತಪಾಸಣೆ ನಡೆಸಿ ಮೂವರಿಗೆ ಚಿಕಿತ್ಸೆಗೆ ಆಯ್ಕೆ ಮಾಡಿ ಕಿದ್ವಾಯಿ ಆಸ್ಪತ್ರೆ ಬರಬೇಕೆಂದು ಎಂದು ಸೂಚಿಸಿದರು. ಕಿದ್ವಾಯ್ ಆಸ್ಪತ್ರೆಯ 8 ಮಂದಿ ವೈದ್ಯ ಸಿಬ್ಬಂದಿ ಭಾಗವಹಿಸಿದ್ದರು. ಸಿಮೆಂಟು ಕಾರ್ಖಾನೆ ವ್ಯವಸ್ಥಾಪಕ ಮನೋಜ್ ಸೂರ್ಯವಂಶಿ, ಸುಂದರರಾಜ್, ಮುಖ್ಯೋಪಾಧ್ಯಾಯ ಹುಸೇನಿ, ರಷೀದ್, ರಾಜಗೋಪಾಲ್, ರಾಮಾಂಜಿನಮ್ಮ  ಮುಂತಾದವರು ಭಾಗವಹಿಸಿದ್ದರು.

ಕಾನೂನು ಅರಿವು: ಉದ್ಘಾಟನೆ
ಬಂಗಾರಪೇಟೆ: ತಂದೆ ತಾಯಿಗೆ ಬೇಡವಾದ ಮಕ್ಕಳನ್ನು ತೊಟ್ಟಿಗಳಲ್ಲಿ ಅನಾಥವಾಗಿ ಬಿಸಾಡದೆ ಅಂಥ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿ, ಮಾನವೀಯತೆ ಮೆರೆಯರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಜುನಾಥ್ ಹೇಳಿದರು. ಪಟ್ಟಣದ ಲಯನ್ಸ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರೇಮ ಸಾಂತ್ವನ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರಿಗೆ ಗ್ರಾಮದ ಸಂಪೂರ್ಣ ಚಿತ್ರಣ ತಿಳಿದಿರುತ್ತದೆ. ಕಾನೂನು ಬಾಹಿರವಾಗಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಕೇಂದ್ರಗಳಿಗೆ ಬರುವ ಶಿಶುಗಳನ್ನು ಸ್ವಂತ ಮಕ್ಕಳಂತೆ ಕಂಡು ಅವರಿಗೆ ಉತ್ತಮ ತಿಳಿವಳಿಕೆ ನೀಡಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರಿ ಅಂಗನವಾಡಿ ಕೇಂದ್ರಗಳಿಂದ ಆರಂಭವಾಗಬೇಕು  ಎಂದರು. ಸಿಡಿಪಿಒ ಸಿ.ವಿ.ರಾಮನ್, ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಜಗದೀಶ್, ಕಾನೂನು ಪರಿವೀಕ್ಷಣಾಧಿಕಾರಿ ಅನಿತಾ ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಅಂಗವನಾಡಿ ಕಾರ್ಯಕರ್ತೆಯರ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿ ಕವಿತಾ, ಸಾಂತ್ವನ ಕೇಂದ್ರದ ಪ್ರೇಮ, ನಾಗರತ್ನ, ನಾಗವೇಣಿ, ಮಂಜುಳಾ, ವೀಣಾ .ಹರೀಶ್ ಇದ್ದರು.

ಚಾಲನಾ ಪರವಾನಗಿ ವಿತರಣೆ
ಗೌರಿಬಿದನೂರು: ಸರ್ಕಾರಿ ಅತಿಥಿ ಗೃಹದಲ್ಲಿ 20 ಆಟೋ ಚಾಲಕರಿಗೆ ಸಾರಿಗೆ ಅಧಿಕಾರಿ ಕಮಲ್‌ಬಾಬುರವರು ಎಸಿಸಿ ಸಿಮೆಂಟ್ ಕಾರ್ಖಾನೆವತಿಯಿಂದ ಉಚಿತವಾಗಿ ಚಾಲನಾ ಪರವಾನಿಗೆ ನೀಡಿದರು. ಇದೇ ವೇಳೆ ಆಟೋ ಚಾಲಕರಿಗೆ ಸುರಕ್ಷಿತ ಚಾಲನೆಯ ಬಗ್ಗೆ ಕಮಲ್‌ಬಾಬು ಚಾಲಕರಿಗೆ ತಿಳಿಸಿದರು.  ನವೀನ್,ಮಂಜುನಾಥ್,ರಷೀದ್ ಇದ್ದರು.

'ಕರಾಟೆಯಿಂದ ಆತ್ಮಸ್ಥೈರ್ಯ ವೃದ್ಧಿ'
ಗೌರಿಬಿದನೂರು: ಕರಾಟೆ ಆತ್ಮರಕ್ಷಣೆ ಹಾಗೂ ಆತ್ಮ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ತಿಳಿಸಿದರು. ಅವರು ಪಟ್ಟಣದ ಸೇಂಟ್ ಆನ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಟೋ ರಾಯೋ ಕರಾಟೆ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮಾತನಾಡಿದರು. ಕರಾಟೆ ವಿದೇಶಿ ಕ್ರೀಡೆಯಾಗಿದ್ದು ಇತ್ತಿಚಿನ ದಿನಗಳಲ್ಲಿ ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಆಗುತ್ತಿರುವುದು ಸಂತಸದ ವಿಷಯ ಶಾಲಾ ಕಾಲೇಜುಗಳಲ್ಲಿ ಕಲಿಸಲು ಸಲಹೆಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.