ಜಾಲಿ ಮರಗಳಿಗೆ ಕತ್ತರಿ: ಡಿಸಿಗೆ ದೂರು
ಕೆಜಿಎಫ್: ಕೆಜಿಎಫ್‌ನ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈನೇಪಲ್ಲಿ ಮತ್ತು ದೊಡ್ಡಕಂಬಳಿ ಗ್ರಾಮಕ್ಕೆ ಸೇರಿದ ಗೌಡನ ಕೆರೆ ಪ್ರದೇಶದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ವೆಂಕಟರತ್ನಯ್ಯ ಎಂಬುವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಕಟಾವು ಮಾಡುತ್ತಿರುವುದಾಗಿ ದೊಡ್ಡಕಂಬಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬಂಗಾರಪೇಟೆ ತಹಸೀಲ್ದಾರ್ ಉಷಾ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
2009ರಲ್ಲಿ ಅಂದಿನ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಮೂಲಕ ಬೈನೇಪಲ್ಲಿ ಗ್ರಾಮದ ನಿವಾಸಿ ವೆಂಕಟರತ್ನಯ್ಯ ಎಂಬುವರು ಗೌಡನ ಕೆರೆ ಪ್ರದೇಶದ 41 ಎಕರೆ ಜಮೀನಿನ ಪೈಕಿ 9 ಎಕರೆ ಪ್ರದೇಶದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ಟೆಂಡರ್‌ನಲ್ಲಿ 9.60 ಲಕ್ಷಕ್ಕೆ ಪಡೆದಿದ್ದರು. ಆದರೆ ಅವರಿಗೆ ಟೆಂಡರ್‌ನಲ್ಲಿ ಬಿಡಲಾದ ಗೌಡನ ಕೆರೆಯ 9 ಎಕರೆ ಪ್ರದೇಶದಲ್ಲಿ ದೊಡ್ಡಕಂಬಳಿ ಹಾಗೂ ಬೈನೇಪಲ್ಲಿ ಗ್ರಾಮದ ಎರಡೂ ಸರ್ವೆ ಸಂಖ್ಯೆಗಳ ಬರುತ್ತದೆ ಆದ್ದರಿಂದ ಪಂಚಾಯಿತಿ ಮೂಲಕ ಸರಿಯಾದ ಸರ್ವೆಯನ್ನು ನಡೆಸಿ ಆನಂತರ ಟೆಂಡರ್ ಬಿಡಲು ಗ್ರಾಮದ ಮುಖಂಡರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ 2009 ರಲ್ಲಿ ನ್ಯಾಯಾಲಯದಲ್ಲಿ ವೆಂಕಟರತ್ಯಯ್ಯ ಪರವಾಗಿ ತೀರ್ಪು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ವೆಂಕಟರತ್ನಯ್ಯ ತಮಗೆ ಸೇರಿದ ಪ್ರದೇಶದಲ್ಲಿ ಜಾಲಿ ಮರಗಳನ್ನು ಕಳೆದ ರಾತ್ರಿ ಮರಗಳನ್ನು ಕಟಾವು ಮಾಡಿದ್ದರು. ಆದರೆ ದೊಡ್ಡಕಂಬಳಿ ಗ್ರಾಮಸ್ಥರು ವೆಂಕಟರತ್ಯಯ್ಯ ಅವರು ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಮರಗಳನ್ನು ಕಟಾವು ಮಾಡುತ್ತಿದ್ದಾರೆ. ಆದ್ದರಿಂದ ಪಂಚಾಯಿತಿ ವತಿಯಿಂದ ಹಾಗೂ ತಹಸೀಲ್ದಾರ್ ಈ ವಿವಾದ ಸ್ಥಳದಲ್ಲಿ ಸರ್ವೆ ಮಾಡಿಸಿ ಮತ್ತು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆದ ನಂತರ ಮರಗಳನ್ನು ಕಟಾವು ಮಾಡುವಂತೆ ಪಟ್ಟುಹಿಡಿದರು.
ಜಿಲ್ಲಾಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಸರ್ವೆಯನ್ನು ನಡೆಸಿದ ನಂತರ ಮರಗಳನ್ನು ಕಟಾವು ಮಾಡಬೇಕು ಅಲ್ಲಿವರೆಗೆ ಈ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯುವುದಾಗಲೀ ಅಥವಾ ಕಟಾವು ಮಾಡಿದ ಮರಗಳನ್ನು ಸಾಗಿಸುವುದಾಗಲಿ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾರಿಕುಪ್ಪಂ ಪೊಲೀಸ್ ಠಾಣಾ ಅಧಿಕಾರಿಗಳಿಗೆ ತಹಸೀಲ್ದಾರ್ ಉಷಾ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಭಟ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

