ಮುಂದುವರಿದ ಆನೆಗಳ ಹಾವಳಿ
ಬಂಗಾರಪೇಟೆ: ಕಳೆದ ಆರು ದಿನಗಳಿಂದ ಕಾಡಾನೆಗಳ ಹಿಂಡು ತಾಲೂಕಿನ ಗಡಿ ಗ್ರಾಮಗಳಲ್ಲಿ ಮಕ್ಕಾಂ ಹೂಡುವ ಮೂಲಕ ಗ್ರಾಮಸ್ಥರನ್ನು ಭಯ ಬೀತರನ್ನಾಗಿಸಿದ್ದರೆ, ಮತ್ತೊಂದೆಡೆ ಬರಗಾಲದಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡುವುದನ್ನು ಮುಂದುವರೆಸಿ ರೈತರ ಗಾಯದ ಮೇಲೆ ಬರೆ ಎಳೆಯುತ್ತಿರುವ ಗಜಪಡೆ ಈಗ ತೊಪ್ಪನಹಳ್ಳಿ, ಕದರಿನತ್ತ ಕಾಡಿನತ್ತ ಮುಖ ಮಾಡಿದೆ.
ತಮಿಳುನಾಡಿನ ಕೃಷ್ಣಗಿರಿ ಜೆಲ್ಲೆಯ ಕಾಡಿನಿಂದ ಆಹಾರ ಹುಡುಕಿಕೊಂಡು ರಾಜ್ಯದ ಅರಣ್ಯ ಪ್ರದೇಶವಾದ ತಮಟಮಾಕನಹಳ್ಳಿ, ಬಂಗಾನತ್ತಂ, ಯರಗೋಳ್,ಬರಮಂದೆ ಕಾಡಿನ ಮೂಲಕ ಆನೆಗಳು ಪ್ರವೇಶ ಮಾಡಿ ಗ್ರಾಮಸ್ಥರಲ್ಲಿ ಆತಂಕದ ಮೂಡಿಸಿವೆ. ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದವು. ಕಳೆದ ರಾತ್ರಿ ಯರಗೋಳ್ ಅರಣ್ಯದಿಂದ ಆನೆಗಳು ಬಂಗಾರುನತ್ತಂ ಮೂಲಕ ತೊಪ್ಪನಹಳ್ಳಿ ಸುತ್ತಮುತ್ತಲಿನ ಕಾಡಿಗೆ ಲಗ್ಗೆ ಹಾಕಿದೆ. ಈ ಪ್ರದೇಶದಲ್ಲಿಯೂ ಗಜಪಡೆ ಬಾಳೆ ತೋಟ, ರಾಗಿ ಬೆಳೆಗಳಿಗೆ ನಷ್ಟ ಉಂಟು ಮಾಡಿವೆ ಎಂದು ರೈತರು ತಿಳಿಸಿದ್ದಾರೆ.
ಭಾನುವಾರ ತೊಪ್ಪನಹಳ್ಳಿಯಿಂದ ಕದರಿನತ್ತ ಕಾಡಿನತ್ತ ಆನೆಗಳು ಪಯಣ ಮುಂದುವರೆಸಿದೆ. ಈ ಪ್ರದೇಶದಲ್ಲಿ ಜನರು ಕುರಿ, ಮೇಕೆ ಮತ್ತು ದನಗಳನ್ನು ಮೇಯಿಸಿಕೊಂಡು ಬರಲು ಹೆಚ್ಚಾಗಿ ಕಾಡಿಗೆ ಹೋಗುವರು, ಆದರೆ ಆನೆಗಳು ಬಂದಿರುವ ಸುದ್ದಿ ತಿಳಿದು ಎರಡು ದಿನಗಳಿಂದ ಯಾರೂ ಕಾಡಿನೊಳಗೆ ಹೋಗುತ್ತಿಲ್ಲ. 6ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ನಿದ್ದೆಯಿಲ್ಲದೆ ಆನೆಗಳನ್ನು ಓಡಿಸಲು ಹರಸಾಹಸ ಮಾಡುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನಿಂದ ಪರಿಣಿತರನ್ನೂ ಕೆರೆಸಿಕೊಳ್ಳಲಾಗಿದೆಯಾದರೂ ಫಲಿತಾಂಶದಲ್ಲಿ ಮಾತ್ರ ಯಾವುದೇ ಪ್ರಗತಿ ಕಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

