ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ: ನ್ಯಾ. ಗೋಪಾಲಗೌಡ
ಚಿಂತಾಮಣಿ: ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂದು ಸವೋಚ್ಚನ್ಯಾಯಾಲಯದ ನ್ಯಾಯಾಧೀಶ ವಿ. ಗೋಪಾಲಗೌಡರು ಹೇಳಿದರು.
ಪಟ್ಟಣದ ನ್ಯಾಯಾಲದಯ ಆವರಣದಲ್ಲಿ ಭಾನುವಾರ ನ್ಯಾಯಾಲಯದ ಸಂಕಿರಣದ ಮೊದಲ ಮಹಡಿ ಹಾಗೂ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಅವರ ವಸತಿ ಗೃಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದಲ್ಲಿ ದೇಶದ ಅಭೀವೃದ್ಧಿಗೆ ನ್ಯಾಯಾಲಯಗಳ ಪಾತ್ರ ಮುಖ್ಯ. ಅಧಿಕಾರಿಗಳು ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಸರ್ಕಾರದಿಂದ ದೊರೆಯುವ ಸಲತ್ತುಗಳನ್ನು ಅರ್ಹರಿಗೆ ತಲುಪುವಂತೆ ಮಾಡಿದಾಗ ದೇಶ ಮುಂದುವರೆಯಲು ಸಾಧ್ಯ ಎಂದರು. ಶೈಕ್ಷಣಿಕವಾಗಿ ಮಹಿಳೆಯರು ಸ್ವಾವಲಂಬಿಗಳಾದಲ್ಲಿ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.
ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ.ಎಲ್. ಮಂಜುನಾಥ್, ಎನ್.ಕೆ. ಪಾಟೀಲ್, ಕೆ.ಎಚ್. ನಾಗಮೋಹನದಾಸ್, ಆನಂದ್ ಬೈರಾರೆಡ್ಡಿ, ಎ.ಎನ್. ವೇಣುಗೋಪಾಲಗೌಡ ಮಾತನಾಡಿದರು. ನ್ಯಾಯಮೂರ್ತಿಗಳಾದ ಬಿ.ಜೆ. ಚಂದ್ರಶೇಖರ್, ಸಲಗರೆ ಗೋಪಾಲ್ ಮತ್ತು ಕೆ.ಟಿ. ಕೃಷ್ಣಸ್ವಾಮಿ ಇದ್ದರು.
ನ್ಯಾಯಮೂರ್ತಿಗಳ ಕರ್ತವ್ಯ ಮಹತ್ವವಾದದು
ಚಿಂತಾಮಣಿ: ಜವಾಬ್ದಾರಿ ಸ್ಥಾನದಲ್ಲಿ ಕುಳಿತು ನ್ಯಾಯ ಸಮ್ಮತವಾದ ತೀರ್ಪುಗಳನ್ನು ನೀಡಿ ಭಾರತದ ನ್ಯಾಯಾಂಗವನ್ನು ಎತ್ತಿಹಿಡಿಯುವ ನ್ಯಾಯಮೂರ್ತಿಗಳ ಕರ್ತವ್ಯ ಮಹತ್ವವಾದದು ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ನ್ಯಾಯಾಲಯ ಸಂಕಿರಣದ ಮೊದಲ ಮಹಡಿ ಹಾಗೂ ವಸತಿ ಗೃಹ ಉದ್ಘಾಟನೆಯಲ್ಲಿ ಮಾತನಾಡಿ, ಕೆಜಿಎಫ್ ಗಣಿ ವಿಷಯದಲ್ಲಿ ನ್ಯಾಯವಾದಿಗಳು ನೀಡಿದ ಐತಿಹಾಸಿಕ ತೀರ್ಪಿನಿಂದ ಸಾವಿರಾರು ಕಾರ್ಮಿಕರು ಬೀದಿ ಪಾಲಾಗದಂತೆ ಶ್ರಮಿಸಿದ ನ್ಯಾ.ವಿ. ಗೋಪಾಲಗೌಡರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ನೀರಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಜೊತೆ ಚರ್ಚ್ಚಿಸಿ ಶೀಘ್ರ ಜಿಲ್ಲೆಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆಂದು ಹೇಳಿದರು. ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ನ್ಯಾಯಾಂಗ ದೇಶ ಬಲಿಷ್ಠಗೊಳಿಸಲು ಅಗತ್ಯವಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಹಿರಿಯ ವಕೀಲ ಬಿ.ಆರ್. ಶ್ರೀನಾಥ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ(ಪ್ರಭಾರ) ಕೆ. ಅಮರನಾರಾಯಣ, ವಕೀಲರ ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ, ಎಂ. ಬಸವರಾಜಯ್ಯ, ವಕೀಲರಾದ ಬೈರಾರೆಡ್ಡಿ, ಮಂಜುನಾಥರೆಡ್ಡಿ, ಎ.ಎಸ್. ನಾಗರಾಜ್, ಇಂದಿರಾ, ತಿಪ್ಪಯ್ಯ, ಪಿ.ಸಿ.ನಾರಾಯಣರೆಡ್ಡಿ, ಆರ್.ಕೆ. ವೆಂಕಟರವಣಪ್ಪ, ಶಾರದಾ, ದೇವರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

