ಕೇಂದ್ರದ ಅನುದಾನ ಸದುಪಯೋಗವಾಗಲಿ
ಕೆಜಿಎಫ್: ಕೇಂದ್ರದ ಯುಪಿಎ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಇಂತಹ ಯೋಜನೆಗಳ ಬಗ್ಗೆ ಅರ್ಹ ಫಲಾನುಭವಿಗಳಿಗೆ ತಲುಪಲು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಿದೆ. ಅದೇ ರೀತಿ ಅಂಬೇಡ್ಕರ್ ಅವರು ಹಿಂದುಳಿದ ವರ್ಗಗಳಿಗೆ ಸಮಬದ್ಧವಾದ ಹಕ್ಕು ನೀಡಬೇಕೆಂಬ ಅವರ ಹೋರಾಟಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕು ಎಂದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಬೆಮೆಲ್ ಕಾರ್ಖಾನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಹಕಾರ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜನ್ಮದಿನಾಚರಣೆ ಅಂಗವಾಗಿ ಬೆಮೆಲ್ನಗರದ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅದೇ ರೀತಿ ಬೆಮೆಲ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪಿ. ದ್ವಾರಕನಾಥ್ ಅವರು ಕಾರ್ಖಾನೆಯ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತಿದ್ದು ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಕೇಂದ್ರ ಸರ್ಕಾರ ಮತ್ತು ತಾವು ಸದಾ ಸಿದ್ಧರಿದ್ದು ಬೆಮೆಲ್ ಕಾರ್ಖಾನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಿವಿಧ ರೀತಿಯ ಉತ್ಪಾದನೆಗೆ ಆರ್ಡರ್ಗಳನ್ನು ಕೊಡಿಸಲು ತಾವು ರಕ್ಷಣಾ ಮಂತ್ರಿಗಳೊಂದಿಗೆ ಮತ್ತು ಪ್ರಧಾನಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಬಂಗಾರಪೇಟೆ ಕ್ಷೇತ್ರದ ಶಾಸಕ ಕೆ.ಎಂ. ನಾರಾಯಣಸ್ವಾಮಿ ಅವರು ಕೋಲಾರ ಜಿಲ್ಲೆಗೆ ಬೆಮೆಲ್ ಮತ್ತು ಬಿಜಿಎಂಎಲ್ ಎರಡು ಕಾರ್ಖಾನೆಗಳು ಪ್ರಸಿದ್ದವಾಗಿ ಕಾರ್ಯನಿರ್ವಹಿಸುತ್ತಿದ್ದವು. ಅದರಲ್ಲಿ ಚಿನ್ನದ ಗಣಿಯನ್ನು 2001ರಲ್ಲಿ ಮುಚ್ಚಿದ ನಂತರ ಬಿಜಿಎಂಎಲ್ ಕಾರ್ಮಿಕರು ತೀರಾ ಸಂಕಷ್ಟಕ್ಕೆ ಸಿಲುಕಿ ಹಲವಾರು ಸಮಸ್ಯೆಗಳನ್ನು ಎದಿರಿಸುತ್ತಿರುವುದರ ಜೊತೆಗೆ ಕೆಲಸ ಕಾರ್ಯಗಳನ್ನು ಹುಡಿಕಿಕೊಂಡು 15 ರಿಂದ 20 ಸಾವಿರ ಮಂದಿ ಬೆಂಗಳೂರು ಕೆಜಿಎಫ್ಗೆ ದಿನನಿತ್ಯದ ಪ್ರಯಾಣ ಬೆಳೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಗ್ಲೋಬಲ್ ಟೆಂಡರ್ ಬಿಜಿಎಂಎಲ್ ಚಿನ್ನದ ಗಣಿಯನ್ನು ಪುನರಾರಂಭಿಸಲು ಮುಂದಾಗಿದ್ದು ಮತ್ತೆ ಕೆಜಿಎಫ್
ಬೆಮೆಲ್ ಕಾರ್ಖಾನೆಯ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಪಿ. ದ್ವಾರಕನಾಥ್, ನಿರ್ದೇಶಕ ಸಿ.ಎನ್. ದುರ್ಗೇಶ್, ಬಿಇಎಂಇಎ ಅಧ್ಯಕ್ಷ ಆಂಜನೇಯರೆಡ್ಡಿ, ಮುಖಂಡರಾದ ಗಣೇಶ್ ನಟರಾಜನ್, ಎ.ಕೆ.ಹಾಲ್ದಾರ್, ಬಿ.ಆರ್.ವಿಶ್ವನಾಥ್, ತಂಗದುರೈ, ಶಿವಶಂಕರ್, ಎನ್.ಕೆ. ಸೋಮಶೇಖರಯ್ಯ, ಸದಸ್ಯರಾದ ಗೋಪಿನಾಥ್, ವಿಜಯಕುಮಾರ್, ಮಲರ್ಶೇಖರ್, ದಯಾಳನ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

