ಕಾರ್ಮಿಕ ಮಂಡಳಿಯಲ್ಲಿ ಸದಸ್ಯರಾಗಿ
ಬಾಗೇಪಲ್ಲಿ: ಅಸಂಟಿತ, ಕಟ್ಟಡ ನಿರ್ಮಾಣ, ಇಟ್ಟಿಗೆ ಮುಂತಾದ ಕೆಲಸಗಳನ್ನು ಮಾಡುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಮಂಡಳಿಯಲ್ಲಿ ಸದಸ್ಯರಾಗಿ ಆರ್ಥಿಕ ಸಹಾಯ ಹಡೆಯಬೇಕೆಂದು ತಾಲೂಕು ಸಿಐಟಿಯು ಅಧ್ಯಕ್ಷ ಬಿ. ಆಂಜನೇಯರೆಡ್ಡಿ ತಿಳಿಸಿದರು.
ಕಾರ್ಮಿಕ ಗಂಗಪ್ಪ ಅಕಾಲ ಮರಣದಿಂದ ಮೃತಪಟ್ಟ ಕಾರಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಶವಸಂಸ್ಕಾರಕ್ಕೆ ಬಿಡುಗಡೆಯಾದ 4 ಸಾವಿರ ರು.ಗಳ ಪರಿಹಾರವನ್ನು ಪತ್ನಿ ಅಶ್ವತ್ಥಮ್ಮ ಅವರಿಗೆ ವಿತರಣೆ ಮಾಡಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಲ್ಯಾಣ ಮಂಡಳಿಯಲ್ಲಿ ಗಂಗಪ್ಪ ಸದಸ್ಯರಾಗಿದ್ದು ಪ್ರತಿ ವರ್ಷ ಸದಸ್ಯತ್ವದ ವಂತಿಗೆ ಸಕಾಲಕ್ಕೆ ಪಾವತಿಸುತ್ತಾ ಬಂದಿದ್ದರು. ಸರ್ಕಾರ 50 ಸಾವಿರ ರು.ಗಳನ್ನು ಬಿಡುಗಡೆ ಮಾಡಿದ್ದು ಮುಂಗಡ ಹಣವಾಗಿ 34 ಸಾವಿರ ಗಂಗಪ್ಪ ಅವರ ಪತ್ನಿ ಅಶ್ವತ್ಥಮ್ಮ ಅವರ ಬ್ಯಾಂಕ್ ಖಾತೆಗೆ ಜಮೆಯಾಗಿರುತ್ತದೆ. ಉಳಿದ ಹಣ 20 ಸಾವಿರ ರು.ಗಳನ್ನು 15 ದಿನಗಳೊಳಗೆ ಅವರ ಖಾತೆಗೆ ಜಮೆಯಾಗುತ್ತದೆ ಎಂದರು. ಪಿ.ಎನ್. ಅಂಜನಪ್ಪ, ರವಿಕುಮಾರ್, ಶ್ರೀನಿವಾಸ್, ಮಂಜುನಾಥ, ನಂಜುಂಡಪ್ಪ, ಕೃಷ್ಣಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

