'ಸಂಘಟನೆಯಿಂದ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ'
ಕೋಲಾರ: ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದರೆ ರೈತರು ಸಂಘಟಿತರಾಗಬೇಕು ಎಂದು ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್ ಅಭಿಪ್ರಾಯಪಟ್ಟರು.
ತಾಲೂಕಿನ ನರಸಾಪುರ ಹೋಬಳಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೋಬಳಿ ಘಟಕ ರಚಿಸಿ ಮಾತನಾಡಿದ ಅವರು ಪೂರ್ವಜರು ಅಳವಡಿಸುತ್ತಿದ್ದ ಕೃಷಿ ಪದ್ಧತಿಗಳು ನಶಿಸಿ ಹೋಗಿವೆ. ಅವುಗಳನ್ನು ಮತ್ತೆ ಜಾರಿಗೆ ತರಬೇಕಾದರೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತಂದರೆ ಮಾತ್ರ ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಾರಾಯಣ ಗೌಡ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗಾಗಿ ಅನೇಕ ಖಾಸಗಿ ಕಂಪನಿಗಳು ತಲೆ ಎತ್ತಿವೆ. ಈ ಕಂಪನಿಗಳಿಗಾಗಿ ರೈತರ ಜಮೀನನ್ನು ಕಡಿಮೆ ಬೆಲೆಗೆ ನೀಡಿದ್ದರೂ ಕಂಪನಿಯ ಆಡಳಿತ ಮಂಡಳಿಯರು ರೈತರ ಮಕ್ಕಳಿಗೆ ಕೆಳದರ್ಜೆ ಉದ್ಯೋಗಗಳನ್ನು ನೀಡಿ ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯ ಜಾರಿಗಾಗಿ ರೈತ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದರೂ ಯಾವುದೇ ಸರ್ಕಾರ ರೈತರ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಟೀಕಿಸಿದರು. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿಕೊಡಲು ಜನ ಪ್ರತಿನಿಧಿಗಳು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುತ್ತಾರೆ ಹೋರತು ಜನರ ಹಾಗೂ ರೈತ ಹಿತಕಾಯಲು ಅವರಿಗೆ ಅಸಕ್ತಿಯಿಲ್ಲ ಎಂದು ದೂರಿದರು.
ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೇ ರೀತಿ ರೈತರನ್ನು ಶೋಷಣೆಗೆ ಒಳಪಡಿಸಿದರೆ ತಿನ್ನುವ ಅನ್ನಕ್ಕಾಗಿ ವಿದೇಶಗಳ ಬಳಿ ಭೀಕ್ಷೆ ಬೇಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಳ್ಳಿಯ ಯುವಕರು ವ್ಯವಸಾಯಕ್ಕೆ ಬೆನ್ನು ತಿರುಗಿಸದ ಕಾರಣ ಕೃಷಿ ಲಾಭದಾಯಕವಾಗಿ ಉಳಿದಿಲ್ಲ ಮತ್ತು ಅಧಿಕಾರಿಗಳ ಮತ್ತು ಸರ್ಕಾರಗಳ ನಿರ್ಲಕ್ಷ್ಯದಿಂದ ಕೃಷಿ ಇಂದು ಸಂಪೂರ್ಣವಾಗಿ ನಶಿಸಿ ಹೋಗುವುದಕ್ಕೆ ನೇರವಾಗಿ ಕಾರಣದಿಂದಾಗಿ ವ್ಯವಸಾಯ ನೀಸಾಯ ಎಂಬ ಗಾಧೆಯಂತಾಗಿದೆ. ನರಸಾಪುರ ಹೋಬಳಿ ಘಟಕದ ಅಧ್ಯಕ್ಷರಾಗಿ ಮಹೇಶ್ಕುಮಾರ್, ಕಾರ್ಯದರ್ಶಿಗಳಾಗಿ ನಾರಾಯಣ ಮೂರ್ತಿ, ರಹಮಾನ್, ಕಾರ್ಯಾಧ್ಯಕ್ಷರಾಗಿ ಗುರು, ಕಾನೂನು ಸಲಹೆಗರರಾಗಿ ವಕೀಲ ಪ್ರಕಾಶ್, ಉಪಾಧ್ಯಕ್ಷರಾಗಿ ವಿಜಯಕುಮಾರ್, ಬಾಬು, ರವಿ, ಸಂಚಾಲಕರಾಗಿ ಕುರ್ಕಿ ವೆಂಕಟಪ್ಪ, ವಲ್ಲಂಬಿ ಮೋಹಾನ್, ಹರೀಶ್, ಸದಸ್ಯರಾಗಿ ಮಾರುತಿ, ಗಣೇಶ್, ರವಿ, ರಾಜೇಶ್, ಶಿವು, ಸ್ವಾಮಿರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ನರಸಾಪುರ ಪುರುಷೋತ್ತಮ್, ವೇಮಗಲ್ ಅಮರನಾರಾಯಣ ಸ್ವಾಮಿ, ಮೂರಂಡಹಳ್ಳಿ ಶಿವಾರೆಡ್ಡಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

