ರೈತರಿಗೆ ಹಾಲಿನ ಬೆಂಬೆಲೆ ಹೆಚ್ಚಿಸಿ: ಶಾಸಕ ಮಂಜುನಾಥಗೌಡ
ಟೇಕಲ್: ರೈತರಿಗೆ ನೀಡುತ್ತಿರುವ ಹಾಲಿನ ಬೆಂಬಲ ಬೆಲೆಯನ್ನು ಅದರ ಗುಣಮಟ್ಟ ನೋಡಿ ಅಂದಾಜು ವೆಚ್ಚದ ಬಗ್ಗೆ ಚರ್ಚಿಸಿ ಹೆಚ್ಚಿಸಬೇಕೆಂದು ಹಾಗೂ ಈಗ ಕೊಟ್ಟಿರುವ ಬೆಂಬಲ ಬೆಲೆ 4 ತೀರ ಕಡಿಮೆ ಎಂದು ಶಾಸಕ ಮಂಜುನಾಥಗೌಡ ತಿಳಿಸಿದರು.
ಅವರು ಹುಣಸಿಕೋಟೆಯ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ನೂತನ ಕಟ್ಟಡ 'ಅಮೃತವರ್ಷಿಣಿ'ಯ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಹಸುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿದ್ದು, ಇದಾವುದಕ್ಕೂ ವಿಮಾ ಪಾಲಿಸಿಗಳಲಿಲ್ಲ. ಆದ್ದರಿಂದ ಇದಕ್ಕೆ ಸಂಘಗಳು ಹಾಗೂ ರಾಜ್ಯ ಸರ್ಕಾರ ಪರಿಹಾರ ಧನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ ಎಂದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ರಾಜ್ಯಾದ್ಯಂತ ಕಾಲುಬಾಯಿ ಜ್ವರಕ್ಕೆ ಮೃತಪಟ್ಟಿರುವ ರಾಸುಗಳಿಗೆ ತಲಾ 5 ಸಾವಿರ ನೀಡುವ ಬಗ್ಗೆ ಚರ್ಚೆಯಲ್ಲಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ವಿಳಂಬ ತೋರಿದಲ್ಲಿ ಪಕ್ಷದ ವತಿಯಿಂದ ನೀಡಲಾಗುತ್ತದೆ ಎಂದು ಮಂಜುನಾಥಗೌಡ ಪ್ರಕಟಿಸಿದರು.
ರಾಜ್ಯ 2ನೇ ಸ್ಥಾನದಲ್ಲಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೋ.ಚಿ.ಸ.ಹಾ. ಒಕ್ಕೂಟದ ಅಧ್ಯಕ್ಷ ಕೆ. ಗುಡಿಯಪ್ಪ ಅವರು ನೂತನ ಕಟ್ಟಡ 'ಅಮೃತವರ್ಷಿಣಿ'ಯನ್ನು ಉದ್ಘಾಟಿಸಿ, ರಾಜ್ಯದಲ್ಲಿ ಸಹಕಾರ ಕ್ಷೇತ್ರ ಬೃಹದ್ದಾಕಾರವಾಗಿ ಬೆಳೆದಿದ್ದು ಪ್ರಪಂಚದಲ್ಲಿಯೇ ಭಾರತದಲ್ಲಿನ ಕರ್ನಾಟಕ ರಾಜ್ಯಕ್ಕೆ 2ನೇ ಸ್ಥಾನ ಲಭಿಸಿದೆ. 56 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಲಾಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ 9 ಲಕ್ಷ 75 ಸಾವಿರ ಹಾಲು ಶೇಖರಣೆಯಾಗುತ್ತಿದ್ದು, 1680 ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ. ಕೋಲಾರದ ಹಾಲು ಸಿಂಗಾಪುರ ಹಾಗೂ ಕಾಶ್ಮೀರ ಗಡಿ ಕಾಯುವ ಯೋಧರಿಗೆ ಉತ್ತಮವಾದ ಹಾಲು ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿಯೇ ಮಾಲೂರು ತಾಲೂಕಿನ ಹಾಲು ಉತ್ತಮವಾಗಿದ್ದು, ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಹಾಗೂ ಶಾಸಕರ ಪ್ರತಿಕ್ರಿಯೆಗೆ ಸ್ಪಂದಿಸಿ ಕಾಲುಬಾಯಿ ಜ್ವರದಿಂದ ಮೃತಪಟ್ಟಿರುವ ಹಸುಗಳಿಗೆ ಪಶುಸಂಗೋಪನಾ ಸಚಿವರು ಇತ್ತೀಚೆಗೆ ಚರ್ಚಿಸಿದ್ದು, 15 ಸಾವಿರ ಸಹಾಯಧನ ನೀಡುವುದಾಗಿ ಹಾಗೂ ಈ ಬಗ್ಗೆ ಒಕ್ಕೂಟದಿಂದ 10 ಸಾವಿರ ನೀಡುವುದರ ಬಗ್ಗೆ ಸಭೆ ಕರೆದಿದ್ದು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
2.5 ಕೋಟಿ ಲಾಭ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಅಧ್ಯಕ್ಷರು ಹಾಗೂ ಕೋ.ಚಿ.ಸ.ಹಾ. ಒಕ್ಕೂಟದ ಹಾಲಿ ನಿರ್ದೇಶಕ ಡಾ. ಎ.ವಿ. ಪ್ರಸನ್ನ ಮಾತನಾಡಿ, ರಾಜ್ಯದಲ್ಲಿಯೇ ಅತೀ ಹೆಚ್ಚು ಹಾಲು ಸರಬರಾಜು ಮಾಡುವ 23 ಬಿಎಂಸಿ ಕೇಂದ್ರ ಹೊಂದಿರುವ ತಾಲೂಕಾಗಿ ಮಾಲೂರು ಪ್ರಥಮ ಸ್ಥಾನದಲ್ಲಿದೆ ಎಂದರು.
ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳಿಂದ 2012-13ರಲ್ಲಿ 2.5 ಕೋಟಿ ಲಾಭ ಬಂದಿದ್ದು, ಇದಕ್ಕೆ ಮುಖ್ಯ ಕಾರಣ ಬಿಎಂಸಿ ಕೇಂದ್ರದಿಂದ ಸಾಧ್ಯವಾಯಿತು. ನಂದಿನಿ ಗುಡ್ಲೈಫ್ ಟೆಟ್ರಾಪ್ಯಾಕ್ 2.5 ಲಕ್ಷ ಹಾಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಿಗುತ್ತಿದ್ದು, ಜನರ ಮನಸ್ಸಿನಲ್ಲಿ ನಂದಿನಿ ಹಾಲು ಸ್ಥಿರವಾಗಿ ನಿಂತಿದೆ ಎಂದರು. ಎಲ್ಲಾ ಹೈನೋದ್ಯಮ ಮಾಡುವ ರೈತರು ತಮ್ಮ ರಾಸುಗಳಿಗೆ ವಿಮಾ ಪಾಲಿಸಿ ಮಾಡಬೇಕೆಂದು ಕಿವಿಮಾತು ಹೇಳಿದರು.
ಹುಣಸಿಕೋಟೆ ಗ್ರಾಮದಲ್ಲಿ ಇಂತಹ ನೂತನ ಕಟ್ಟಡದ ಕಟ್ಟಲು ಸಹಕರಿಸಿದ ಮಾಜಿ ಮಂಡಲ್ ಪ್ರಧಾನರಾದ ಆರ್. ವೆಂಕಟೇಶಗೌಡ ಅವರನ್ನು ಅಭಿನಂದಿಸಲಾಯಿತು.
ಸನ್ಮಾನ: ಟೇಕಲ್ ಪ.ಪಂ. ಕ್ಷೇತ್ರದ ಸದಸ್ಯೆ ರತ್ನಮ್ಮ ನಂಜೇಗೌಡ ಮಾತನಾಡಿ, ಮಾಲೂರು ತಾಲೂಕಿನಲ್ಲಿ ಹುಣಸಿಕೋಟೆ ಗ್ರಾಮಕ್ಕೆ ತನ್ನದೇ ಆದಂತಹ ಹೆಸರಿದ್ದು ಅದಕ್ಕೆ ಮೂಲ ಕಾರಣ ದಿವಂಗತ ಆರ್. ಕೃಷ್ಣೇಗೌಡರು. ಅವರು ಬದುಕಿದ್ದರೆ ತಾಲೂಕಿನ ಶಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ನಮ್ಮ ರಾಜಕೀಯದ ಗುರು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥಗೌಡ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಅಧ್ಯಕ್ಷ ಕೆ. ಗುಡಿಯಪ್ಪ, ಮಾಜಿ ಅಧ್ಯಕ್ಷ ಡಾ. ಎ.ವಿ. ಪ್ರಸನ್ನ, ಮಾಜಿ ತಾ.ಪಂ. ಅಧ್ಯಕ್ಷ ಕೆ.ವೈ. ನಂಜೇಗೌಡ, ಹನುಮಂತಪ್ಪ, ವೆಂಕಟೇಶ್ ಕೋಲಾರ ಅವರಿಗೆ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು. ಸಹಕಾರ ಸಂಘದಿಂದ 5 ಸಾವಿರ ಮೌಲ್ಯದ ಚೆಕ್ನ್ನು ಉತ್ಪಾದಕ ದತ್ತಿಯಿಂದ ಹಾಲು ಉತ್ಪಾದಕ ಚಿನ್ನಮ್ಮ ಮೃತಪಟ್ಟ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ನೀರಿನ ಶುದ್ಧೀಕರಣ ಘಟಕವನ್ನು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಲೂರು ತಾಲೂಕು ತಹಸೀಲ್ದಾರ್ ಡಾ. ಸುಧಾ, ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಎಚ್. ಹನುಮಂತಪ್ಪ, 'ಅಮೃತವರ್ಷಿಣಿ'ಯ ರೂವಾರಿ ಹಾಗೂ ಮಾಜಿ ಮಂಡಲ್ ಪ್ರಧಾನರು ಆರ್. ವೆಂಕಟೇಶಗೌಡ, ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್, ಕೆ.ಜಿ. ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ಅಲುಮೇಲು ಮಂಗಮ್ಮ, ಜೆಡಿಎಸ್ ಮುಖಂಡ ಬಿ.ಜಿ. ಮುನಿಶಾಮಿಗೌಡ, ಗ್ರಾಪಂ ಸದಸ್ಯರಾದ ಎಚ್.ವಿ. ವಿನೋದ್ಕುಮಾರ್, ನಾರಾಯಣಸ್ವಾಮಿ, ಹಾಲು ಉಪ ವ್ಯವಸ್ಥಾಪಕರಾದ ಎಚ್.ವಿ. ವಿಶ್ವನಾಥ್, ವಿಸ್ತರಣಾಧಿಕಾರಿ ವೇಣು, ತಾ.ಹಾ.ಉ.ಸ.ಸಂ.ನೌ. ಸಂಘದ ಅಧ್ಯಕ್ಷರು ಕೆ. ನಾರಾಯಣಗೌಡ, ಹುಣಸಿಕೋಟೆ ಹಾಲು ನಿಗಮದ ಅಧ್ಯಕ್ಷ ವಿ. ರಾಮಾಚಾರಿ, ಮಾಜಿ ತಾ.ಪಂ. ಸದಸ್ಯ ಸೊಣ್ಣಪ್ಪ, ಮುಖಂಡರಾದ ಬಿ. ಸತೀಶ್, ಟೇಕಲ್ ಆಂಜಿನಪ್ಪ, ಕೆ.ಜಿ. ಹಳ್ಳಿ ಕೆ. ಮಂಜುನಾಥ, ಇನ್ನೂ ಗ್ರಾಮದ ಹಾಲು ಉತ್ಪಾದಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

