ಗ್ರಾಮಕ್ಕೆ ನುಗ್ಗಿದ ಕಾರ್ಖಾನೆ ತ್ಯಾಜ್ಯ; ಅಪಾರ ನಷ್ಟ
ಮಾಲೂರು: ಇಲ್ಲಿನ ಕೈಗಾರಿಕಾ ಪ್ರಾಂಗಾಣದಲ್ಲಿರುವ ಖಾಸಗಿ ಕಾರ್ಖಾನೆಯೂಂದು ತನ್ನ ತ್ಯಾಜ್ಯಗಳಿಗಾಗಿ ನಿರ್ಮಿಸಿದ್ದ ನೀರಿನ ಕೊಳವೆ ಒಡೆದು ವಿಷಯುಕ್ತ ರಾಸಾಯನಿಕ ಮಿಶ್ರಿತ ನೀರು ಬ್ಯಾಲಹಳ್ಳಿ ಗ್ರಾಮಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಬೆಳೆ ನಷ್ಟಗೊಳಿಸಿರುವ ಘಟನೆ ನಡೆದಿದೆ.
ರಾಸಾಯಿನಿಕ ಮಿಶ್ರಿತ ನೀರಿನಿಂದ ಗ್ರಾಮದ ಕುಡಿಯುವ ನೀರು ಕುಲಷಿತಗೊಂಡಿದ್ದು, ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಹಾಹಾಕಾರ ಎರ್ಪಟ್ಟಿದೆ. ನೀರು ನುಗ್ಗಿದ ರಭಸಕ್ಕೆ ಮನೆಯೂಂದು ಬಿದಿದ್ದು, ಗ್ರಾಮದ ಕೆಳಭಾಗದಲ್ಲಿರುವ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಬೆಳೆಗಳು ಕೊಚ್ಚಿಹೋಗಿ ಲಕ್ಷಾಂತರ ರು.ಗಳ ನಷ್ಟವುಂಟಾಗಿದೆ. ಗ್ರಾಮದ ಹಳ್ಳ ಕೂಳದಲ್ಲಿ ನಿಂತಿರುವ ರಾಸಾಯಿನಿಕ ಮಿಶ್ರಿತ ನೀರನ್ನು ಜಾನುವಾರುಗಳು ಕುಡಿಯಬಹುದೆಂಬ ಭಯ ಗ್ರಾಮಸ್ಥರಲ್ಲಿ ಮೂಡಿದೆ.
ಇದರಿಂದ ರಾತ್ರಿಯಿಡೀ ಜಾಗರಣೆಯಲ್ಲಿ ಕಳೆದ ಗ್ರಾಮಸ್ಥರು ಬೆಳಿಗ್ಗೆ 8 ಗಂಟೆಯಾದರೂ ಸಂಬಂಧಪಟ್ಟ ಕಾರ್ಖಾನೆ ಅಧಿಕಾರಿಗಳು ಬರದಿರುವುದನ್ನು ಖಂಡಿಸಿ ರಸ್ತೆಯಲ್ಲಿ ಧರಣಿ ಕುಳಿತರು. ಸ್ಥಳಕ್ಕೆ ಧಾವಿಸಿದ ಎಇಇ ಬದ್ರಿನಾಥ್ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಜೆಸಿಬಿ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸಿ, ಕೊಳ ನಿರ್ಮಿಸಿ ಅನಾಹುತಕ್ಕೆ ಮುಖ್ಯಕಾರಣವಾಗಿದ್ದ ಸಂಸ್ಥೆಯ ಅಭಿಯಂತರ ಸ್ವಾಮಿಯನ್ನು ಸ್ಥಳಕ್ಕೆ ಕರಿಸಿ ತರಾಟೆ ತೆಗೆದುಕೊಂಡರು. ಕಂದಾಯ ಅಧಿಕಾರಿ ರಮೇಶ್ ಭೇಟಿ ನೀಡಿ ಆಗಿರುವ ನಷ್ಟಗಳ ಬಗ್ಗೆ ಗ್ರಾಮಸ್ಥರರಿಂದ ಮಾಹಿತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

