ಕೋಲಾರ

ಕಾಲುಬಾಯಿ ಜ್ವರ; ಪರಿಹಾರಕ್ಕೆ ಮನವಿ

Published On :

ಶಿಡ್ಲಘಟ್ಟ: ಕಾಲುಬಾಯಿಜ್ವರದಿಂದ ರಾಸುಗಳು ಸಾವನ್ನಪ್ಪಿದ್ದು, ಪರಿಹಾರ ನೀಡವಂತೆ ಸರ್ಕಾರಕ್ಕೆ ಮನವಿ ನೀಡಲಾಗಿದೆ ಎಂದು ಕೋ-ಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ ತಿಳಿಸಿದರು.
15 ಸಾವಿರ ರು.ಗಳ ಪರಿಹಾರ ನೀಡಲು ಪಶುಸಂಗೋಪನಾ ಸಚಿವರು ಒಪ್ಪಿಗೆ ನೀಡಿದ್ದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಪರಿಹಾರ ನೀಡಲು ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಹಾಲು ಉತ್ಫಾದಕರ ಅಭಿವೃದ್ಧಿಗಾಗಿ ನಂದಿನಿ ಹಾಲು ಉತ್ಫಾಧಕರ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪನೆ ಮಾಡಿದ್ದು ಹಾಲು ಉತ್ಪಾಧಕರಿಗೆ ಅವಶ್ಯಕೆ ಇರುವ ಎಲ್ಲಾ ವಸ್ತುಗಳನ್ನು ಕಡಿಮೆ ಲಾಭಾಂಶದಲ್ಲಿ ವಿತರಿಸಲಾಗುವುದು ಎಂದರು.
ಹಾಲು ಉತ್ಪಾದಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಯಶಸ್ವಿನಿ ಯೋಜನೆ ಸದಸ್ಯರಾಗಲು 150 ರು.ಗಳನ್ನು ನೀಡಿದರೆ ಒಕ್ಕೂಟ 60 ರು.ಗಳನ್ನು ಬರೆಸುತ್ತದೆ ಪ್ರತಿಯೊಬ್ಬರೂ ಯಶಸ್ವಿನಿ ಮಾಡಿಸಬೇಕೆಂದರು. ಉತ್ಪಾದಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಫ್ ನೀಡುತ್ತಿದ್ದು ಈಗಾಗಲೆ 520 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.
ಶಿಡ್ಲಘಟ್ಟ ಶಿಬಿರ ಉಪ ವ್ಯವಸ್ಥಾಪಕ ಚಂದ್ರಪ್ಪ, ವಿಸ್ತರಣಾಧಿಕಾರಿ ಕೆ.ಎನ್. ಬೈರಾರೆಡ್ಡಿ, ತಮ್ಮರೆಡ್ಡಿ, ಉಮೇಶ್ ರೆಡ್ಡಿ, ಶ್ರೀನಿವಾಸ, ಅಮರೇಶ್, ನಿರ್ದೇಶಕರಾದ ಅಂಜನಪ್ಪ, ಗೋವಿಂದಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.