'ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ'
ಶಿಡ್ಲಘಟ್ಟ: ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ರಾಜಣ್ಣ ಹೇಳಿದರು.
ಬಶೆಟ್ಟಿಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಯಲು ಸೀಮೆ ಪ್ರದೇಶಗಳಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನದಿನಾಲೆಗಳ ಆಸರೆ ಇಲ್ಲದಿರುವುದರಿಂದ ಜೀವನ ಕಷ್ಟಕರವಾಗಿದೆ. ಸರ್ಕಾರ ವಿದ್ಯಾರ್ಥಿ ನಿಲಯ ನಿರ್ಮಿಸಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅನುಕೂಲ ಮಾಡಿಕೊಟ್ಟಿದೆಎಂದರು.
ಸಮಾಜ ಕಲ್ಯಾಣಾಧಿಕಾರಿಗಳು ಎಲ್ಲ ವಿದ್ಯಾರ್ಥಿನಿಲಯಗಳ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಸರಿಪಡಿಸಬೇಕು ಎಂದರು. ತಾಪಂ ಅಧ್ಯಕ್ಷ ಯರಬಚ್ಚಪ್ಪ ಮಾತನಾಡಿ, ಪಕ್ಷಾತೀತವಾಗಿ ಕೆಲಸ ಮಾಡಬೇಕು. ಹೋಬಳಿಯ ರಾಮಲಿಂಗೇಶ್ವರ ಬೆಟ್ಟದ ದೇವಾಲಯದ ಜೀಣೋದ್ಧಾರಕ್ಕಾಗಿ ತಾಪಂ ಸದಸ್ಯರ ನಿಧಿಯಿಂದ ಒಂದು ಲಕ್ಷ ರುಪಾಯಿ ಹಾಗೂ ಅಧ್ಯಕ್ಷರ ನಿಧಿಯಿಂದ ಒಂದು ಲಕ್ಷ ರುಪಾಯಿಗಳನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗುತ್ತದೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ನಾಗರಾಜಪ್ಪ, ಬಂಕ್ ಮುನಿಯಪ್ಪ, ಡಿ.ಬಿ. ವೆಂಕಟೇಶ್, ತಾಪಂ ಸದಸ್ಯೆ ಶಶಿಕಲಾದ್ಯಾವಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ, ಉಪಾಧ್ಯಕ್ಷ ಗೋವಿಂದಪ್ಪ, ಸದಸ್ಯೆ ನಾರಾಯಣಮ್ಮ, ಬಿ.ವಿ.ನಾರಾಯಣಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಪಿ.ಎಂ. ರಾಧಾಕೃಷ್ಣ, ದ್ಯಾವಪ್ಪ ಹಾಜರಿದ್ದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಶಿಡ್ಲಘಟ್ಟ: ಪ್ರತಿಯೊಬ್ಬ ಮನುಷ್ಯನೂ ಮಾನಸಿಕ ರೋಗಗಳಿಗೆ ಒಳಗಾಗುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ. ಕಿಶೋರ್ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ತಾಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅನೇಕ ಮಂದಿ ಜೀವನದಲ್ಲಿ ಖಿನ್ನತೆಯಿಂದಾಗಿ ಬಳಲಿ ಆತ್ಮಹತ್ಯೆಗೆ ಒಳಗಾಗುವುದು ಮಾಡುತ್ತಾರೆ, ಜೀವನದ ಪರಿದಿ ಮೀರಿದಾಗ ಪ್ರತಿಯೊಬ್ಬ ಮನುಷ್ಯನೂ ಒತ್ತಡಗಳಿಂದಾಗಿ ಮಾನಸಿಕವಾಗಿ ರೋಗಿಯಾಗುವುದಲ್ಲದೆ, ತಮ್ಮ ಜೀವನದ ಹಾದಿಯನ್ನು ತಪ್ಪುತ್ತಿದ್ದಾರೆ ಎಂದರು. ಪ್ರಧಾನ ಸಿವಿಲ್ನ್ಯಾಯಾಧೀಶ ಎಸ್. ಮಹೇಶ್, ಹೆಚ್ಚುವರಿ ಸಿವಿಲ್ನ್ಯಾಯಾಧೀಶ ವಿಜಯದೇವರಾಜ ಅರಸ್, ವಕೀಲರ ಸಂಘದ ಅಧ್ಯಕ್ಷ ಎಂ. ಪಾಪಿರೆಡ್ಡಿ, ಈ.ಡಿ. ಶ್ರೀನಿವಾಸ್, ಡಿ.ಎ. ಅಶ್ವತ್ಥನಾರಾಯಣ, ಇ. ನಾರಾಯಣಪ್ಪ, ವಕೀಲ ರವೀಂದ್ರನಾಥ್, ಮುನೇಗೌಡ ಹಾಜರಿದ್ದರು.
ದ.ರಾ. ಬೇಂದ್ರೆ ಕವನ ಗಾಯನ ಸ್ಪರ್ಧೆ
ಮಾಲೂರು: ಬೇಂದ್ರೆ, ಕುವೆಂಪು ಹಾಗೂ ಕಾರಂತರು ಕನ್ನಡ ಕಾವ್ಯ ಕಂಡ ಶಿವರಾಮಕೃಷ್ಣರಾಗಿದ್ದರು ಎಂದು ಸಾಹಿತಿ ಹಾಗೂ ಪ್ರಾಂಶುಪಾಲ ಡಾ. ಚಂದ್ರಶೇಖರ್ ನಂಗಲಿ ಹೇಳಿದರು.
ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ಬೆಂಗಳೂರಿನ ದ.ರಾ. ಬೇಂದ್ರೆ ಕಾವ್ಯ ಕೂಟದ ಸಹಕಾರದಲ್ಲಿ ಗುರುವಾರ ಆಯೋಜಿಸಿದ್ದ ದ.ರಾ. ಬೇಂದ್ರೆ ಕವನ ಗಾಯನ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ರಾ. ಬೇಂದ್ರೆ ಕಾವ್ಯ ಕೂಟದ ಡಾ.ಜಿ. ಕೃಷ್ಣಪ್ಪ ಮಾತನಾಡಿ, ಬಡತನ ಬೇಗೆಯಲ್ಲಿ ಬೆಂದ ಬೇಂದ್ರೆಯವರು ಬ್ರಿಟಿಷರ ಕೈ ಕೆಳೆಗೆ ಕೆಲಸ ಮಾಡಲು ಇಚ್ಚಿಸದೆ ತಮ್ಮಗೆ ಬಂದಿದ್ದ ತಹಸೀಲ್ದಾರ್ ಹುದ್ದೆ ತ್ಯಜಿಸಿ ಶಿಕ್ಷಕ ಹುದ್ದೆ ಆರಿಸಿಕೊಂಡವರು ಎಂದರು. ಇದೇ ಸಂಧರ್ಭದಲ್ಲಿ ಆಯೋಜಿಸಿದ್ದ ದ.ರಾ. ಬೇಂದ್ರೆ ಕವನ ಗಾಯನ ಸ್ವರ್ಧೆಯಲ್ಲಿ ಪೈನಲ್ ಬಿಎ ವಿದ್ಯಾರ್ಥಿನಿ ವೈ.ಜಿ. ಉಮಾ ಪ್ರಥಮ, 2 ನೇ ಬಿ.ಕಾಂನ ಗೋಪಿ ದ್ವೀತಿಯ, 2ನೇ ಬಿಎಸ್ಸಿ ವಿದ್ಯಾರ್ಥಿ ಮಧುಸೂಧನ್ ತೃತೀಯ ಹಾಗೂ ಸಾಮಾಧಾನಕರ ಬಹುಮಾನವಾಗಿ 2ನೇ ಬಿಎ ವಿದ್ಯಾರ್ಥಿ ಲಕ್ಷ್ಮಣ್ಗೆ ನೀಡಲಾಯಿತು. ಜಯರಾಂ ರೆಡ್ಡಿ, ಪ್ರೊ. ಮುನಿನಾರಾಯಣಪ್ಪ, ಶಾಂತಕುಮಾರ್, ಶಾಂತಮ್ಮ, ಮುನಿಯಪ್ಪ, ರಂಗಪ್ಪ, ವಿಶ್ವೇಶ್ವರಯ್ಯ, ಶ್ರೀನಿವಾಸ್, ವಿನಯ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

