ವಿದ್ಯಾರ್ಥಿಗಳಿಂದ ಗೊಂಬೆಗಳ ಪ್ರದರ್ಶನ
ಮಾಲೂರು: ಇಲ್ಲಿನ ಕೋಲಾರ ರಸ್ತೆಯಲ್ಲಿರುವ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಂದ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಗೊಂಬೆ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ಮಾತನಾಡಿ, ಮಕ್ಕಳಲ್ಲಿ ನಾಡ ಸಂಸ್ಕೃತಿ-ವೈಭವವನ್ನು ತಿಳಿಸುವಂತಹ ಇಂತಹ ಕಾರ್ಯಕ್ರಮಗಳು ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಮೈಸೂರು ಅರಸರ ಆಳ್ವಿಕೆಯ ಕಥೆಗಳು ಸೇರಿದಂತೆ ನೀತಿ ಪಾಠದ ಕಥೆಗಳನ್ನು ಹೇಳಿಸಲಾಯಿತು. ಶಾಲಾ ಮಕ್ಕಳಿಂದ ರಂಗೋಲಿ ಸ್ವರ್ಧೆ ಏರ್ಪಡಿಸಲಾಗಿತ್ತು. ಕ್ರಾಫ್ಟ್ ಶಿಕ್ಷಕ ದಯಾನಂದ್ ರವರು ನಿರ್ಮಿಸಿದ್ದ ಕೈಲಾಶ ದರ್ಶನ ಆರ್ಕಷಣೀಯವಾಗಿತ್ತು. ಮುಖ್ಯ ಶಿಕ್ಷಕಿ ಸುಧಾ ಶರ್ಮ, ಮಂಜುನಾಥ್, ಹರ್ಷಿತಾ, ಅಲ್ಲಾಬಕಾಷ್ ಇದ್ದರು.
ಅಕ್ರಮ ಮರಳು; ರು. 10 ಲಕ್ಷ ದಂಡ ವಸೂಲಿ
ಮುಳಬಾಗಲು: ಕಳೆದ ವಾರದಿಂದ ಕಂದಾಯ ಮತ್ತು ಪೊಲೀಸರು ವಶಪಡಿಸಿಕೊಂಡಿದ್ದ ಒಂದು ನೂರು ಅಕ್ರಮ ಮರಳು ಲಾರಿಗಳಿಂದ ಹತ್ತು ಲಕ್ಷ ರುಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ತಿಳಿಸಿದ್ದಾರೆ. ಅಕ್ರಮ ಮರಳು ಲಾರಿಗಳವರು, ದಂಡ ಪಾವತಿಯೊಂದಿಗೆ ತಾಲೂಕು ಕಚೇರಿಗೆ ಬಾಂಡ್ ಪೇಪರ್ನಲ್ಲಿ ಮುಚ್ಚಳಿಕೆ ಬರೆದು ಕೊಡಬೇಕು, ಮುಂದೆ ಮತ್ತೆ ಅಕ್ರಮ ಮರಳು ಸಾಗಣೆ ಮಾಡಿದಲ್ಲಿ ಕಾನೂನು ಕ್ರಮಕ್ಕೆ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
20ಕ್ಕೂ ಹೆಚ್ಚು ಲಾರಿಗಳ ವಶ: ತಾಲೂಕಿನ ಆವಣಿ ಮತ್ತು ಶಾಪೂರು ರಸ್ತೆಯ ಬಳಿ ಮಂಗಳವಾರ ರಾತ್ರಿ ಪೊಲೀಸರು ಇಪ್ಪತ್ತು ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಲಾರಿ ಲಾಭಿಗೆ ಮಣೆದ ಸರ್ಕಾರ 25 ಸಾವಿರದಿಂದ 50 ಸಾವಿರ ರು.ಗಳವರೆವಿಗೂ ಇದ್ದ ದಂಡವನ್ನು ಹತ್ತು ಸಾವಿರ ರು.ಗಳಿಗೆ ತಗ್ಗಿಸಿ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಈ ಕಾರಣವಾಗಿ ಅಕ್ರಮ ಮರಳು ಲಾರಿಗಳವರು ಹತ್ತು ಸಾವಿರ ದಂಡ ತೆತ್ತು ಸುಲಭವಾಗಿ ಬಿಡುಗಡೆಯಾಗುತ್ತಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

