ಎಲ್ಲ ಗ್ರಾಮಗಳಿಗೆ ಸೌಕರ್ಯ ನನ್ನ ಗುರಿ
ಟೇಕಲ್: ಮಾಲೂರು ತಾಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದೇ ನನ್ನ ಧ್ಯೇಯವಾಗಿದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು.
ಅವರು ಟೇಕಲ್ನ ಕೆ.ಜಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ಅಂದಾಜು ವೆಚ್ಚ ಒಂದೂ ಕಾಲು ಕೋಟಿಯಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮಾಲೂರು ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶತಪ್ರಯತ್ನ ನಡೆಸುವುದಾಗಿ, ಯಾವುದೇ ಕಚೇರಿಗಳಲ್ಲಿ ರೈತರಿಗೆ ತೊಂದರೆಯಾಗದಂತೆ ಅವರ ಕೆಲಸ ಕಾರ್ಯಗಳನ್ನು ನಿಯಮಾನುಸಾರ ಮಾಡಿಕೊಡಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಟೇಕಲ್ ಜಿ.ಪಂ. ಸದಸ್ಯೆ ರತ್ನಮ್ಮನಂಜೇಗೌಡ ಮಾತನಾಡಿ ನನ್ನ ಜಿ.ಪಂ. ಕ್ಷೇತ್ರದಲ್ಲಿ ಅಂದಾಜು ವೆಚ್ಚ 4 ಕೋಟಿ ರೂಪಾಯಿನಲ್ಲಿ 32 ಓವರ್ಹೆಡ್ ಟ್ಯಾಂಕನ್ನು ಕುಡಿಯುವ ನೀರಿಗಾಗಿ ಅಳವಡಿಸಲಾಗಿದ್ದು ಇದಕ್ಕೆ ಮುಖ್ಯ ಕಾರಣ ಶಾಸಕ ಮಂಜುನಾಥಗೌಡರ ಕೃಪೆಯಿಂದ ಈ ಬಾರಿ ನನ್ನ ಕ್ಷೇತ್ರದ ಜನತೆಗೆ ಕುಡಿಯುವ ನೀರಿಗೆ ನನ್ನ ಕೈಲಾದಷ್ಟು ಕೆಲಸ ಮಾಡಿರುವುದಾಗಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡರು.
ಹಿಂದಿನ ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿರವರ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ತರುವುದಕ್ಕೆ ಬಹುತೇಕ ಅಡ್ಡಿಪಡಿಸಿದರೆಂದು ಹಾಗೂ ಮಾನಸಿಕ ಹಿಂಸೆ ನೀಡಿದರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶಾಸಕರು ಬಸಾಪುರ, ಅನಿಗಾನಹಳ್ಳಿ, ಕೂಗಿಟಿಗಾನಹಳ್ಳಿಗಳಲ್ಲಿ ಜಿ.ಪಂ. ನಿಂದ ಮಂಜೂರಾಗಿದ್ದ ಓವರ್ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಹಾಗೂ ವೀರಕಪುತ್ರ, ಕೆಂಪಸಂದ್ರ, ಹುಣಸಿಕೋಟೆ, ಉಳ್ಳೇರಹಳ್ಳಿ, ಜಂಗಾಲಹಳ್ಳಿ, ಬಲ್ಲೇರಿ, ಕದಿರೇನಹಳ್ಳಿ, ಓಬಟ್ಟಿ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಇವರ ಜೊತೆ ಮಾಜಿ ತಾ.ಪಂ. ಅಧ್ಯಕ್ಷ ಕೆ.ವೈ. ನಂಜೇಗೌಡ ಜೊತೆಗಿದ್ದರು. ಪ್ರತಿ ಗ್ರಾಮದಲ್ಲೂ ಶಾಸಕ ಮಂಜುನಾಥಗೌಡರಿಗೆ ಆರತಿ ಬೆಳಗಿ ಸ್ವಾಗತಿಸಿದ್ದು ವಿಶೇಷವೆನಿಸಿತು. ಹಾಗೂ ಜನರ ಕುಂದು ಕೊರತೆಗಳನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ವರ್ಗಾಯಿಸಿ ಈ ಕೆಲಸವನ್ನು ಆದಷ್ಟು ಬೇಗ ಮಾಡಬೇಕೆಂದು ಶಾಸಕರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಭಾರಿ ಇಒ ಬದ್ರಿನಾಥ್, ಜೂನಿಯರ್ ಇಂಜಿನಿಯರ್ ಪಿ.ಆರ್. ದೇವರಾಜ್, ಜಿ.ಪಂ. ಮಾಜಿ ಸದಸ್ಯ ಹನುಮಂತಪ್ಪ, ಕೆ.ಜಿ.ಹಳ್ಳಿ ಗ್ರಾ.ಪಂ.ನ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್, ಉಪಾಧ್ಯಕ್ಷೆ ಅಲುಮೇಲುಮಂಗಮ್ಮ, ಸದಸ್ಯರಾದ ಸಿ. ವೆಂಕಟೇಶ್, ಮುಖಂಡರಾದ ಬಿ.ಜಿ. ಮುನಿಶಾಮಿಗೌಡ, ಮಿಟ್ಟಿಗಾನಹಳ್ಳಿ ರಾಮಕೃಷ್ಣಪ್ಪ, ಅನಿಗಾನಹಳ್ಳಿ ಬೈರೇಗೌಡ, ಪೆಡವನಹಳ್ಳೀ ನಂಜಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

