ಕೋಲಾರ

ಸ್ವಚ್ಛತೆಗೆ ಸಾರ್ವಜನಿಕರೂ ಸಹಕರಿಸಬೇಕು

Published On :

ಕಪ್ರ ವಾರ್ತೆ   ಮುಳಬಾಗಲು   ಅ.11
ಪುರಸಭೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಸಾರ್ವಜನಿಕರು ನೈರ್ಮಲ್ಯ ಕಾಪಾಡಲು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್ ಹೇಳಿದರು.
ಪಟ್ಟಣದ ಶಿವಕೇಶವ ಸಭಾಂಗಣದಲ್ಲಿ ಸ್ವರ್ಣ ಜಯಂತಿ ರೋಜ್ಗಾರ್ ಯೋಜನೆಯಡಿ, ಪುರಸಭೆ ಮತ್ತು ಶಿವಕೇಶವ ಸಂಘದಿಂದ ಶುಕ್ರವಾರ ಆರೋಗ್ಯ ಶಿಕ್ಷಣ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಶಿಬಿರದಲ್ಲಿ ಮಾತನಾಡಿ, ನೈರ್ಮಲ್ಯ ಕಾಪಾಡುವ ಹಂತದಲ್ಲಿ ಹಂದಿಗಳನ್ನು ಆಚೆ ಸಾಗಿಸುವ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತವಾಗುವುದನ್ನು, ಕೋತಿಗಳನ್ನು ಬೇರೆಗೆ ಸಾಗಿಸುವಾಗ, ಸಾರ್ವಜನಿಕರಿಗೆ ತೊಂದರೆ ಕೊಡುವ ಬೀದಿ ನಾಯಿಗಳನ್ನು ಸ್ಧಳಾಂತರಿಸುವಾಗ ಎದುರಾಗುವ ಪ್ರತಿರೋಧಗಳನ್ನು ವಿವರಿಸಿದರು.
ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಪುರಸಭೆ ಸದಸ್ಯ  ಜಿ. ಠಾಕೂರ್ ಸಿಂಗ್, ಪಟ್ಟಣದ ಅಭಿವೃದ್ಧಿಗೆ ಪುರಸಭೆ ಬದ್ದವಾಗಿದೆ ಎಂದರು. ವೈದ್ಯರಾದ ಡಾ. ಹರೀಶ್, ಮಹಿಳೆಯರ ಆರೋಗ್ಯದ ಕುರಿತು ಮಾತನಾಡಿದರು.
ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಆರ್. ಗೀತಾ, ಸಮಾದಾಯ ಸಂಘಟನಾಧಿಕಾರಿ ಎಚ್. ಶ್ರೀನಿವಾಸ್,  ಶಿವಕೇಶವ ಸಂಘದ ಪ್ರತಿನಿಧಿಗಳಾದ ಮೈತ್ರಿ ನಾಗರಾಜರಾವ್, ಮಂಜುಶ್ರೀ, ಭಾರತಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.