ಕೈಮಗ್ಗ ವಸ್ತ್ರಗಳ ಪ್ರದರ್ಶನ ಆರಂಭ
ಚಿಕ್ಕಬಳ್ಳಾಪುರ: ನಗರದ ಡಾ. ಅಂಬೇಡ್ಕರ್ ಭವನದಲ್ಲಿ 5 ದಿನಗಳ ಕೈಮಗ್ಗ ವಸ್ತ್ರಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಶುಕ್ರವಾರದಿಂದ ಪ್ರಾರಂಭವಾಗಿದೆ.
ರಾಜ್ಯ ಹಾಗೂ ಹೊರ ರಾಜ್ಯಗಳ ಕೈಮಗ್ಗ ನೇಕಾರರಿಂದ ವೈವಿಧ್ಯಮಯ ಮತ್ತು ಆಕರ್ಷಕ ರೀತಿಯಲ್ಲಿ ತಯಾರಿಸಲ್ಪಟ್ಟ ರಮಣೀಯ ಮೊಳಕಾಲ್ಮುರು ಅಪ್ಪಟ ರೇಷ್ಮೆ ಸೀರೆಗಳು, ಉತ್ತರ ಕರ್ನಾಟಕದ ಇಳಕಲ್ ಸೀರೆಗಳು, ಚಿಂತಾಮಣಿ ರೇಷ್ಮೆ ಸೀರೆಗಳು, ಮಲೆನಾಡಿನ ಕೈಮಗ್ಗ ನೇಕಾರರು ಉತ್ಪಾದಿಸಿದ ವಿನೂತನ ಶೈಲಿಯ ಬಟ್ಟೆಗಳು, ಹತ್ತಿ ಉತ್ಪನ್ನಗಳಾದ ಪಂಚೆ, ಬೆಡ್ ಶೀಟ್, ಟವಲ್, ಲುಂಗಿ, ಉಣ್ಣೆ ಕಂಬಳಿಗಳು ಸೇರಿಂತೆ ನಾನಾ ರೀತಿಯ ಕೈಮಗ್ಗ ವಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಜವಳಿ ಮಂತ್ರಾಲಯ, ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಂಯಕ್ತ ಆಶ್ರಯದಲ್ಲಿ ಅ.11 ರಿಂದ ಅ.15 ರವರೆಗೂ ನಡೆಯುವ ವಸ್ತ್ರ ನಂದಿ-2013 ಕೈಮಗ್ಗ ವಸ್ತ್ರಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಉದ್ಘಾಟಿಸಿದರು.
ನಮ್ಮ ದೇಶ ತನ್ನದೇ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವಂತೆ ಕಲೆಯಲ್ಲೂ ವಿಶೇಷತೆ ಹೊಂದಿದೆ. ಕೈಮಗ್ಗ ವಸ್ತ್ರಗಳ ತಯಾರಿಕೆಯ ಆಕರ್ಷಕ ಕೌಶಲ್ಯ ವಿಶ್ವದ ಗಮನ ಸೆಳೆದಿದೆ ಎಂದ ಅವರು, ಕೈಮಗ್ಗ ನೇಕಾರರು ತಯಾರಿಸುವ ಬಟ್ಟೆಗಳನ್ನು ಜನರು ಹೆಚ್ಚಿಗೆ ಖರೀದಿಸುವ ಮೂಲಕ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.
ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಸದಸ್ಯ ಕೆ.ಎನ್. ಕೇಶವರೆಡ್ಡಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

