ಕೋಲಾರ

'ಅಂಚೆ ಇಲಾಖೆ ಗ್ರಾಹಕ ಸ್ನೇಹಿಯಾಗಲಿ'

Published On :

ಕೋಲಾರ: ಅಂಚೆ ಇಲಾಖೆಯನ್ನು ಗ್ರಾಹಕ ಸ್ನೇಹಿಯಾಗಿ ಮುಂದುವರೆಸಲು ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಲಾರ ವಿಭಾಗದ ಕಿರಿಯ ಅಂಚೆ ಅಧೀಕ್ಷಕ ಸಿ. ಮುನಿರಾಮಯ್ಯ ತಿಳಿಸಿದರು.
ನಗರದ ಗೌರಿಪೇಟೆಯ ಮುಖ್ಯ ಅಂಚೆ ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವ ಅಂಚೆ ದಿನಾಚಾರಣೆ ಹಾಗೂ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಅ.9 ರಿಂದ 15 ರವರೆಗೆ ರಾಷ್ಟ್ರೀಯ ಅಂಚೆ ಸಪ್ತಾಹವನ್ನು ದೇಶದೆಲ್ಲದೆ ಎಲ್ಲಾ ಅಂಚೆ ಕಚೇರಿಗಳ ಮೂಲಕ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಂವಾದ, ಅಂಚೆ ಪತ್ರಗಳ ಬಗ್ಗೆ ವಿವರಣೆ, ಅಂಚೆ ಉಳಿತಾಯ ದಿನ, ಅಂಚೆ ಚೀಟಿಗಳ ಸಂಗ್ರಹಣೆ, ಶಾಲಾ ಮಕ್ಕಳೊಂದಿಗೆ ಪತ್ರಬರಹ, ಅಂಚೆ ಜೀವ ವಿಮಾ, ಗ್ರಾಮೀಣ ಅಂಚೆ, ಅಂಚೆ ಇಲಾಖೆ ಪ್ರಾರಂಭಿಸಿರುವ ಇಎಮ್ಒ, ಐಎಂಒ, ಐಎಂಟಿಎಸ್, ಲಾಜಿಸ್ಟಿಕ್ ಪೋಸ್ಟ್ ಇತ್ಯಾದಿ ಚಟುವಟಿಕೆ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು.
ಇದಲ್ಲದೆ ಸರ್ಕಾರದಿಂದ ಜಾರಿಯಾಗಿರುವ ವೃದ್ಧಾಪ್ಯವೇತನ,ಅಂಗವಿಕಲವೇತನ, ಸಂಧ್ಯಾಸುರಕ್ಷಾ ಯೋಜನೆಗಳ ಬಗ್ಗೆ ಫಲಾನುಭವಿಗಳಗೆ ತಿಳಿಸಿಕೊಡುವುದು ಸಪ್ತಾಹದ ಒಂದು ಭಾಗವಾಗಿದೆ ಎಂದರು.
ಕೋಲಾರದ ಅಂಚೆ ವಿಭಾಗದಲ್ಲಿ 2 ಪ್ರಧಾನ ಅಂಚೆ ಕಚೇರಿ, 64 ಉಪ ಅಂಚೆ ಕಚೇರಿ, 365ಶಾಖಾ ಅಂಚೆ ಕಚೇರಿ, 5 ಅಂಚೆ ಉಪ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಪ್ರಧಾನ ಆಡಳಿತ ಕಚೇರಿ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಇಲಾಖೆ ಇತ್ತೀಚೆಗೆ ಕರ್ನಾಟಕದ ಆಯ್ದ ಅಂಚೆ ಕಚೇರಿಗಳಲ್ಲಿ ಮೊಬೈಲ್ ಮೂಲಕ ಹಣ ವಿತರಿಸುವ ನೂತನ ಯೋಜನೆ ಪ್ರಾರಂಭಿಸಿದೆ, ಶ್ರೀಘ್ರದಲ್ಲೆ ಕೋಲಾರ ಅಂಚೆ ವಿಭಾಗಕ್ಕೂ ಈ ಯೋಜನೆ ಕಾರ್ಯರಂಭ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕ ವಿ.ಎನ್. ಶಿವಶಂಕರ ಪ್ರಸಾದ್, ನಿರೀಕ್ಷರು ಎನ್. ಗೋವಿಂದರಾಜ್, ಅಂಚೆ ಪಾಲಕ ಟಿ.ಪಿ. ನಾರಾಯಣಸ್ವಾಮಿ, ವಿಮಾ ಅಭಿವೃದ್ಧಿಅಧಿಕಾರಿ ಬಿ.ವಿ. ಸತೀಶ್ ಕುಮಾರ್, ಮಾರುಕಟ್ಟೆ ಅಧಿಕಾರಿ ಕೆ.ಎನ್. ರಮೇಶ್ ಬಾಬು ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.