ಒತ್ತುವರಿ ಜಮೀನು ತೆರವುಗೊಳಿಸಿದ ತಹಸೀಲ್ದಾರ್
ಬಾಗೇಪಲ್ಲಿ: ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಆಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ದಂಡಾಧಿಕಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಸರ್ಕಾರಿ ಜಮೀನು, ರಾಜಕಾಲುವೆ ಮತ್ತು ಕುಂಟೆಗಳನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಕಾರ್ಯಕರ್ತರು ಹಾಗೂ ಕೊತ್ತಕೋಟೆ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ರವರು ಸ್ಥಳದಲ್ಲಿಯೇ ಮುಕ್ಕಾಂ ಹೂಡಿ ಆಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ಮತ್ತು ರಾಜ ಕಾಲುವೆ ಹಾಗೂ ಚೆಕ್ ಡ್ಯಾಂಗಳಿಗೆ ಅಳವಡಿಸಲಾಗಿದ್ದ ಮುಳ್ಳಿನ ತಂತಿಯನ್ನು ರೈತ ಮುಖಂಡರ ಸಮಾಕ್ಷಮದಲ್ಲಿ ತೆರವುಗೊಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಎನ್ಹೆಚ್ 7 ಕ್ಕೆ ಹೊಂದಿಕೊಂಡಿರುವ ಕೊತ್ತಕೋಟೆ ಗ್ರಾಮದ ಸರ್ವೆನಂ.50,51,52,57,17ರ ಜಮೀನನ್ನು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅರಿಕರೆ ಕೃಷ್ಣಾರೆಡ್ಡಿ ಮತ್ತು ಆತನ ಮಗ ಲೋಕೋಶ್ ರೆಡ್ಡಿ ಎಂಬವರು ಸುಮಾರು 25 ಎಕರೆ ಕ್ರಯ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಜಮೀನು ಪಕ್ಕದಲ್ಲಿಯೇ ರಾಜಕಾಲುವೆ ಇದ್ದು, ಈ ಕಾಲುವೆಯ ಮುಖಾಂತರವೇ ಮಳೆಯ ನೀರು ಹರಿದು ಚಿತ್ರಾವತಿ ನದಿಗೆ ಸೇರುತ್ತದೆ. ಈ ಭಾಗದ ರೈತರಿಗೆ,ಜಾನುವಾರುಗಳಿಗೆ ಹಾಗೂ ರೈತರ ಉಪಕಸಬುಗಳಿಗೆ ಅನುಕೂಲವಾಗುವ ಉದ್ದೇಶದಿಂದ 4 ಚೆಕ್ ಡ್ಯಾಂಗಳನ್ನು ಹಾಗೂ ಒಂದು ಗೋಕುಂಟೆಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಆದರೆ ಅರಿಕರೆ ಕೃಷ್ಣಾರೆಡ್ಡಿಯವರು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಮಾರು 5 ಎಕರೆ ಸರ್ಕಾರಿ ಜಮೀನು ಸೇರಿದಂತೆ ರಾಜಕಾಲುವೆ ಮತ್ತು ಗೋಕುಂಟೆಯನ್ನು ಆಕ್ರಮವಾಗಿ ಒತ್ತುವರಿ ಮಾಡಿಕೊಂಡು ಈ ಜಮೀನಿನ ಅಕ್ಕ-ಪಕ್ಕದ ಜಮೀನು ಇರುವ ಸಣ್ಣ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರುವುದಕ್ಕೆ ದಾರಿಯನ್ನು ಬಿಡದೆ ಮುಳ್ಳಿನ ತಂತಿಯನ್ನು ಅಳವಡಿಸುವ ಮೂಲಕ ಈ ಭಾಗದ ರೈತರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕೋತ್ತಕೋಟೆ ಗ್ರಾಮದ ರೈತರು ಹಾಗೂ ರೈತ ಸಂಘದ ಕಾರ್ಯಕರ್ತರು ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ತಾಲೂಕು ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ ಸರ್ವೆ ಮಾಡಿಸಿದಾಗ ಅರಿಕೆರೆ ಕೃಷ್ಣಾರೆಡ್ಡಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದಾಗಿ ಸ್ಪಷ್ಟವಾಗಿತ್ತು. ಇದರಿಂದ ಆಕ್ರಮ ಒತ್ತುವರಿ ತೆರವುಗೊಳಿಸಲಾಯಿತು.
ರೈತ ಸಂಘದ ಬಿ. ರಘುನಾಥರೆಡ್ಡಿ, ಎಚ್.ಎಸ್. ಬಾಜೀಸಾಬ್, ಕೆ.ಬಿ. ಆದಿನಾರಾಯಣರೆಡ್ಡಿ, ಸುಬ್ಬರೆಡ್ಡಿ, ಅಂಜಿನಪ್ಪ, ನಾಗಿರೆಡ್ಡಿ, ಕೆ.ಆರ್. ಅಂಜಿನಪ್ಪ, ಸುಬ್ಬಾರೆಡ್ಡಿ, ಮಂಜುನಾಥ, ನಾಗರಾಜ, ಶಿವಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

