ಕೋಲಾರ

ಟೀಕೆಗೆ ಗುರಿಯಾದ ಪಶು ಆಸ್ಪತ್ರೆ ಉದ್ಘಾಟನೆ

Published On :

ಬಂಗಾರಪೇಟೆ: ಕಾಲುಬಾಯಿ ಜ್ವರ ವ್ಯಾಪಕವಾಗಿ ಕಾಣಿಸಿಕೊಂಡಿರುವುದರಿಂದ ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿ 16ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯ ಉದ್ಘಾಟನೆ ಗ್ರಾಮಸ್ಥರಿಗೆ ಹಾಗೂ ಸ್ಥಳೀಯ ಪ್ರತಿನಿಧಿಗಳ ಗಮನಕ್ಕೆ ತರದೆ ನೆರವೇರಿಸಿ ಎಲ್ಲರ ಟೀಕೆಗೆ ಗುರಿಯಾಗಿದೆ.
ಕ್ಷೇತ್ರದಲ್ಲಿ ಎರಡು ತಿಂಗಳಿಂದ ಹಸುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡು ಹತ್ತಾರು ಹಸುಗಳು ಮೃತಪಟ್ಟಿದೆ, ಹಸುಗಳ ಚಿಕಿತ್ಸೆಗಾಗಿ ಎಲ್ಲರೂ ಪಟ್ಟಣಕ್ಕೆ ಬರಬೇಕಿದ್ದು ರೈತರಿಗೆ ಅನುಕೂಲವಾಗಲೆಂದು ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಪಶು ಆಸ್ಪತ್ರೆ ನಿರ್ಮಿಸಿದೆ. ಇದರೆ ಉದ್ಘಾಟನೆಗೆ ಸ್ಥಳೀಯ ಪ್ರತಿನಿಧಿಗಳನ್ನು ಹಾಗೂ ಜಿಪಂ ಸದಸ್ಯರ ಗಮನಕ್ಕೂ ತರದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿರನ್ನು ಆಹ್ವಾನಿಸಿದ್ದು ಶಾಸಕರಲ್ಲಿಯೂ ಅಸಮಾಧಾನಕ್ಕೆ ಕಾರಣವಾಯಿತು. ಉದ್ಘಾಟನೆ ವೇಳೆ ಕ್ಷೇತ್ರದ ಜಿಪಂ ಸದಸ್ಯ ಆನಂದ್ರನ್ನು ಕಡೆಗಣಿಸಿದಕ್ಕೆ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು. ನಂತರ ಶಾಸಕ ನಾರಾಯಣಸ್ವಾಮಿ ಸಮಾದಾನಪಡಿಸಿ ಸಮಾರಂಭಕ್ಕೆ ಕರೆ ತಂದರು. ಪಶುಸಂಗೋಪನ ಇಲಾಖೆ ಕಾರ್ಯಕ್ರಮವಾಗಿದ್ದರೂ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಗದೀಶ್ ಗೈರು ಹಾಜರಾಗಿದ್ದರು. ಇಂದಿನಿಂದಲೆ ಕಟ್ಟಡದಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಂಡು ರೈತರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಶಾಸಕ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸರಳ ಸಮಾರಂಭದಲ್ಲಿ ಚಿಕ್ಕಅಂಕಂಡಹಳ್ಳಿ ಪಂ-ಅಧ್ಯಕ್ಷೆ ಅನಿತಾ, ಸದಸ್ಯ ಚಂದ್ರಯ್ಯಶೆಟ್ಟಿ, ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಜಿಪಂ ಸದಸ್ಯ ಆನಂದ್, ಶ್ರೀನಿವಾಸಗೌಡ, ವೆಂಕಟೇಶಪ್ಪ  ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.