ಕೋಲಾರ

ಆಮದು ನಿಲ್ಲಿಸಲು ಒತ್ತಾಯ

Published On :

ಕೋಲಾರ: ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಲು, ಶಾಶ್ವತ ನೀರಾವರಿ ಸೌಲಭ್ಯ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ರೈತರ ಸಮಾವೇಶ ಅ.28 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಾಪುರ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಭಾರತ ಸರ್ಕಾರದ ಸಹಿ ಮಾಡಿದ ನಂತರ ಮುಕ್ತ ಮಾರುಕಟ್ಟೆ ನೀತಿಯ ಹೆಸರಿನಲ್ಲಿ ದೇಶದ ರೈತರು ಉತ್ಪಾದಿಸುವ ವಸ್ತುಗಳನ್ನು ಭಾರತ ಸರ್ಕಾರ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾ ನಮ್ಮ ದೇಶದ ರೈತರನ್ನು ಸಂಪೂರ್ಣವಾಗಿ ಪರಾವಲಂಭಿಗಳನ್ನಾನಾಗಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಉಪಾಧ್ಯಕ್ಷ ಬಿ. ಅಶೋಕ್ ಮಾತನಾಡಿ, ಈಗಾಗಲೆ ಸಕ್ಕರೆ, ರೇಷ್ಮೆ, ಗೋಧಿ, ತಂಬಾಕು, ಇತರೇ ಪದಾರ್ಥಗಳನ್ನು ಕಡಿಮೆ ಶುಲ್ಕ ವಿಧಿಸಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮತ್ತಷ್ಟು ಕೃಷಿ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿದರು. ಗೋಷ್ಠಿಯಲ್ಲಿ ಹೂಹಳ್ಳಿನಾಗರಾಜ್, ಬಂಗವಾದಿ ನಾಗರಾಜ ಗೌಡ, ಕೆ. ಶ್ರೀನಿವಾಸ ಗೌಡ, ಹುಲ್ಕೂರು ಹರಿಕುಮಾರ್ ನೀಲಕಂಠಪುರ ಮುನೇಗೌಡ, ವೆಂಕಟೇಶ್ ಗೌಡ, ಈಕಂಬಳ್ಳಿ ಮಂಜುನಾಥ, ಕೆಂಬೋಡಿ ಕೃಷ್ಣೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.