ಪ್ರತಿನಿತ್ಯ ಗಾಂಧೀಜಿಯವರ ಸ್ಮರಣೆ ನಡೆಯಬೇಕು: ಶಿವಪ್ರಸಾದ್
ಚಿಕ್ಕಬಳ್ಳಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆ ಪ್ರತಿನಿತ್ಯ ನಡೆಯಬೇಕು, ಅವರ ಆದರ್ಶ ಮಾರ್ಗದರ್ಶಕ ತತ್ವಗಳನ್ನು ಪಾಲಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆ, ಮೈರಾಡ ಸಂಸ್ಥೆ, ಸೌಖ್ಯ ಸಂಜೀವಿನಿ ಸಂಸ್ಥೆ, ಉನ್ನತಿ ಸಮಗ್ರ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿಯವರ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ತ್ಯಾಗ, ಧರ್ಮ, ಸತ್ಯ, ಅಹಿಂಸೆಗೆ ಹೆಸರಾಗಿದ್ದ ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೇ ಸಲ್ಲುವಂತಹ ಮಹನೀಯರು ಎಂದರು. ವಕೀಲ ಟಿ.ಎನ್. ವಿಜಯಶಂಕರ ಮಾತನಾಡಿ, ಮನುಷ್ಯನಿಗೆ ಓದು ಮುಖ್ಯ. ಪ್ರಾಯೋಗಿಕ ಜ್ಞಾನ ಯಾರಿಗೆ ಇರುತ್ತದೆಯೋ ಅವನು ಜ್ಞಾನಿಯಾಗಲು ಸಾಧ್ಯ. ಗಾಂಧೀಜಿಯಂತೆ ನಾವು ಸಹಿತ ಸ್ವಾವಲಂಬಿ, ಆಶಾವಾದಿ ಆದರ್ಶ ವ್ಯಕ್ತಿಗಳಾಗಬೇಕು ಎಂದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಸರಳ ಸಜ್ಜನಿಕೆಯ ಆದರ್ಶ ಜೀವನ ನಡೆಸಿ ಎಲ್ಲರ ಪ್ರೀತಿ ಪಾತ್ರರಾಗಿದ್ದ ಗಾಂಧೀಜಿಯವರ ಬದುಕೇ ವಿಶಿಷ್ಟವಾದುದು ಎಂದರು. ಪ್ರಾಧ್ಯಾಪಕ ಡಾ. ಕೋಡಿರಂಗಪ್ಪ, ಉಪವಿಭಾಗಾಧಿಕಾರಿ ಕೆ. ಟಿಶಾಂತಲಾ ಮಾತನಾಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಾರಪ್ಪ ಹಾಗೂ ನಾರಾಯಣಪ್ಪರವರನ್ನು ಸನ್ಮಾನಿಸಲಾಯಿತು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎನ್. ಕವನ, ಮೈರಾಡ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟರೆಡ್ಡಿ, ಎನ್. ಗಿರಣಿ, ಉನ್ನತಿ ಸಮಗ್ರ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ದೇವಿಂದ್ರಪ್ಪ ಭಾಗವಹಿಸಿದ್ದರು.
ಅಸ್ತಮಾ ರೋಗಿಗಳಿಗೆ ಉಚಿತ ಚಿಕಿತ್ಸಾ ಶಿಬಿರ
ಮಾಲೂರು: ತಾಲೂಕಿನ ಸಂತೇಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಆನಂದ್ ಮಾರ್ಗ ಪಾಲಿಟೆಕ್ನಿಕ್ನಲ್ಲಿ ಆನಂದ್ ಮಾರ್ಗ ಯೂನಿವರ್ಸಲ್ ರಿಲೀಫ್ ಆಶ್ರಯದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ಕಾಲೇಜಿನ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರದ್ಧಾ ಪೌರ್ಣಿಮೆ ಅಂಗವಾಗಿ ಗುರುವಾರ ಮಧ್ಯರಾತ್ರಿ 12 ಗಂಟೆಗೆ ಸಂಸ್ಥೆಯ ಆಡಳಿತಾಧಿಕಾರಿ ಅಚಾರ್ಯ ಧರ್ಮಪ್ರಾಣನಂದ ಅವಧೂತರು ಶಿಬಿರಾರ್ಥಿಗಳಿಗೆ ಔಷಧಿ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಮನುಷ್ಯ ಆರೋಗ್ಯವಿದ್ದರೆ ಗುರಿ ಮುಟ್ಟಲು ಸಾಧ್ಯ. ಪ್ರತಿಯೊಬ್ಬರು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.
ತಾಲೂಕಿನ 300 ಕ್ಕೂ ಹೆಚ್ಚು ರೋಗಿಗಳು ಹಾಜರಿದ್ದರು. 2 ಗಂಟೆ ಉಪವಾಸ ನಂತರ ರೋಗಿಗಳಿಗೆ ಔಷಧೋಪಚಾರ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಆಚಾರ್ಯ ಸರ್ವಗಾನಂದ ಅವಧೂತ, ಪಿ. ಶ್ರೀನಿವಾಸ್, ಶ್ರೀರಾಮಯ್ಯ, ಬಿ.ವಿ. ನಾರಾಯಣಸ್ವಾಮಿ, ಎಚ್.ಎಂ. ಮುನಿರೆಡ್ಡಿ, ಅರುಣ್, ಚೇತನ್, ವೆಂಕಟಸ್ವಾಮಿ, ಪಿಳೈ, ಪುರಸಭೆ ಸದಸ್ಯ ಮಾಲದ್ರಿ, ಮುನಿವೆಂಕಟಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

