ಮಗು ಮಾರಾಟ; ನ್ಯಾಯಾಂಗ ಬಂಧನದಲ್ಲಿ ಗುರೂಜಿ
ಚಿಕ್ಕಬಳ್ಳಾಪುರ: ಮಗುವನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ತಾಲೂಕಿನ ಬಾಪನಹಳ್ಳಿಯ ಶಾಪವಿಮೋಚನೇಶ್ವರ ಸ್ವಾಮಿ ಆಶ್ರಮದ ಶ್ರೀನಿವಾಸ ಗುರೂಜಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಅ.31 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಶುಕ್ರವಾರ ತಮ್ಮ ಆಶ್ರಮದಲ್ಲಿ ಹೆಣ್ಣು ಮಗವೊಂದನ್ನು 25 ಸಾವಿರ ರು.ಗಳಿಗೆ ಮಾರಾಟ ಮಾಡುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ಥಳೀಯ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಇವರೊಂದಿಗೆ ಮಗುವಿನ ಮಾರಾಟದ ದಂಧೆಯಲ್ಲಿ ಭಾಗವಹಿಸಿದ್ದ ಮುರಳಿ, ರೀನಾ, ಗಾಡ್ಲೀಸ್ರನ್ನು ಬಂಧಿಸಲಾಗಿತ್ತು.
ಈವರೆಗೂ ಸುಮಾರು 100 ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ್ದು ದಂಧೆಗಾಗಿ ಮಕ್ಕಳನ್ನು ಕದ್ದುಕೊಂಡು ಬರಲಾಗುತ್ತಿತ್ತು ಎನ್ನಲಾಗಿದೆ. ಇದರ ಸುಳಿವನ್ನು ಪಡೆದು ಕಾರ್ಯಾಚರಣೆ ನಡೆಸಿದಾಗ ಈತನ ಬಂಡವಾಳ ಬಯಲಿಗೆ ಬಂದಿದೆ.
ಶನಿವಾರ ಪೊಲೀಸರು ಬಿಗಿ ಬಂದೋ ಬಸ್ತ್ನೊಂದಿಗೆ ಗುರೂಜಿ, ಮುರಳಿ, ರೀನಾ, ಗ್ಲಾಡೀಸ್ ಅವರನ್ನು ಜೆಎಂಎಫ್ಸಿ ನ್ಯಾಯಾಧೀಶರಾದ ನಳಿನಾರವರ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು ಆರೋಪಿಗಳನ್ನು ಅ.31 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳ ಪರ ವಕೀಲ ಪಿ. ಸುಬ್ರಮಣಿ ವಾದ ಮಂಡಿಸುತ್ತಿದ್ದಾರೆ.
ಮಗುವಿಗೆ ಆರೈಕೆ: ಈ ನಡುವೆ ದಂಧೆಗೆ ಬಳಸಲಾಗಿದ್ದ ಹೆಣ್ಣು ಮಗುವಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹಾರೈಕೆ ಮಾಡುತ್ತಿದ್ದು, ಮಗುವಿನ ನಿಜವಾದ ಪೋಷಕರಿಗಾಗಿ ಹುಡುಕಾಟ ನಡೆಯುತ್ತಿದೆ. ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಮಗುವನ್ನು ಕದ್ದುಕೊಂಡು ಬರಲಾಗಿದೆಯೇ ಗುರೂಜಿಗೆ ಮಗು ಹೇಗೆ ಸಿಕ್ಕಿತ್ತು ಎನ್ನುವುದು ಸೇರಿದಂತೆ ಇತರೆ ಮಾಹಿತಿಗಳನ್ನು ಕಲೆ ಹಾಕುವ ಕೆಲಸದಲ್ಲಿದ್ದಾರೆ. ಹಸುಗೂಸುಗಳನ್ನು ಮಾರಾಟ ಮಾಡುತ್ತಿದ್ದ ಈ ದಂಧೆ ರಾಜ್ಯಾದ್ಯಂತ ಗಮನ ಸೆಳೆದಿದ್ದು ಪ್ರಕರಣದ ಹಿಂದಿರುವ ದೊಡ್ಡ ಜಾಲವನ್ನು ಭೇದಿಸಲು ಪೊಲೀಸರು ವಿಶೇಷ ಒತ್ತು ಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

