'ಸಬ್ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ ಬೇಡ'
ಮುಳಬಾಗಲು: ತಾಲೂಕಿನ ಸರ್ಕಾರಿ ಕಚೇರಿಗಳಾದ ಮಿನಿವಿಧಾನಸೌಧ, ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಉಪನೋಂದಣಾಧಿಕಾರಿಗಳ ಕಚೇರಿಗೆ ಶನಿವಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರಿಸದೆ ಈಗಿರುವ ಕಟ್ಟಡವನ್ನು ನವೀಕರಿಸಲು ಸೂಚಿಸಿದರು. ಮಿನಿವಿಧಾನ ಸೌಧದದಲ್ಲಿ ಅಧಿಕಾರಿಗಳು ವೃದ್ಧಾಪ್ಯವೇತನ, ವಿಧಾವ ವೇತನ ಮತ್ತು ಅಂಗವಿಕಲ ವೇತನ ವಿಳಂಬ ಮಾಡದೇ ನೀಡಲು ಸೂಚಿಸಿದರು. ಕೃಷಿ ಇಲಾಖೆಗೆ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲಿಸಿದರು. ರೈತರಿಗೆ ಸರ್ಕಾರ ನೀಡುವ ಕಲ್ಟಿವೇಟರ್, ಸೀಮೆಎಣ್ಣೆ, ಎಂಜಿನ್, ರಸಗೊಬ್ಬರ ಔಷಧಿಗಳು, ಬಿತ್ತನೆ ಬೀಜ ಮುಂತಾದ ಲಕ್ಷಾಂತರ ರುಪಾಯಿಗಳ ಯೋಜನೆಗಳನ್ನು ರೈತರಿಗೆ ನೇರವಾಗಿ ತಲುಪಿಸಿ ಮಧ್ಯವರ್ತಿಗಳನ್ನು ದೂರವಿಡಲು ಸೂಚಿಸಿದರು.
ರಾಷ್ಟ್ರದ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿ
ಶಿಡ್ಲಘಟ್ಟ: ಯುವಜನತೆ ನಾಡಿನ ಬೆನ್ನೆಲುಬಾಗಿದ್ದು ರಾಷ್ಟ್ರದ ಸಮಸ್ಯೆ ನಿವಾರಣೆಗೆ ಪ್ರಮುಖ ಪಾತ್ರ ವಹಿಸಿ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿ ಡಿ. ಚನ್ನರಾಯಪ್ಪ ಕರೆ ನೀಡಿದರು. ಪಟ್ಟಣದ ದಿ ಕ್ರೆಸೆಂಟ್ ಶಾಲೆಯಲ್ಲಿ ಕೋಲಾರದ ನೆಹರು ಯುವ ಕೇಂದ್ರ ಹಾಗೂ ಸ್ಥಳೀಯ ಪಾವಟರ್ ಎಲಿಮಿನೇಷನ್ ರಿಹ್ಯಾಬಿಲಿಟೇಶನ್ ಆ್ಯಂಡ್ ಲಿಬರೇಶನ್ ಯುತ್ ವೆಲ್ಫೇರ್ ಸೊಸೈಟಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ 3 ದಿನಗಳ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಜನತೆ ಇಚ್ಛಾಶಕ್ತಿ, ಸಕ್ರಿಯ ಪಾಲ್ಗೊಳ್ಳುವಿಕೆ, ಸಮಯ ಪಾಲನೆ, ಆತ್ಮವಿಶ್ವಾಸ, ಭಾಷಾ ಸಾಮರ್ಥ್ಯ ಮೊದಲಾದ ಗುಣಗಳನ್ನು ಮೈಗೂಡಿಸಿಕೊಂಡು ನಿರಾಸಕ್ತಿ, ಕೀಳರಿಮೆ ದೂರಮಾಡಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕ ು ಎಂದರು.
ಪುರಸಭೆಯ ಎಸ್.ಜೆ.ಎಸ್.ಆರ್.ವೈ ಯುವಜನತೆಯ ಸ್ವಯಂ ಉದ್ಯೋಗ ಘಟಕದ ಅಡಿ ನಿರುದ್ಯೋಗಿ ಯುವಕ, ಯುವತಿಯರಿಗೆ ಹಲವಾರು ತರಬೇತಿ ಕಾರ್ಯಕ್ರಮ ನೀಡಿ ಪರವಾನಗಿಯನ್ನು ಉಚಿತವಾಗಿ ಕೊಡಿಸಿ ಬ್ಯಾಂಕ್ ಸಹಕಾರದೊಂದಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಅಕ್ರಮ ಮರಳು; ಎಂಜಿನ್ ನಾಶ
ಮುಳಬಾಗಲು: ತಾಲೂಕಿನ ಆರ್. ಗಡ್ದೂರು, ಗುಮ್ಮಕಲ್ಲು ಗ್ರಾಮಗಳಲ್ಲಿ ಕಂದಾಯ, ಪೊಲೀಸು ಇಲಾಖೆ ವತಿಯಿಂದ ಶನಿವಾರ ನಡೆದ ದಾಳಿಯಲ್ಲಿ ಅಕ್ರಮ ಮರಳು ಫೀಲ್ಟರ್ ತಯಾರು ಮಾಡಲು ನಿಯೋಜಿಸಿದ್ದ ಎರಡು ಎಂಜಿನ್ಗಳನ್ನು ನಾಶ ಪಡಿಸಿದರು. ಕೋಲಾರ ಕ್ರೈಮ್ ಸಬ್ ಇನ್ಸ್ ಪೆಕ್ಟರ್ ಮಹದೇವಯ್ಯ, ಕಂದಾಯ ನಿರೀಕ್ಷಕ ಬಿ.ವಿ. ರೆಡ್ಡಪ್ಪಗುಪ್ತ ಹಾಗೂ ಸಿಬ್ಬಂದಿ ಭಾವಗವಹಿಸಿದ್ದರು.
ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕರು
ಕೆಜಿಎಫ್: ಶಾಸಕರಾಗಿ ಆಯ್ಕೆಯಾಗಿ ಆರು ತಿಂಗಳು ಕಳೆದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಎಸ್. ರಾಜೇಂದ್ರನ್ ಆರೋಪಿಸಿದರು.
ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಪ್ರಿಚರ್ಡ್ರಸ್ತೆಯಲ್ಲಿ ಏರ್ಪಡಿಸಿದ್ದ ಬಹಿರಂಗ ಸಬೆಯಲ್ಲಿ ಮಾತನಾಡಿ, ನಗರದಲ್ಲಿ ರಸ್ತೆಗಳು ಹದೆಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ, ನಗರದ ಹಾಗೂ ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶದಲ್ಲಿ ಯಾವುದೇ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕೈಗೊಂಡಿಲ್ಲ ಎಂದರು.
ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಗರಸಭೆ ರಸ್ತೆಯ ದುರಸ್ತಿಗೆ ಶಾಸಕಿ ವೈ. ರಾಮಕ್ಕ ಹಾಗೂ ನಗರಸಭೆ ಪೌರಾಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಎಂ.ಜಿ. ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆಯಿಲ್ಲದೆ ದುರ್ವಾಸನೆಯಿಂದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಮೂಗುಮುಚ್ಚಿಕೊಂಡು ಒಡಾಡುವಂತಾಗಿದ್ದರು ಪೌರಾಯುಕ್ತರು ಕಣ್ಮುಚ್ಚಿ ಕುಳುತ್ತಿದ್ದಾರೆ. ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇತಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

