ಅಧಿಕಾರಿಗಳ ನಿರ್ಲಕ್ಷ್ಯ; ಸಾರ್ವಜನಿಕರಿಗೆ ತೊಂದರೆ
-ಎನ್. ಬಾಬು
ಚಿಂತಾಮಣಿ: ರಸ್ತೆ ಮತ್ತು ಒಳ ಚರಂಡಿ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರನ ಬೇಜವಾಬ್ದಾರಿತನಕ್ಕೆ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕೋಲಾರ ಕ್ರಾಸ್ ಬಳಿ ಒಳ ಚರಂಡಿ ಕಾಮಗಾರಿ ಕಳೆದ 2 ತಿಂಗಳಿಂದ ಆಮೆ ವೇಗದಲ್ಲಿ ಸಾಗುತ್ತಿದ್ದು, ದಿನನಿತ್ಯ ಈ ಮಾರ್ಗದಲ್ಲಿ ಓಡಾಡುವ ವಾಹನಗಳಿಂದ ದೂಳು ಎದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದೆ ಬೇಜವಾಬ್ದಾರಿತನ ಮೆರೆದಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಅಪಘಾತ ವಲಯ; ಕೋಲಾರ ಹಾಗೂ ಶ್ರೀನಿವಾಸಪುರ ಮಾರ್ಗವಾದ ಈ ರಸ್ತೆಯಲ್ಲಿ ರಾತ್ರಿ ವೇಳೆ ಬರುವ ದ್ವಿಚಕ್ರ ವಾಹನ ಸವಾರರಿಗೆ ಹಳ್ಳ ಗುಂಡಿಗಳಿಂದ ಬಿದ್ದು ಅಪಘಾತಗಳಾಗಿ ಆಸ್ಪತ್ರೆಯಲ್ಲಿ ಸೇರಿರುವ ಉದಾಹರಣೆಗಳು ಇವೆ.
ರಸ್ತೆಯಲ್ಲಿ ದೂಳು ಮೇಲೇಳದಂತೆ ನಿತ್ಯ ಈ ಮಾರ್ಗದಲ್ಲಿ ನೀರು ಹಾಕುವ ಗೋಜಿಗೆ ಹೋಗದ ಕಾಮಗಾರಿ ಗುತ್ತಿಗೆದಾರನ ವಿರುದ್ಧ ನಾಗರಿಕರು ಕಿಡಿ ಕಾರಿದ್ದಾರೆ.
ಹೈಮಾಸ್ಕ್ ದೀಪಗಳು ಇದ್ದು ಇಲ್ಲದಂತಾಗಿದೆ: ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಮಾರ್ಗವಾಗಿರುವ ಈ ಭಾಗದಲ್ಲಿ ರಾತ್ರಿ ವೇಳೆ ಕೋಲಾರ ಕ್ರಾಸ್ ವೃತ್ತದ ಬಳಿ ಇರುವ ಹೈಮಾಸ್ಕ್ ದೀಪಗಳು ಬೆಳಕು ಕಾಣದೆ ಇದ್ದು ಇಲ್ಲವಂತಾಗಿದೆ ಎಂದು ಸ್ಥಳೀಯ ನಿವಾಸಿಗಳ ಟೀಕೆಗೆ ಗುರಿಯಾಗಿದೆ.ಸ್ಪೀಡ್ ಬ್ರೇಕರ್‌ಗಳ ಬಳಿ ಸಂಚಾರಿ ನಿಯಮಗಳ ಸೂಚನಾ ಫಲಕಗಳಿಲ್ಲದೆ ದ್ವಿಚಕ್ರ ವಾಹನಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿರುವ ಘಟನೆಗಳು ಹೆಚ್ಚಾಗುತ್ತಿವೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಹೈಮಾಸ್ಕ್ ದೀಪಗಳು ಬೆಳಕು ಚೆಲ್ಲಿ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

