ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕ.ಪ್ರ.ವಾರ್ತೆ ಚಿಂತಾಮಣಿ ಅ. 20
ಹೊರ ದೇಶಗಳ ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಲು, ಬೈಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸಲು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರೈತರ ಸಮಾವೇಶವನ್ನು 28 ರಂದು ಬೆಂಗಳೂರು ಪ್ರೀಡಂಪಾರ್ಕ್ಲ್ಲಿ ಹಮ್ಮಿಕೊಳ್ಳಲಾಗಿದೆ ಘಿಂದು ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕಿ ಪಾರ್ವತಮ್ಮ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಗುಳೇ ತಪ್ಪಿಸಲು, ಬರ ನಿರ್ಮೂಲನೆ ಮಾಡಿ ಹಳ್ಳಿಗಳನ್ನು ಆರ್ಥಿಕವಾಗಿ ಭದ್ರಪಡಿಸಲು 28 ರಂದು ತಾಲೂಕಿನಿಂದ ರೈತರು, ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಬೈಲು ಸೀಮೆ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಡಾ. ಪರಮಶಿವಯ್ಶ ವರದಿ ಜಾರಿಗೆ ಒತ್ತಾಯಿಸಿ ತಾಲೂಕಿನ ರೈತರು ಸಮಾವೇಶದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ಕೋಲಾರ ಜಿಲ್ಲಾ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಸಂಚಾಲಕಿ ಅನುಸೂಯಮ್ಮ, ಎಸ್.ವಿ. ಗಂಗುಲಪ್ಪ, ಶ್ರೀರಾಮರೆಡ್ಡಿ, ಗೌಸ್ಪೀರ್, ವೆಂಕಟರವಣಪ್ಪ, ನಾರಾಯಣಸ್ವಾಮಿ, ಮಹಮದ್ ಖಾಲಿದ್, ರೆಡ್ಡಪ್ಪ, ಪ್ರೇಮಲತ, ವೆಂಕಟೇಶಪ್ಪ, ವೆಂಕಟರೆಡ್ಡಿ, ಗೋಪಾಲ ಇದ್ದರು.
ಬಸ್ ನಿಲ್ದಾಣದಲ್ಲಿ ಉಡಗಳ ಪತ್ತೆ
ಕೋಲಾರ: ನಗರದ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಭಾನುವಾರ ಹಲ್ಲಿಯ ಜಾತಿಗೆ ಸೇರಿದ ಎಂಟು ದೊಡ್ಡ ಉಡಗಳು ಪತ್ತೆಯಾಗಿದೆ. ಬೆಂಗಳೂರು-ಸಿರಗುಪ್ಪಗೆ ಹೋಗುವ ಬಸ್ಸಿನಲ್ಲಿ ಉಡಗಳನ್ನು ತುಂಬಿದ್ದ ಚೀಲ ಕಾಣಿಸಿದ್ದು ಇದರಿಂದ ಭಯ ಭೀತರಾದ ಪ್ರಯಾಣಿಕರು ಬಸ್ಸಿನ ಚಾಲಕ ಮತ್ತು ನಿರ್ವಹಕರಿಗೆ ತಿಳಿಸಿದ್ದಾರೆ. ಚೀಲ ಅಲುಗಾಡುತ್ತಿದ್ದನ್ನು ಗಮನಿಸಿದ ಜನರು ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಧೈರ್ಯ ಮಾಡಿ ಚೀಲಕ್ಕೆ ಕಟ್ಟಿದ್ದ ದಾರವನ್ನು ಬಿಚ್ಚಿದಾಗ ಉಡಗಳು ಪತ್ತೆಯಾಗಿವೆ.
ತಕ್ಷಣ ಅರಣ್ಯ ಇಲಾಖೆಯವರಿಗೆ ತಿಳಿಸಿದಾಗ ಸಿಬ್ಬಂದಿ ಆಗಮಿಸಿ ಉಡಗಳನ್ನು ಅರಣ್ಯ ಇಲಾಖೆಯ ಕಚೇರಿಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ 8 ಉಡಗಳಿಗೂ ಹಗ್ಗದಿಂದ ಬಿಗಿಯಲಾಗಿತ್ತು. ನಿತ್ರಾಂಣಗೊಂಡಿದ್ದ ಉಡಗಳಿಗೆ ಅರಣ್ಯ ಸಿಬ್ಬಂದಿ ಕೆಲ ಕಾಲ ಆರೈಕೆ ಮಾಡಿದರು. ಕೆಲ ಉಡಗಳು ಉಸಿರಿನ ತೊಂದರೆಯಿಂದ ಬಳಲಿತ್ತು. ಇವುಗಳಿಗೆ ಚಿಕಿತ್ಸೆ ನೀಡಲಾಯಿತು.ಕಾಡಿನಲ್ಲಿ ಕಾಣುವ ಉಡಗಳನ್ನು ಸಾಗಣೆ ಮಾಡಲು ಯತ್ನಿಸಿದವರು ಯಾರು ಎಂದು ಪೊಲೀಸರು ಬಸ್ಸು ನಿಲ್ದಾಣದಲ್ಲಿ ಶೋಧನೆ ಮಾಡಿದರಾದರೂ ಆರೋಪಿಗಳು ಕಾಣಲಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

